ಬೆಂ.ಗ್ರಾ.ಜಿಲ್ಲೆ: ಮಂಗಳವಾರವಷ್ಟೆ, ಒಬ್ಬಟ್ಟು ತಿಂದು ಭರ್ಜರಿಯಾಗಿಯೇ ಯುಗಾದಿ ಹಬ್ಬ ಆಚರಿಸಿದ್ದ ಜಿಲ್ಲೆಯ ಜನರು. ಯುಗಾದಿಯ ನಂತರ ಮೊದಲ ಬಾಡೂಟ ಸವಿಯುವ ಆಚರಣೆ, ಸಂಪ್ರದಾಯದ ಹೊಸತೊಡಕು ಆಚರಣೆ ಅಬ್ಬರವಾಗಿ ನಡೆಸುತ್ತಿದ್ದಾರೆ.
ಮಾಂಸ ಮಾರಾಟ ಬಲು ಜೋರು: ಜಿಲ್ಲೆಯಾದ್ಯಂತ ಬಹುತೇಕ ಅಂಗಡಿ ಮುಂಗಟ್ಟುಗಳು ಮುಚ್ಚಲ್ಪಟ್ಟಿದ್ದರೂ ಮಾಂಸದಂಗಡಿಗಳ ಮಾರಾಟ ಜೋರಾಗಿ ನಡೆಯಿತ್ತಿದೆ. ಕುರಿ, ಮೇಕೆ, ಕೋಳಿ ಮತ್ತು ಮೀನಿನ ಮಾಂಸದ ಖರೀದಿಗೆ ಬೆಳಿಗ್ಗೆಯಿಂದಲೇ ಜನದಟ್ಟಣೆ ಕಂಡು ಬರುತ್ತಿದೆ.
ಕುರಿ ಮತ್ತು ಮೇಕೆ ಮಾಂಸ ಕೆ.ಜಿ.ಗೆ ರೂ700 ರಿಂದ 750ಕ್ಕೆ ಮಾರಾಟವಾದರೆ, ಇನ್ನೂ ಗ್ರಾಮೀಣ ಭಾಗದಲ್ಲಿ ಗುಡ್ಡೆ ಮಾಂಸ 550ಕ್ಕೆ ಮಾರಲಾಗಿದೆ. ಕೋಳಿ ಮಾಂಸವು ಕೆ.ಜಿ.ಗೆ ರೂ 150 ರಿಂದ 200ಕ್ಕೆ ಮಾರಾಟವಾಯಿತು. ಮೀನುಗಳ ಖರೀದಿಯೂ ಜೋರಾಗಿ ನಡೆಯಿತು.
ವರ್ಷದ ಹೊಸ ತೊಡಕಿಗೆ ಸಹಜ ವ್ಯಾಪಾರವಾಗುವುದು ಎಂಬ ನಿರೀಕ್ಷೆಯಿತ್ತು. ಆದರೆ ಈ ಬಾರಿ ನಿರೀಕ್ಷೆಗೂ ಮೀರಿ ವ್ಯಾಪಾರ ನಡೆದಿದೆ. ಕರೊನಾ ಕಾರಣ ಕಳೆದ ವರ್ಷ ತೊಡಕಿಗೆ ತೊಡಕಾಗಿತ್ತುದ್ದು, ಈ ವರ್ಷ ವ್ಯಾಪಾರ ಉತ್ತಮವಾಗಿದೆ ಎಂದು ಮಾಂಸ ಮಾರಾಟಗಾರು ತಿಳಿಸಿದ್ದಾರೆ.
ಮಾಂಸದ ಚೀಟಿ: ದೀಪಾವಳಿಯಲ್ಲಿ ಪಟಾಕಿ ಚೀಟಿ ರೀತಿಯಲ್ಲಿ ಯುಗಾದಿಯ ಮಾಂಸಕ್ಕಾಗಿ ವರ್ಷದ ಪ್ರತಿ ತಿಂಗಳೂ ಚೀಟಿ ಹಣ ಕಟ್ಟಿಸಿಕೊಂಡು ಸಾವಿರ ರೂ.ಗೂ ಮೇಲ್ಪಟ್ಟ ತೂಕದ ಮಾಂಸ ಮತ್ತು ಕೆಲವು ಉಡುಗೊರೆಗಳನ್ನು ನೀಡುವ ವಿಶಿಷ್ಟ ಪದ್ಧತಿಯೂ ಗ್ರಾಮೀಣ ಪ್ರದೇಶಗಳಲ್ಲಿ ರೂಢಿ ಈ ವರ್ಷವೂ ಮುಂದುವರೆದಿದೆ.
ಒಟ್ಟಾರೆ ಯುಗಾದಿ ನಂತರ ಆಚರಿಸುವ ಹೊಸತೊಡಕು ಅಬ್ಬರ ಶುರುವಾಗಿದೆ, ಎಲ್ಲೆಲ್ಲೂ ಬಾಡೂಟದ ಘಮಲು ಇಡೀ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಪಸರಿಸಲಾರಂಭಿಸಿದೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..