ಧಾರ್ಮಿಕ ಪೂಜಾ ವಿಧಿ-ವಿಧಾನಗಳಿಂದ ಹಾಸನಾಂಬ ದೇವಿಯ ದರ್ಶನ ಪ್ರಾರಂಭ

ಹಾಸನ: ನಗರದ ಅಧಿದೇವತೆ ಹಾಸನಾಂಬ ದೇವಾಲಯದ ಬಾಗಿಲು ಇಂದಿನಿಂದ ತೆರೆಯಲಾಗಿದೆ. ಧಾರ್ಮಿಕ ಪೂಜಾ ವಿಧಿ-ವಿಧಾನಗಳಿಂದ ಇಂದು ಮದ್ಯಾಹ್ನ 12.15ಕ್ಕೆ ದೇವಿಯ ದರ್ಶನ ಪ್ರಾರಂಭವಾಯಿತು. 

ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಶ್ರೀ ನಿರ್ಮಲಾನಂದ ಸ್ವಾಮೀಜಿ, ಶಾಖಾ ಮಠದ ಶಂಭುನಾಥ ಸ್ವಾಮೀಜಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ, ಸಣ್ಣ ನೀರಾವರಿ ಇಲಾಖೆ ಸಚಿವ ಮಾಧುಸ್ವಮಿ, ಜಿಲ್ಲಾ ಸತ್ರ ನ್ಯಾಯಾದೀಶರಾದ ನ್ಯಾಯಾದೀಶರಾದ ನಾ.ಶಿವಣ್ಣ, ಜಿಲ್ಲಾಧಿಕಾರಿ ಆರ್ ಗಿರೀಶ್ಹಾಸನಾಂಬ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಎ.ಪರಮೇಶ್ ಮತ್ತಿತರರು ಸರ್ವರಿಗೂ ದೇವಾಲಯದ ಬಾಗಿಲು ತೆರೆಯುವ ಮೂಲಕ ಸಾರ್ವಜನಿಕ ದರ್ಶನಕ್ಕೆ ಚಾಲನೆ ನೀಡಿದರು. 

ಸಂಪ್ರಾದಯವಾಗಿ ವರ್ಷಕ್ಕೊಮ್ಮೆ ದರ್ಶನ ಕೊಡುವ ಹಾಸನಾಂಬ ದೇವರ ದರ್ಶನಕ್ಕೆ  ರಾಜ ವಂಶಸ್ಥ ನಂಜರಾಜ ಅರಸ್ ಬಾಳೆಕಂದು ಕಡಿಯುವ  ವಿಧಿವಿಧಾನ ನೆರವೇರಿಸಿದರು. ದೇವಿ ದರ್ಶನದ ನಂತರ ಸಿದ್ದೇಶ್ವರ ಸ್ವಾಮಿಗೆ ಸ್ವಾಮಿಗಳು ಹಾಗೂ ಸಚಿವರು ಅಧಿಕಾರಿಗಳು ಪೂಜೆ ಸಲ್ಲಿಸಿದರು.

ಅಬಕಾರಿ ಇಲಾಖೆ ಸಚಿವ, ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಅವರು ದರ್ಶನ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ ಇಂದು ಶುಭ ಮುಹೂರ್ತದಲ್ಲಿ ಹಾಸನಾಂಬ ಜಾತ್ರೆಗೆ ಚಾಲನೆ ನೀಡಲಾಗಿದೆ, ವರ್ಷಕೊಮ್ಮೆ ಬಾಗಿಲು ತೆಗೆಯುವುದು ಈ ದೇವಸ್ಥಾನದ ವಿಶೇಷ,  ವರ್ಷದವರೆಗೂ ಉರಿಯುವ ಜ್ಯೋತಿ ದೇವಿಯ ಪವಾಡ ಈ ಬಾರಿಯ ದೇವಸ್ಥಾನದ ಬಾಗಿಲು ತೆರೆದಾಗ ದೀಪ ಉರಿಯುತ್ತಿತ್ತು ಇದನ್ನು ಕಣ್ತುಂಬಿಕೊಳ್ಳುವುದೇ ಒಂದು ಸಂತೋಷದ ವಿಚಾರ ಎಂದರು.

ಭಕ್ತಾದಿಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ, ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸಿದೆ, ದರ್ಶನಕ್ಕಾಗಿ ಕಾದು ನಿಲ್ಲುವ ಭಕ್ತಾದಿಗಳಿಗೆ ಟಾರ್ಪಲ್ ಕಮಾನುಗಳನ್ನು ನಿರ್ಮಿಸಿ ನೆರಳಿನ ಅನುಕೂಲ ಕಲ್ಪಿಸಲಾಗಿದೆ ಎಂದು ಹೇಳಿದರು. ಕರೋನಾ ಹಿನ್ನೆಲೆಯಲ್ಲಿ ಕಳೆದ ಬಾರಿ ದೇವಿಯ ಸಾರ್ವಜನಿಕ ದರ್ಶನಕ್ಕೆ ನಿಷೇದ ಹೇರಲಾಗಿತ್ತು, ಆದರೆ ಈ ಬಾರಿ ಸಾರ್ವಜನಿಕ ದರ್ಶನಕ್ಕೆ ಅವಕಾಶ ನೀಡಲಾಗಿದೆ ಭಕ್ತಾದಿಗಳು  ಜಿಲ್ಲಾಡಳಿತದೊಂದಿಗೆ ಸಹಕರಿಸಿ ದರ್ಶನ ಪಡೆಯುವಂತೆ ತಿಳಿಸಿದರು.

ಕಳೆದ ವರ್ಷ ಕರೋನಾದಿಂದಾಗಿ ಸಾರ್ವಜನಿಕರಿಗೆ ದರ್ಶನ ಭಾಗ್ಯ ಲಭಿಸಿರಲಿಲ್ಲ. ಈ ಬಾರಿ ಹಾಸನಾಂಬೆ ತಾಯಿಯ ಆಶೀರ್ವಾದದಿಂದ ಸಾರ್ವಜನಿಕರಿಗೆ  ದರ್ಶನ ಭಾಗ್ಯ ಸಿಕ್ಕಿದೆ. ಅಲ್ಲದೆ ಕೊರೋನಾವೂ  ಕೂಡ ಕಡಿಮೆಯಾಗುತ್ತಿದೆ ಎಂದು ಹೇಳಿದರು. ರಾತ್ರಿ 12 ಗಂಟೆಯಿಂದ ಬೆಳಗ್ಗೆ  6 ಗಂಟೆವರೆಗೂ ಪೂಜಾ ಕೈಂಕರ್ಯಗಳು ನೆರವೇರಲಿವೆ. ನಂತರ ಸಾರ್ವಜನಿಕರಿಗೆ  ದರ್ಶನಕ್ಕ ಅವಕಾಶ ಕಲ್ಪಿಸಲಾಗಿದ್ದು,  ಮಧ್ಯಾಹ್ನ1 ರಿಂದ 2 ಗಂಟೆವರೆಗೂ ಪೂಜೆಗಳು ನಡೆಯುವುದರಿಂದ ದರ್ಶನಕ್ಕೆ ಅವಕಾಶ ಇರುವುದಿಲ್ಲ ಎಂದರು.

ತಾಯಿಯ ದರ್ಶನ ಪಡೆಯಲು ಲಕ್ಷಾಂತರ ಮಂದಿ ಆಗಮಿಸುತ್ತಿದ್ದು, ಇಡೀ ನಾಡಿನ ಜನರಿಗೆ ಆರೋಗ್ಯ, ಆಯಸ್ಸನ್ನು  ದೇವಿ ಕರುಣಿಸಲಿ, ದೇವಿಯ ಎಲ್ಲರಿಗೂ ಒಳಿತು ಮಾಡಲಿ  ಎಂದು ಸಚಿವರು ತಿಳಿಸಿದರು. ರಣಘಟ್ಟ ಏತ ನೀರಾವರಿ ಯೋಜನೆಗೆ ಹಲವು ವರ್ಷಗಳ ಬೇಡಿಕೆ ಇತ್ತು. ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾದ ಸಂದರ್ಭದಲ್ಲಿ 125  ಕೋಟಿ ರೂ. ಹಣ ಮಂಜೂರು ಮಾಡಿದ್ದರು. ಅದರ ಉದ್ಘಾಟನೆ ಕಾರ್ಯಕ್ರಮವು ಅ.30 ರಂದು  ನಡೆಯುವ ನಿರೀಕ್ಷೆ ಇದೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗಮಿಸಲಿದ್ದಾರೆ ಎಂದರು. 

ಇದೇ ವೇಳೆ ಮಾತನಾಡಿದ ಕಾನೂನು ಸಂದೀಯ ಮತ್ತು ಸಣ್ಣ ನೀರಾವರಿ ಇಲಾಖೆ ಸಚಿವ ಮಾಧುಸ್ವಮಿ ಅವರು ಹಾಸನಾಂಬೆಯ ದರ್ಶನ ಪಡೆದು ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು  ಕಳೆದ ವರ್ಷ ಕೊರೋನಾ ಹೆಚ್ಚಿರುವುದರಿಂದ ಸಾರ್ವಜನಿಕರಿಗೆ ದರ್ಶನಕ್ಕೆ ಅವಕಾಶ  ನೀಡಿರಲಿಲ್ಲ ಈ ಬಾರಿಯ ಸಾರ್ವಜನಿಕರ ದರ್ಶನಕ್ಕೆ ಅವಕಾಶ ನೀಡಲಾಗಿದೆ ಎಂದರು. ತಾಯಿಯ ಆಶೀರ್ವಾದಿಂದ ನಾಡಿನ ಒಳಿತಾಗಲಿ ಹಾಸನಾಂಬೆ ತಾಯಿಯ ಆಶೀರ್ವಾದದಿಂದ   ಕೊರೋನಾ ಮೂರನೇ ಅಲೆ ರಾಜ್ಯದಲ್ಲಿ ಪರಿಣಾಮಕಾರಿಯಾಗಲಿಲ್ಲ  ಎಂದರು. ಆದ್ದರಿಂದ ಈ ಬಾರಿ ದರ್ಶನಕ್ಕೆ ಎಲ್ಲರಿಗೂ ಅವಕಾಶ ಮಾಡಿಕೊಟ್ಟಿದ್ದು,  ಮಳೆ, ಬೆಳೆ,  ಉತ್ತಮವಾಗಿದ್ದು, ತಾಯಿಯ ಆಶೀರ್ವಾದಿಂದ ನಾಡು ಸುಭೀಕ್ಷವಾಗಿರಲಿ ಎಂದು ಕಾನೂನು ಸಂದೀಯ ಮತ್ತು ಸಣ್ಣ ನೀರಾವರಿ ಸಚಿವ  ಜೆ.ಸಿ.ಮಾಧುಸ್ವಾಮಿ  ಹೇಳಿದರು.

ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರು ಮಾತನಾಡಿ  ಪ್ರತಿ ವರ್ಷದಂತೆ ಈ ಬಾರಿಯೂ ಶುಭ ಮುಹೂರ್ತದಲ್ಲಿ ಹಾಸನಾಂಬೆಯ ದರ್ಶನಕ್ಕಾಗಿ ಮಹಾದ್ವಾರವನ್ನು ತೆರೆಯಲಾಗಿದೆ ಎಂದರು. ಪುರುಷನ ಪ್ರತಿಬಿಂಬವಾಗಿರುವಂತಹ ಶಕ್ತಿಮಾತೆ ಹಾಸನದ ದೇವಸ್ಥಾನದಲ್ಲಿ ಮೂರು ರೀತಿ ನೆಲೆಗೊಂಡಿದ್ದಾಳೆ. ಗರ್ಭಗುಡಿಯಲ್ಲಿ ನೆಲೆಸಿರುವ ದೇವಿಗೆ ಮೂರು ರೂಪ ಇದೆ. ಲಕ್ಷ್ಮಿಯಾಗಿ, ಕಾಳಿಯಾಗಿ, ಸರಸ್ವತಿಯಾಗಿ ನೆಲೆಸಿದ್ದಾಳೆ. ಈ ಪವಿತ್ರ ಸ್ಥಳಕ್ಕೆ ಬರುವವರಿಗೆ ಮೂರೂ ದೇವಿಯರ ದರ್ಶನ ಆಗಲಿದೆ ಎಂದು ತಿಳಿಸಿದರು.

ಜ್ಞಾನಶಕ್ತಿ, ಪರಾಶಕ್ತಿ, ಇಚ್ಛಾಶಕ್ತಿ, ಸಂಕಷ್ಟ ಪರಿಹರಿಸುವ ಕೆಲಸ ತಾಯಿ ಮಾಡಲಿ. ಕೊರೊನಾ 2 ವರ್ಷದಿಂದ ಕಾಡಿದೆ. ತಾಯಿ ಕೃಪೆಯಿಂದ ಪೂರ್ಣಪ್ರಮಾಣದಲ್ಲಿ ಈ ರೋಗ ನಾಡಿನಿಂದ ಹೋಗಲಿ, ಜನರ ಬಾಳು ಸಂತೋಷವಾಗಿರಲಿ. ಆಧ್ಯಾತ್ಮಿಕದ ಜೊತೆ ವಿಜ್ಞಾನವನ್ನೂ ಮೈಗೂಡಿಸಿಕೊಂಡಿದ್ದೇ ಆದರೆ ಬದುಕು ಸುಂದರವಾಗಿರಲಿದೆ. ಶಾಂತಿ, ಸದ್ಭಕ್ತಿಯಿಂದ ದೇವಿಯ ದರ್ಶನ ಮಾಡಿ, ದೇವಿ ಕೃಪೆಗೆ ಪಾತ್ರರಾಗಿ ಎಂದರು.

ಈ ವೇಳೆಯಲ್ಲಿ ಶಾಸಕರಾದ  ಪ್ರೀತಂ ಜೆ. ಗೌಡ ,ಜಿಲ್ಲಾಧಿಕಾರಿ ಆರ್ ಗಿರೀಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸಗೌಡ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಎ. ಪರಮೇಶ್ , ಅಪರ ಜಿಲ್ಲಾಧಿಕಾರಿ ಕವಿತ ರಾಜಾರಾಂ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಿ. ಎನ್ ನಂದಿನಿ, ಹಾಸನಾಂಬ ದೇವಸ್ಥಾನದ ಆಡಳಿತಾಧಿಕಾರಿ ಹಾಗೂ  ಉಪವಿಭಾಗದಿಕಾರಿ ಬಿ.ಎ ಜಗದೀಶ್, ಸಕಲೇಶಪುರ ಉಪವಿಭಾಗಾಧಿಕಾರಿ ಪ್ರತೀಕ್ ಬಾಯಾಲ್ ಹಾಗೂ ಮತ್ತಿತರರು ಹಾಜರಿದ್ದರು.

ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..

ರಾಜಕೀಯ

ದೊಡ್ಡಬಳ್ಳಾಪುರದಲ್ಲಿ ಜೆಡಿಎಸ್ ಕಾರ್ಯಕರ್ತರ ಸಭೆ.. ಬಣ ಬಡಿದಾಟದ ವಿರುದ್ಧ ಆಕ್ರೋಶ..

ದೊಡ್ಡಬಳ್ಳಾಪುರದಲ್ಲಿ ಜೆಡಿಎಸ್ ಕಾರ್ಯಕರ್ತರ ಸಭೆ.. ಬಣ ಬಡಿದಾಟದ ವಿರುದ್ಧ ಆಕ್ರೋಶ..

ಜೆಡಿಎಸ್ (JDS) ಪಕ್ಷದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ನಿಷ್ಟಾವಂತ ಕಾರ್ಯಕರ್ತರಿದ್ದರೆ ಚುನಾವಣೆಗಳನ್ನು ಗೆಲ್ಲುವುದು ಕಷ್ಟಸಾಧ್ಯವಲ್ಲ. ಈ ದಿಸೆಯಲ್ಲಿ ಮುಂಬರುವ ಚುನಾವಣೆಗಳಲ್ಲಿ ಗೆಲುವು ಸಾಧಿಸಲು ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಪಕ್ಷ ಸಂಘಟನೆಯನ್ನು ಸಮರ್ಪಕವಾಗಿ ಮಾಡಬೇಕು. ಕಾರ್ಯಕರ್ತರೊಡಗೂಡಿ ಪಕ್ಷ ಸಂಘಟನೆಗೆ

[ccc_my_favorite_select_button post_id="118326"]
ರಾಜ್ಯ ಸರ್ಕಾರಿ ನೌಕರ ಸಂಘದ ಕ್ಯಾಲೆಂಡರ್ ಬಿಡುಗಡೆ

ರಾಜ್ಯ ಸರ್ಕಾರಿ ನೌಕರ ಸಂಘದ ಕ್ಯಾಲೆಂಡರ್ ಬಿಡುಗಡೆ

ರಾಜ್ಯ ಸರ್ಕಾರಿ ನೌಕರ ಸಂಘದ (State Government Employees Association) 2026ನೇ ವರ್ಷದ ಕ್ಯಾಲೆಂಡರ್ (Calendar) ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ (Cmsiddaramaiah) ಅವರು ಬಿಡುಗಡೆ ಮಾಡಿ, ಸರ್ಕಾರಿ ನೌಕರರಿಗೆ ಹೊಸ ವರ್ಷದ ಶುಭಾಶಯ ಕೋರಿದರು.‌

[ccc_my_favorite_select_button post_id="117770"]
ಭಾರತ ಹಿಂದೂ ರಾಷ್ಟ್ರ, ಯಾವುದೇ ಸಾಂವಿಧಾನಿಕ ಅನುಮೋದನೆ ಬೇಕಿಲ್ಲ: ಮೋಹನ್ ಭಾಗವತ್

ಭಾರತ ಹಿಂದೂ ರಾಷ್ಟ್ರ, ಯಾವುದೇ ಸಾಂವಿಧಾನಿಕ ಅನುಮೋದನೆ ಬೇಕಿಲ್ಲ: ಮೋಹನ್ ಭಾಗವತ್

ಭಾರತ ಹಿಂದೂ ರಾಷ್ಟ್ರ ಎಂಬುದು ಸತ್ಯ. ಅದಕ್ಕೆ ಯಾವುದೇ ಸಾಂವಿಧಾನಿಕ ಅನುಮೋದನೆ ಅಗತ್ಯವಿಲ್ಲ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಮುಖ್ಯಸ್ಥ ಮೋಹನ್ ಭಾಗವತ್ (Mohan Bhagwat) ಹೇಳಿದ್ದಾರೆ.

[ccc_my_favorite_select_button post_id="117699"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ಕ್ರೀಡಾಪಟುಗಳಿಂದ ಪ್ರೋತ್ಸಾಹ ಧನಕ್ಕಾಗಿ ಅರ್ಜಿ ಆಹ್ವಾನ

ಕ್ರೀಡಾಪಟುಗಳಿಂದ ಪ್ರೋತ್ಸಾಹ ಧನಕ್ಕಾಗಿ ಅರ್ಜಿ ಆಹ್ವಾನ

ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದ ಕ್ರೀಡಾ ಸ್ಪಧೆಯಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ (Athletes) 2025-26ನೇ ಸಾಲಿನಲ್ಲಿ ಪ್ರೋತ್ಸಾಹಧನಕ್ಕೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ (Applications invited).

[ccc_my_favorite_select_button post_id="118180"]
ಅಸೆಂಬ್ಲಿ ಚುನಾವಣೆ 2028; 150ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ NDA ಗೆಲ್ಲುತ್ತೆ ಎಂದ ನಿಖಿಲ್ ಕುಮಾರಸ್ವಾಮಿ

ಅಸೆಂಬ್ಲಿ ಚುನಾವಣೆ 2028; 150ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ NDA ಗೆಲ್ಲುತ್ತೆ ಎಂದ ನಿಖಿಲ್

ಮುಂದಿನ ರಾಜ್ಯದ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳ ಎನ್ಡಿಎ (NDA) ಮೈತ್ರಿಕೂಟವು 150 ಕ್ಷೇತ್ರಗಳಲ್ಲಿ ಜಯ ಸಾಧಿಸಲಿದೆ. ಆ ನಿಟ್ಟಿನಲ್ಲಿ ಎರಡೂ ಪಕ್ಷಗಳು ಸೇರಿ ಕೆಲಸ ಮಾಡುತ್ತಿದ್ದೇವೆ ಎಂದು ಯುವ ಜನತಾದಳ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಹೇಳಿದರು.

[ccc_my_favorite_select_button post_id="118301"]
ದೊಡ್ಡಬಳ್ಳಾಪುರ: ಅಪಘಾತ.. ಬೈಕ್ ಸವಾರರಿಗೆ ಗಂಭೀರ ಗಾಯ

ದೊಡ್ಡಬಳ್ಳಾಪುರ: ಅಪಘಾತ.. ಬೈಕ್ ಸವಾರರಿಗೆ ಗಂಭೀರ ಗಾಯ

ಕಾರು ಮತ್ತು ದ್ವಿಚಕ್ರ ವಾಹನದ ನಡುವೆ ಅಪಘಾತ (Accident) ಸಂಭವಿಸಿ ಬೈಕ್ ಸವಾರರಿಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ತಾಲೂಕಿನ **** ಹಾಗೂ *** ನಡುವೆ ಸಂಭವಿಸಿದೆ.

[ccc_my_favorite_select_button post_id="118304"]

ಆರೋಗ್ಯ

ಸಿನಿಮಾ

2020 ಹಾಗೂ 2021 ರ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಪ್ರಕಟ

2020 ಹಾಗೂ 2021 ರ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಪ್ರಕಟ

ಕರ್ನಾಟಕ ಸರ್ಕಾರವು ಚಲನಚಿತ್ರ ರಂಗದಲ್ಲಿನ ಜೀವಮಾನ ಸಾಧನೆಗಾಗಿ ನೀಡುವ ಡಾ.ರಾಜಕುಮಾರ್, ಪುಟ್ಟಣ್ಣ ಕಣಗಾಲ್ ಹಾಗೂ ಡಾ.ವಿಷ್ಣುವರ್ಧನ್ ಪ್ರಶಸ್ತಿಗಳನ್ನು ಪ್ರಕಟಿಸಿದೆ (State Film Awards).

[ccc_my_favorite_select_button post_id="118307"]
error: Content is protected !!