ಕುಂದಾಪುರ, (ಸೆ.02): ಎರಡು ದಿನಗಳ ಕರಾವಳಿ ಭೇಟಿಯಲ್ಲಿರುವ ಖ್ಯಾತ ನಟ ಜ್ಯೂನಿಯರ್ ಎನ್‌ಟಿಆರ್ ಕೊಲ್ಲೂರು ಮೂಕಾಂಬಿಕಾ ದೇವಿಯ ದರ್ಶನ ಪಡೆದಿದ್ದು, ದರ್ಶನ ಮಾಡಿಸಿದ್ದಕ್ಕೆ ರಿಷಬ್ ಅವರಿಗೆ ತುಂಬಾ ಧನ್ಯವಾದಗಳು, ಕಾಂತಾರ ಫ್ರೀಕ್ವೆಲ್ ನಲ್ಲಿ ನಟನೆ ಬಗ್ಗೆ ರಿಪಬ್ ಶೆಟ್ಟಿ ಅವರೇ ಪ್ಲಾನ್ ಮಾಡಬೇಕು. ಅವರು ಏನು ಪ್ಲಾನ್ ಮಾಡಿದರೂ ನಾನು ಅದಕ್ಕೆ ರೆಡಿ ಎಂದು ಹೇಳಿದ್ದಾರೆ.
ಜಗತ್ನಸಿದ್ದ ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಭಾನುವಾರ ಕಾಂತಾರ ಖ್ಯಾತಿಯ ರಿಷಬ್ ಶೆಟ್ಟಿ ಜೊತೆ ಭೇಟಿ ನೀಡಿದ ಅವರು, ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದರು.
ಆಂಧ್ರಪ್ರದೇಶದಲ್ಲಿ ವಾಯ್ಸ್ ಆಫ್ ವುಮೆನ್ ವರದಿ ಬಿಡುಗಡೆಗಾಗಿ ನಟಿಯರ ಆಗ್ರಹದ ಬಗ್ಗೆ ಮಾಧ್ಯಮದವರು ಕೇಳಿದಪ್ರಶ್ನೆಗೆ, ಈಬಗ್ಗೆ ದೇವಸ್ಥಾನದಲ್ಲಿ ಏನು ಮಾತನಾಡುವುದಿಲ್ಲ ಎಂದು ಹೇಳಿದರು. ಲಾಫಿಂಗ್ ಬುದ್ಧ ಸಿನಿಮಾ ಯಶಸ್ಸಿಗೆ ನಟ ಪ್ರಮೋದ್ ಶೆಟ್ಟಿ ಅವರನ್ನು ಅಭಿನಂದಿಸಿದರಲ್ಲದೆ, ಸದ್ಯದಲ್ಲೇ ಸಿನಿಮಾ ನೋಡುವುದಾಗಿ ತಿಳಿಸಿದರು.
ಪೂಜೆ ಸಲ್ಲಿಸಿದ ಇಬ್ಬರನ್ನು ದೇಗುಲದವತಿಯಿಂದ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಶೆಟ್ಟಿ ಗೌರವಿಸಿದರು.
ಈ ವೇಳೆ ಶಾಲಿನಿ ನಂದಮೂರಿ, ನಿರ್ದೇಶಕ ಪ್ರಶಾಂತ್ ನೀಲ್, ಚಲನಚಿತ್ರ ನಟರಾದ ಪ್ರಮೋದ್ ಶೆಟ್ಟಿ, ರಕ್ಷಿತ್ ಶೆಟ್ಟಿ, ಅರ್ಚಕರಾದ ಶಿವರಾಂ ಅಡಿಗ, ಗಜಾನನ ಜೋಯಿಸ್, ಸುರೇಶ್ ಭಟ್ ಮುಂತಾದವರಿದ್ದರು.
ಕೆರಾಡಿಯ ಮೂಡಗಲ್ಲು ಕೇಶವನಾಥೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ಎನ್‌ಟಿಆರ್ ಹಾಗೂ ರಿಷಬ್ ಶೆಟ್ಟಿ ದೇವರ ದರ್ಶನ ಪಡೆದುಕೊಂಡು ಪೂಜೆ ಸಲ್ಲಿಸಿದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….</