ದೊಡ್ಡಬಳ್ಳಾಪುರ (Doddaballapura): ಸುಮಾರು 4-5 ವರ್ಷದ ಹೆಣ್ಣು ಮಗುವೊಂದು ವಿಳಾಸ ತಪ್ಪಿದ್ದು, ಸಾರ್ವಜನಿಕರು ನಗರದ ಮಹಿಳಾ ಪೊಲೀಸ್ ಠಾಣೆಗೆ ಸಿಬ್ಬಂದಿಗಳಿಗೆ ನೀಡಿದ್ದಾರೆ.
ಬಾಲಕಿಯ ಹೆಸರು ನಂದಿನಿ ಎನ್ನಲಾಗುತ್ತಿದ್ದು, 4 ಅಥವಾ 5 ವರ್ಷ ಎಂದು ಅಂದಾಜಿಸಲಾಗಿದೆ. ಆದರೆ ವಿಳಾಸ ತಿಳಿದು ಬಂದಿಲ್ಲ.
ಈ ಬಾಲಕಿಯ ಪೋಷಕರು ಪತ್ತೆಯಾದಲ್ಲಿ ನಗರದ ಜಿ.ರಾಮೇಗೌಡ ವೃತ್ತದ ಸಮೀಪವಿರುವ ಮಹಿಳಾ ಪೊಲೀಸ್ ಠಾಣೆಯನ್ನು ಸಂಪರ್ಕಿಸಬಹುದಾಗಿದೆ.
ಅಥವಾ ಮೊಬೈಲ್ ಸಂಖ್ಯೆ 8277960670 ಸಂಪರ್ಕಿಸುವಂತೆ ಇನ್ಸ್ಪೆಕ್ಟರ್ ಡಾ.ಎಂ.ಬಿ.ನವೀನ್ ಕುಮಾರ್ ಹೇಳಿದ್ದಾರೆ.