ತೇರದಾಳ, (ಮಾ.23): ಹಳಿಂಗಳಿ ಗ್ರಾಮದ ಶರಣಬಸವೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಶುಕ್ರವಾರ ಸಂಜೆ 6 ಗಂಟೆಗೆ ಅಂತರ್ ಜಿಲ್ಲಾಮಟ್ಟದ ಕುಸ್ತಿ ಪಂದ್ಯಾವಳಿಗಳು ಜರುಗಿದವು.
ಪಂದ್ಯಾವಳಿಗೆ ಶ್ರೀಮಠದ ಶಿವಾನಂದ ಸ್ವಾಮೀಜಿ, ಗ್ರಾಪಂ ಅಧ್ಯಕ್ಷ ಪ್ರದೀಪ ನಂದೆಪ್ಪನವರ, ದೇವಲ ದೇಸಾಯಿ ಚಾಲನೆ ನೀಡಿದರು.
ಮೂವತ್ತಕ್ಕೂ ಅಧಿಕ ಜೋಡಿಗಳು ಮೈದಾನದಲ್ಲಿ ಸೆಣಸಾಡಿದವು. ಕುಸ್ತಿಪಟುಗಳಿಗೆ ಹೆಸರುವಾಸಿಯಾದ ಗ್ರಾಮದ ನೆಲದಲ್ಲಿ ನಡೆದ ಕುಸ್ತಿ ಆಟಗಳು ಕ್ರೀಡಾಭಿಮಾನಿಗಳಿಗೆ ಹುರುಪು ತುಂಬಿದವು. ಕುಸ್ತಿ ಪಟುಗಳು ಡಾವ್ ಪೇಚ್ ಹಾಕಿ ನೋಡುಗರ ಮೈನವಿರೇಳುವಂತೆ ಮಾಡಿದರು.
ಭರಮಪ್ಪ ಬಿ.ಪಾಟೀಲ, ರಾಯಪ್ಪ ತಿಮ್ಮನ್ನವರ ಸೇರಿದಂತೆ ಗ್ರಾಮದ ಹಿರಿಯರು, ವಸ್ತಾದಗಳು, ಕ್ರೀಡಾಪ್ರೇಮಿಗಳು ಹಾಗೂ ಮಠದ ಸದ್ಭಕ್ತರು ಇದ್ದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….