ದೊಡ್ಡಬಳ್ಳಾಪುರ: ಕೆರೆ ಸಮೀಪದ ಜಮೀನಿನಲ್ಲಿ ಮೇಕೆ ಮೇಸಲು ತೆರಳುತ್ತಿದ್ದಾಗ ಚಿರತೆ ದಾಳಿ (Leopard attack) ನಡೆಸಿರುವ ಘಟನೆ ತಾಲೂಕಿನ ಮಧುರೆ ಹೋಬಳಿಯ ಕುಕ್ಕನಹಳ್ಳಿ ಹಾಗೂ ಗಂಗಯ್ಯನಪಾಳ್ಯದ ಕೆರೆಯಂಗಳದ ಸಮೀಪ ಬೆಳಗ್ಗೆ ನಡೆದಿದ್ದು, ರೇವಣ್ಣ ಎಂಬ ರೈತನ ಮೇಕೆಯನ್ನು ಗಾಯಗೊಳಿಸಿದೆ.
ಚಿರತೆ ದಾಳಿಯನ್ನು ನೋಡಿದ ರೈತ ರೇವಣ್ಣನವರು ಕಿರುಚಾಡಿ, ಚಿರತೆಯನ್ನು ಓಡಿಸಿದ್ದಾರೆ. ಪ್ರಸ್ತುತ ಚಿರತೆಯು ಕೆರೆ ಅಂಗಳದಲ್ಲಿ ಅಡಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಈ ಕುರಿತಂತೆ ಬೆಂಗಳೂರು ಉತ್ತರ ತಾಲೂಕು ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಲಾಗಿದ್ದು, ಸ್ಥಳಕ್ಕೆ ತೆರಳುತ್ತಿದ್ದಾರೆ ಎಂದು ತಿಳಿದು ಬಂದಿದೆ. (ಸಾಂದರ್ಭಿಕ ಚಿತ್ರ ಬಳಸಲಾಗಿದೆ)