
ಚಿಕ್ಕಬಳ್ಳಾಪುರ: ನೋಡ ನೋಡುತ್ತಿದ್ದಂತೆ ಟಿಪ್ಪರ್ ಲಾರಿಯೊಂದು (Tipper truck) ರಸ್ತೆ ಮದ್ಯೆ ಧಗ ಧಗನೆ ಹೊತ್ತಿ ಉರಿದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ತಾಲ್ಲೂಕಿನ ಬೀಚಗಾನಹಳ್ಳಿ ಸಮೀಪದ ರಾಮಗಾನಹಳ್ಳಿ ಬಳಿ ನಡೆದಿದೆ.
ಹೌದು ಟಿಪ್ಪರ್ ಲಾರಿ ಗವಿಕುಂಟಹಳ್ಳಿ ಕ್ವಾರಿಯಿಂದ ಕಲ್ಲುಗಳನ್ನ ತುಂಬಿಕೊಂಡು ವರ್ಲಕೊಂಡ ಕ್ರಷರ್ ಗೆ ಹೋಗುತ್ತಿದ್ದ ವೇಳೆ ರಾಮಗಾನಹಳ್ಳಿ ಗ್ರಾಮದ ಬಳಿ ಬರುತ್ತಿದ್ದಂತೆ ಟಿಪ್ಪರ್ ಲಾರಿಯಲ್ಲಿ ಶಾರ್ಟ್ ಸರ್ಕೂಟ್ ನಿಂದ ಬೆಂಕಿ ಕಾಣಿಸಿಕೊಂಡಿದೆ.
ಬೆಂಕಿ ಹೊತ್ತಿ ಉರಿಯುತ್ತಿದ್ದಂತೆ ತಕ್ಷಣ ಎಚ್ಚೆತ್ತ ಚಾಲಕ ಟಿಪ್ಪರ್ ಇಳಿದು ಪ್ರಾಣ ರಕ್ಷಿಸಿಕೊಂಡಿದ್ದಾನೆ.. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಬವಿಸಿಲ್ಲ.
ಸ್ಥಳೀಯರು ತಕ್ಷಣ ಅಗ್ನಿಶಾಮಕ ದಳಕ್ಕೆ ಮಾಹಿತಿ ತಿಳಿಸಿದ್ದು, ಕೂಡಲೇ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಗುಡಿಬಂಡೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ನಡೆದಿದೆ.