ಕನಕಪುರ: ವನ್ಯಜೀವಿ ಸಂರಕ್ಷಣೆಗಾಗಿ ಹೆಸರಾದ ಅರಣ್ಯ ಇಲಾಖೆ (Forest Department) ಅಧಿಕಾರಿಗಳು ಇಂದು ಮುಂಜಾನೆ ಸಾತನೂರು ಸರ್ಕಲ್ ಬಳಿ ನಡೆಸಿದ ರೋಚಕ ದಾಳಿಯಲ್ಲಿ ಅಕ್ರಮ ಬೇಟೆಯಾಟದಲ್ಲಿ ತೊಡಗಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.

ಕಾರಿನಲ್ಲಿ ಮುಳ್ಳುಹಂದಿಯನ್ನು ಸಾಗಿಸುತ್ತಿದ್ದ ಈ ಆರೋಪಿಗಳು, ವನ್ಯಜೀವಿ (ಸಂರಕ್ಷಣಾ) ಕಾಯ್ದೆ ಉಲ್ಲಂಘಿಸಿರುವ ಆರೋಪ ಎದುರಿಸುತ್ತಿದ್ದಾರೆ.
ಡಿಸಿಎಫ್ ಸುನಿತಾ ಬಾಯ್ ನೇತೃತ್ವದಲ್ಲಿ, ಅಪರಾಧ ನಿಯಂತ್ರಣ ಕೋಶ ಹಾಗೂ ಅರಣ್ಯ ಸಂಚಾರಿದಳ ರವರ ಜಂಟಿ ಕಾರ್ಯಾಚರಣೆ ಇಂದ ಅಟ್ಟಹಾಸದ ಬೇಟೆಗೆ ಬ್ರೇಕ್ ಹಾಕಿದೆ.
ಕಾರ್ಯಾಚರಣೆಯ ಸಮಯದಲ್ಲಿ, ಆರೋಪಿಗಳು ಕೃತ್ಯಕ್ಕೆ ಬಳಸಿದ್ದ Swift Dezire ಕಾರು, ಎರಡು ಬಂದೂಕುಗಳು, ಒಂದು ಕೊಡಲಿ, ಹಾಗೂ ಮದ್ದುಗುಂಡುಗಳು ವಶಪಡಿಸಿಕೊಳ್ಳಲಾಗಿದೆ.
ಮುಳ್ಳುಹಂದಿಯನ್ನು ಕಾರಿನ ಹಿಂಬಾಗದ ಡಿಕ್ಕಿಯಲ್ಲಿ ಅಡಗಿಸಿಕೊಂಡು ಸಾಗಿಸುತ್ತಿದ್ದ ವೇಳೆ ತಂಡ ಶಾಕ್ ಸರ್ವೇ ನಡೆಸಿ ಇವರನ್ನು ಪತ್ತೆಹಚ್ಚಿದೆ.
ಈ ದಾಳಿಯಲ್ಲಿ ಎಸಿಎಫ್ ಸರಿತ, ಚಿದಾನಂದ ಬಡಿಗೇರ್, ಸಿದ್ದರಾಜು, ಅಶ್ವಿನ್, ಆಶಾ, ಬಾಬು, ಚಾಲಕ ಮುನಿರಾಜು ಪಾಲ್ಗೊಂಡಿದ್ದರು.
ಕಠಿಣ ಕ್ರಮ ಅನಿವಾರ್ಯ
ಅಕ್ರಮ ಬೇಟೆ ಮತ್ತು ವನ್ಯಜೀವಿಗಳ ಕೊಲೆ ಪರಿಸರಕ್ಕೆ ಗಂಭೀರ ಅಪಾಯವನ್ನೇ ಸೃಷ್ಟಿಸುತ್ತದೆ. ಆದ್ದರಿಂದ, ಬಂಧಿತರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದಾಗಿ, ಅರಣ್ಯ ಸಂಪತ್ತು ಸಂರಕ್ಷಣೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಹಾಗೂ ಇಂತಹ ಅಪರಾಧಗಳನ್ನು ಮೂಲದಲ್ಲೇ ತಡೆಗಟ್ಟಲು ಇಲಾಖೆಯು ಇನ್ನಷ್ಟು ಗಟ್ಟಿಯಾದ ಕ್ರಮಗಳನ್ನು ಕೈಗೊಳ್ಳಲು ಸಿದ್ಧವಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.