
ದೊಡ್ಡಬಳ್ಳಾಪುರ: ದೇಶಿಯ ಗೋವು ಆಧಾರಿತ ಕೃಷಿಯನ್ನು ರೈತರು ಅವಳವಡಿಸಿಕೊಂಡರೆ ಮಾತ್ರ ಮುಂದಿನ ಪೀಳಿಗೆಗೆ ಉತ್ತಮ ಗುಣ ಮಟ್ಟದ ಆಹಾರ ನೀಡಲು ಸಾಧ್ಯವಾಗುತ್ತದೆ ಎಂದು ವಿಆರ್ಎಲ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ವಿಜಯ ಸಂಕೇಶ್ವರ ಹೇಳಿದರು.
ತಾಲೂಕಿನ ಶ್ರೀ ಸುಬ್ರಮಣ್ಯ ಘಾಟಿ ಕ್ಷೇತ್ರದಲ್ಲಿರುವ ರಾಷ್ಟ್ರೋತ್ಥಾನ ಪರಿಷತ್ನ ಗೋಶಾಲೆಯಲ್ಲಿ 7 ದಿನಗಳ ಬೃಂದಾವನ ಕೃಷಿ ಅರಣ್ಯ ಯೋಜನೆಯ ಸಸಿ ನೆಡು ಸಪ್ತಾಹದ 4ನೇ ದಿನದ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಗೋವು ಪೂಜೆಗೆ ಅಷ್ಟೆ ಸೀಮಿತವಾಗದೆ, ಗೋವನ್ನು ಕೃಷಿ ಪದ್ದತಿ ಸೇರಿದಂತೆ ವಿವಿಧ ಪ್ರಯೋಜನಗಳ ಆಧ್ಯತೆ ಮೇಲೆ ಅನುಸರಿಸಿದರೆ ಮಾತ್ರ ಅದರ ಉತ್ತಮ ಫಲಿತವನ್ನು ಪಡೆಯಬಹುದಾಗಿದೆ ಎಂದರು.
ಅಗತ್ಯವಾದ ಆಹಾರ, ಆಮ್ಲಜನಕ ನೀಡುವುದರೊಂದಿಗೆ ವಸತಿ ಸೇರಿದಂತೆ ತನ್ನೆಲ್ಲ ಅಗತ್ಯಗಳಿಗೆ ವೃಕ್ಷಗಳನ್ನೆ ಮನುಷ್ಯ ಅವಲಂಭಿಸಿದ್ದಾನೆ. ಮಣ್ಣಿನ ಸವಕಳಿ, ಬಿಸಿಲಿನ ತಾಪ ಹೀಗೆ ಪರಿಸರವನ್ನು ಸಮತೋಲದಲ್ಲಿ ಇಡುವಲ್ಲಿಯೂ ವೃಕ್ಷದ್ದು ಬಹು ದೊಡ್ಡ ಪಾತ್ರ ಇದೆ. ಹೀಗಾಗಿ ಸ್ವಾತಂತ್ರ ಅಮೃತ ಮಹೋತ್ಸವದ ಸಂದರ್ಭದಲ್ಲಿ ದೇಶಕ್ಕೆ ದೊಡ್ಡಕೊಡುಗೆ ಕೊಡುವಲ್ಲಿ ಬೃಂದಾವನ ಸಸಿ ನೆಡು 7 ದಿನಗಳ ಸಪ್ತಾಹದಲ್ಲಿ ಪರಿಸರ ತಜ್ಞರ ಸಲಹೆಯಂತೆ ವಿವಿಧ ಜಾತಿಯ 10 ಸಾವಿರ ಸಸಿಗಳನ್ನು ನೆಡುತ್ತಿದೆ. ಈ ನಿಟ್ಟಿನಲ್ಲಿ ರಾಷ್ಟ್ರೋತ್ಥಾನ ಪರಿಷತ್ ದೇಶಕ್ಕೆ ಅಗತ್ಯವಾದದನ್ನು ಕೊಡುವಲ್ಲಿ ಪರಿಷತ್ ಕಾರ್ಯ ಮಾಡುತ್ತಿದೆ ಎಂದು ಶ್ಲಾಘಿಸಿದರು.
ಕಾರ್ಯಕ್ರಮಕ್ಕೂ ಮುನ್ನ ವಿಜಯ ಸಂಕೇಶ್ವರ ಹಾಗು ಕಾರ್ಯಕ್ರಮಕ್ಕೆ ಆಗಮಿಸಿದ್ದ ವಿವಿಧ ಗಣ್ಯರು ಗೋ ಶಾಲೆಯ ಮೊದಲ ಹಂತದಲ್ಲಿ ನಿರ್ಮಾಣವಾಗಿರುವ ಬೃಂದಾವನ ಅರಣ್ಯ, ಸೇರಿದಂತೆ ಇಲ್ಲಿನ ಮುಂದಿನ ಅಭಿವೃದ್ಧಿ ಯೋಜನೆಗಳ ಕುರಿತು ಪರಿಚಯ ಮಾಡಿಕೊಂಡು, ಅಗತ್ಯ ಸಲಹೆಗಳನ್ನು ನೀಡಿದರು. ನಂತರ ಗೋ ಪೂಜೆ ಹಾಗು ಸಸಿ ನೆಡುವ ಮೂಲಕ ಕಾರ್ಯಕ್ರಮದ ಉದ್ಘಾಟನೆ ಮಾಡಿದರು.
ಸಪ್ತಾಪಹದಲ್ಲಿ ಬೆಂಗಳೂರಿನ ವಿವಿಧ ಶಾಲೆಯ ಮಕ್ಕಳು, ಪೊಷಕರು ಸಸಿಗಳನ್ನು ನೆಟ್ಟರು.
ಸಪ್ತಾಹ ಕಾರ್ಯಕ್ರಮದಲ್ಲಿ ರಾಷ್ಟರೋತ್ಥಾನ ಪರಿಷತ್ ಪ್ರಧಾನ ಕಾರ್ಯದರ್ಶಿ ದಿನೇಶ್ ಹೆಗಡೆ, ಖಜಾಂಚಿ ನಾರಾಯಣ್, ಗೋ ಶಾಲೆ ವ್ಯವಸ್ಥಾಪಕರು , ರಾಜ್ಯ ಪ್ರಾಣಿ ಕಲ್ಯಾಣ ಮಂಡಲಿ ರಾಜ್ಯ ಸದಸ್ಯ ಡಾ.ಜೀವನ್ ಕುಮಾರ್ ಇದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..