ದೊಡ್ಡಬಳ್ಳಾಪುರ: ಆಕ್ಸೆಂಚರ್ (Accenture) ನೆರವಿನೊಂದಿಗೆ ಐಡಿಐಐ (Entrepreneurship Development Institute Of India) ಸಂಸ್ಥೆಯ ವತಿಯಿಂದ ಮಹಿಳೆಯರಿಗಾಗಿ (for women) 26 ದಿನಗಳ ಕಾಲ ಉಚಿತ ತರಬೇತಿ ಕಾರ್ಯಾಗಾರವನ್ನು (Free training workshop) ತಾಲೂಕಿನ ಆರೂಢಿ ಗ್ರಾಮದಲ್ಲಿ ಆಯೋಜಿಲಾಗುತ್ತಿದೆ ಎಂದು ಇಡಿಐಐ ಸಂಸ್ಥೆಯ ಯೋಜನೆ ಸಂಯೋಜಕಿ ಲಲಿತ ತಿಳಿಸಿದ್ದಾರೆ.
ಆರೂಢಿ ಗ್ರಾಮಪಂಚಾಯಿತಿ ಬಳಿ ಈ ತರಬೇತಿ ಕಾರ್ಯಾಗಾರವನ್ನು ನಾಳೆಯಿಂದ (ಅ.13) 26 ದಿನಗಳ ಕಾಲ ಆಯೋಜಿಸಲಾಗಿದೆ.
ಈ ಕಾರ್ಯಾಗಾರದಲ್ಲಿ ಮಹಿಳೆಯರಿಗೆ ಉಚಿತವಾಗಿ ಅಗರಬತ್ತಿ ತಯಾರಿಕೆ, ವಿವಿಧ ರೀತಿಯ ಧೂಪಗಳ ತಯಾರಿಕೆ ಹಾಗೂ ನೈಸರ್ಗಿಕ ಪೂಜಾ ಉತ್ಪಾದನ್ನಗಳ ತಯಾರಿಕೆ ಕುರಿತಂತೆ ತರಬೇತಿ ನೀಡಲಾಗುತ್ತಿದೆ.
ಕಾರ್ಯಾಗಾರಕ್ಕೆ ಸೀಮಿತ ಸೀಟುಗಳು ಮಾತ್ರ ಲಭ್ಯವಿದ್ದು, ಆರೂಢಿ ಗ್ರಾಮಪಂಚಾಯಿತಿಯ ಅಕ್ಕಪಕ್ಕದ ಗ್ರಾಮದ ಮಹಿಳೆಯರು ಭಾಗವಹಿಸಿ ಸೌಲಭ್ಯ ಪಡೆಯಬಹುದೆಂದು ಪ್ರಕಟಣೆಯಲ್ಲಿ ಕೋರಿದ್ದಾರೆ.