
ಬೆಂ.ಗ್ರಾ.ಜಿಲ್ಲೆ: ಜಿಲ್ಲೆಯಲ್ಲಿ ಕೋವಿಡ್ ನಿಂದ ಬುಲೆಟಿನ್ 395 ಜನ ಗುಣಮುಖರಾಗಿದ್ದು, ಹೊಸದಾಗಿ 704 ಕರೊನಾ ಪ್ರಕರಣಗಳು ಹಾಗೂ ಏಳು ಮೃತ ಪ್ರಕರಣಗಳು ಸೋಮವಾರ ವರದಿಯಾಗಿದೆ.
ಬುಲೆಟಿನ್ ವರದಿಯನ್ವಯ ದೊಡ್ಡಬಳ್ಳಾಪುರ ತಾಲೂಕಿನ 207 ಪುರುಷರು, 124 ಮಹಿಳೆಯರು ಸೇರಿ 331 ಮಂದಿ. ದೇವನಹಳ್ಳಿ ತಾಲೂಕಿನ 62 ಪುರುಷರು, 58 ಮಹಿಳೆಯರು ಸೇರಿ 120. ನೆಲಮಂಗಲ ತಾಲೂಕಿನ 59 ಪುರುಷರು, 38 ಮಂದಿ ಮಹಿಳೆಯರು ಸೇರಿ 97 ಹಾಗೂ ಹೊಸಕೋಟೆ ತಾಲೂಕಿನ 92 ಪುರುಷರು, 53 ಮಹಿಳೆಯರು ಸೇರಿ 145 ಮತ್ತು ಅನ್ಯ ಜಿಲ್ಲೆಯವರು ಸೇರಿದಂತೆ ಬೆಂ.ಗ್ರಾ.ಜಿಲ್ಲೆಯಲ್ಲಿ 704 ಜನರಿಗೆ ಸೋಂಕು ದೃಢಪಟ್ಟಿದೆ ಎನ್ನಲಾಗಿದೆ.
ಪ್ರಸ್ತುತ ಜಿಲ್ಲೆಯಲ್ಲಿ 1144 ಮಂದಿ ಸೋಂಕಿತರಿಗೆ ನಿಗಾ ಘಟಕದಲ್ಲಿಡಲಾಗಿದೆ ಎನ್ನಲಾಗುತ್ತಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 13113 ಕ್ಕೆ ಏರಿಕೆಯಾಗಿದ್ದರೆ, 15895 ಮಂದಿಯನ್ನು ಕಡ್ಡಾಯ ಗೃಹ ಬಂಧನದಲ್ಲಿ ಇಡಲಾಗಿದೆ. ಹಾಗೂ 395 ಮಂದಿ ಗುಣಮುಖರಾಗಿ ಮನೆಗೆ ಮರಳಿದ್ದಾರೆ.
ಆರೋಗ್ಯ ಇಲಾಖೆಯಿಂದ ತಪಾಸಣೆ ತೀವ್ರವಾಗಿ ನಡೆಸಲಾಗುತ್ತಿದ್ದು, ಇಂದಿನ ವರದಿಯ ಪ್ರಕಾರ 4926 ಮಂದಿಯ ಮಂದಿಯ ಫಲಿತಾಂಶ ಬಾಕಿ ಉಳಿದಿದೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….