ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಮೊಮ್ಮಗಳು, ವೈದ್ಯೆ ಸೌಂದರ್ಯ (30ವರ್ಷ) ಶುಕ್ರವಾರ ನಗರದ ಶಾಂಫ್ರಿಲಾ ಹೋಟೆಲ್ ಬಳಿಯ ಆಪಾರ್ಟ್ ಮೆಂಟ್ ನ ಕೊಠಢಿಯ ಫ್ಯಾನ್ ಗೆ ನೇಣು ಬಿಗಿದು ಸೌಂದರ್ಯ ಆತ್ಮಹತ್ಯೆ ಮಾಡಿಕೊಂಡಿದ್ದರು.
ಬಿ.ಎಸ್.ಯಡಿಯೂರಪ್ಪ ಮೊಮ್ಮಗಳು ಸೌಂದರ್ಯ ಸಾವಿಗೆ ಪ್ರಸವ ನಂತರದ ಖಿನ್ನತೆ ಕಾರಣ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
ಯಾರ ಬಗ್ಗೆಯೂ ಸಂಶಯಗಳಿಲ್ಲ. ಸೌಂದರ್ಯ ಹೆರಿಗೆಯ ನಂತರದ ಖಿನ್ನತೆಗೆ ಒಳಗಾಗಿದ್ದರು. ನಮಗೆಲ್ಲರಿಗೂ ಅದು ಗೊತ್ತಿತ್ತು. ಮೊಮ್ಮಗಳನ್ನು ಸಂತೋಷದಿಂದಿರಿಸಲು ಯಡಿಯೂರಪ್ಪನವರು ಆಗಾಗ್ಯೆ ತನ್ನ ಮನೆಗೆ ಕರೆಸುತ್ತಿದ್ದರು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….
 
				 
						 
						 
						 
						 
						 
						 
						 
						 
						 
						 
						 
						 
						 
						 
						 
						 
						 
					 
						 
						 
						 
						 
					 
						 
						 
						 
						 
						 
						 
					 
						 
						 
						 
						 
						 
						 
						 
						 
						 
						 
					 
						 
						 
						 
						 
						 
						 
						 
						 
						 
						 
						 
						 
					 
					 
					 
					 
					 
					 
					 
						 
						 
						 
						