ದೊಡ್ಡಬಳ್ಳಾಪುರ: ಕೋವಿಡ್-19 ಸೋಂಕಿತರ ಚಿಕಿತ್ಸೆಗೆ ಅಗತ್ಯವಾಗಿರುವ ಆಕ್ಸಿಜನ್ ಪೂರೈಕೆಯಲ್ಲಿ ಯಾವುದೇ ಲೋಪವಾಗದಂತೆ ಸರಬರಾಜು ಮಾಡಬೇಕೆಂದು ಶಾಸಕ ಟಿ.ವೆಂಕಟರಮಣಯ್ಯ ಆಕ್ಸಿಜನ್ ತಯಾರಿಕಾ ಘಟಕದ ಮುಖ್ಯಸ್ಥರಿಗೆ ಸೂಚನೆ ನೀಡಿದರು.
ನಗರದ ಎಪಿಎಂಸಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ, ತಾಲೂಕಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಆಕ್ಸಿಜನ್ ತಯಾರಿಕ ಘಟಕ ಪ್ರಾಕ್ಸಿಆರ್ ಕಂಪನಿಯ ಮುಖ್ಯಸ್ಥರಿಗೆ ಈ ಕುರಿತು ಸಲಹೆ ನೀಡಿದ ಅವರು, ಕೋವಿಡ್-19 ಸೋಂಕಿತರ ಚಿಕಿತ್ಸೆಗೆ ಆಕ್ಸಿಜನ್ ಅಗತ್ಯವಾಗಿದೆ, ತಾಲೂಕಿಗೆ ಅಗತ್ಯವಿರುವಷ್ಟು ಪೂರಕವಾದ ಆಕ್ಸಿಜನ್ ಸರಬರಾಜು ಮಾಡುವ ಹೊಣೆ ನಿಮ್ಮದಾಗಿದೆ.
ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಘಟಕ ಸ್ಥಾಪಿಸಿ ಕಾರ್ಯನಿರ್ವಹಸುತ್ತಿರುವ ಪ್ರಾಕ್ಸಿಆರ್ ಸಂಸ್ಥೆಗೆ, ತಾಲೂಕಿನ ಜನರಿಗೆ ನೆರವಾಗಬೇಕಾದ ಸಮಯ ಇದಾಗಿದ್ದು, ತಾಲೂಕಿನ ಕೋವಿಡ್ ಸೋಂಕಿತರ ಚಿಕಿತ್ಸೆಗೆ ಕೊರತೆಯಾಗದಂತೆ ಆಕ್ಸಿಜನ್ ಪೂರೈಸಿ. ನಂತರ ಇತರೆಡೆಗೆ ಸರಬರಾಜು ಮಾಡಬೇಕೆಂದರು.
ಸಭೆಯಲ್ಲಿ ತಹಶಿಲ್ದಾರ್ ಟಿ.ಎಸ್.ಶಿವರಾಜ್, ತಾಲೂಕು ಆರೋಗ್ಯಾಧಿಕಾರಿ ಡಾ.ಪರಮೇಶ್ವರ, ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ರಮೇಶ್ ಮತ್ತಿತರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್, ಕೂ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….