ಬೆಂಗಳೂರು, (ಆಗಸ್ಟ್.04): ತಡರಾತ್ರಿ ಎಲೆಕ್ಟ್ರಾನಿಕ್ ಸಿಟಿಯ ಫೈ ಓವರ್ ಮೇಲೆ ಸರಣಿ ಅಪಘಾತ ಸಂಭವಿಸಿ ಎಲಿವೇಟೆಡ್ ಅಧಿಕಾರಿ ಮಂಜುನಾಥ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಹಾಗೆಯೇ ಇಬ್ಬರು ಗಾಯಗೊಂಡಿದ್ದಾರೆ ಎನ್ನಲಾಗಿದೆ.
ಎಲೆಕ್ಟ್ರಾನಿಕ್ ಸಿಟಿಯ ಪ್ರೈ ಓವರ್ ಮೇಲೆ ತಡರಾತ್ರಿ ಕಾರೊಂದು ಕೆಟ್ಟು ನಿಂತು ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಈ ಕಾರಣದಿಂದ ಕೆಟ್ಟುನಿಂತಿದ್ದ ಕಾರು ತೆರವುಗೊಳಿಸಲು ಟೋಲ್ ಸಿಬ್ಬಂದಿ ಬಂದಿದ್ದ ಟೋಲ್ ಸಿಬ್ಬಂದಿ ಕಾರನ್ನು ತೆರುವುಗೊಳಿಸಲು ಮುಂದಾಗಿದ್ದಾರೆ.
ಇದೇ ಸಮಯದಲ್ಲಿ ಹಿಂದಿನಿಂದ ವೇಗವಾಗಿ ಬಂದು ಟಾಟಾ ಏಸ್ ವಾಹನವೊಂದು ಟೋಯಿಂಗ್ ವಾಹನ ಮತ್ತು ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಟೋಲ್ ಅಧಿಕಾರಿ ಮಂಜುನಾಥ್ ಮೃತಪಟ್ಟಿದ್ದಾರೆ.
ಈ ಅಪಘಾತದಲ್ಲಿ ಮತ್ತಿಬ್ಬರು ಟೋಲ್ ಸಿಬ್ಬಂದಿ ಗಾಯಗೊಂಡಿದ್ದಾರೆ.
ಮೃತ ಮಂಜುನಾಥ್ ಮಗಳ ಮದುವೆಯನ್ನು ಅಗಸ್ಟ್ 10 ನಡೆಸಲು ನಿಶ್ಚಯಿಸಿದ್ದರು. ಮಗಳ ಮದುವೆ ಖುಷಿಯಲ್ಲಿದ್ದ ಮಂಜುನಾಥ್ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….