ಅಬುಧಾಬಿ, (ಫೆ.15): ಮುಸ್ಲಿಂ ರಾಷ್ಟ್ರ ಯುಎಇಯ ಅಬುಧಾಬಿಯಲ್ಲಿ ನಿರ್ಮಿಸಲಾಗಿರುವ ಮೊದಲ ಹಿಂದೂ ದೇವಾಲಯ ಎನ್ನಿಸಿ ಕೊಂಡಿರುವ ಸ್ವಾಮಿ ನಾರಾಯಣ (ಬಾಪ್ಸ್) ದೇಗುಲವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಸಂಜೆ ಉದ್ಘಾಟಿಸಿದರು.
ಇದೇ ವೇಳೆ ದೇವಸ್ಥಾನದಲ್ಲಿ ಅಳವಡಿಸಿರುವ ಕಲ್ಲಿನ ಮೇಲೆ ‘ವಸುಧೈವ ಕುಟುಂಬಕಂ’ ಎಂಬುದನ್ನು ಉಳಿ, ಸುತ್ತಿಗೆ ಬಳಸಿ ಕೆತ್ತನೆ ಮಾಡಿ ಸನಾತನ ಧರ್ಮದ ಜಾಗತಿಕ ಭ್ರಾತೃತ್ವದ ಸಂದೇಶ ಸಾರಿದರು.
ತಿಳಿ ನಸುಗೆಂಪು ಬಣ್ಣದ ರೇಷ್ಮೆ ವಸ್ತ್ರ, ಜಾಕೆಟ್ ಮತ್ತು ಶಾಲು ಧರಿಸಿ ದೇವಾಲಯಕ್ಕೆ ಆಗಮಿಸಿದ ಪ್ರಧಾನಿ ಮೋದಿ, ಧಾರ್ಮಿಕ ವಿಧಿವಿಧಾನಗಳಲ್ಲಿ ಭಾಗಿಯಾಗಿ, ಕಲ್ಲಿನಿಂ ದಲೇ ನಿರ್ಮಿಸಿರುವ ಬೃಹತ್ ದೇವಸ್ಥಾನ ವನ್ನು ಉದ್ಘಾಟಿಸಿದರು. ಬಳಿಕ ಬೋಚಾಸನ ವಾಸಿ ಶ್ರೀ ಅಕ್ಷರ್ ಪುರುಷೋತ್ತಮ್ ಸ್ವಾಮಿ ನಾರಾಯಣ ಸಂಸ್ಥೆ (ಬಾಪ್ಸ್) ನಿರ್ಮಿಸಿ ರುವ ಜಗತ್ತಿನ 1200 ಸ್ವಾಮಿನಾರಾಯಣ ದೇವಸ್ಥಾನಗಳಲ್ಲಿ ಆಯೋಜಿಸಿದ್ದ ವರ್ಚುವಲ್ ‘ಗ್ಲೋಬಲ್ ಆರತಿ’ ಕಾರ್ಯಕ್ರಮದಲ್ಲಿ ಭಾಗಿಯಾದರು.
ಇದೇ ಕಾರ್ಯಕ್ರಮದಲ್ಲಿ ಸಂಸದೆ ಸುಮಲತಾ ಅಂಬರೀಶ್ ಅವರು ಕೂಡ ಭಾಗವಹಿಸಿದ್ದು, ಆ ಕ್ಷಣವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಶಾಂತಿ, ಸೌಹಾರ್ದತೆ ಹಾಗೂ ಧಾರ್ಮಿಕ ಸಂಕೇತವಾಗಿರುವ ಅಬುಧಾಬಿಯ ಬೋಚಸನ್ವಾಸಿ ಶ್ರೀ ಅಕ್ಷರ ಪುರುಷೋತ್ತಮ ಸ್ವಾಮಿನಾರಾಯಣ ಸಂಸ್ಥೆಯು (BAPS) ನಿರ್ಮಿಸಿರುವ ಬೃಹತ್ ಹಿಂದೂ ಮಂದಿರದ ಉದ್ಘಾಟನಾ ಸಮಾರಂಭದಲ್ಲಿ ಭಾಗಿ ಆಗಲು ಅವಕಾಶ ಸಿಕ್ಕಿದ್ದು ಅತ್ಯಂತ ಹೆಮ್ಮೆ ಮತ್ತು ಭಗವಂತನ ಆಶೀರ್ವಾದವಾಗಿದೆ ಎಂದಿರುವ ಸುಮಲತಾ ಅಂಬರೀಶ್.
ವಸುದೈವ ಕುಟುಂಬಕಂ ಸಿದ್ಧಾಂತವನ್ನು ಯಾವಾಗಲೂ ಪ್ರತಿಪಾದಿಸುವ, ಜಗತ್ತೇ ಮೆಚ್ಚುವ ನಮ್ಮೆಲ್ಲರ ಹೆಮ್ಮೆಯ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಅವರು ಮಂದಿರ ಉದ್ಘಾಟಿಸಿ, ಅಬುಧಾಬಿಯಲ್ಲಿ ಆಡಿದ ಸ್ಪೂರ್ತಿದಾಯಕ ಮಾತುಗಳು ಯುಎಇ ಮತ್ತು ಭಾರತದ ನಡುವಿನ ಬಾಂಧವ್ಯಕ್ಕೆ ಮತ್ತಷ್ಟು ಬಲ ತರುವುದರಲ್ಲಿ ಎರಡು ಮಾತಿಲ್ಲ.ಇಂತಹ ಪ್ರಧಾನಿ ಪಡೆದಿರುವುದು ನಮ್ಮೆಲ್ಲರ ಪುಣ್ಯ.
ಅಬುಧಾಬಿಯ ನೆಲದಲ್ಲಿ ಬೃಹತ್ ಹಿಂದೂ ಮಂದಿರ ನಿರ್ಮಾಣ ಮತ್ತು ಉದ್ಘಾಟನೆಯಂತಹ ಐತಿಹಾಸಿಕ ಕ್ಷಣಕ್ಕೆ ಹಾಗೂ ಆ ದೈವಿಕ ಅನುಭವಕ್ಕೆ ಸಾಕ್ಷಿಯಾಗಲು ನನಗೆ ಅವಕಾಶ ಮಾಡಿಕೊಟ್ಟ BAPS ಸಂಸ್ಥೆಯ ಸರ್ವರಿಗೂ ಮನತುಂಬಿದ ಕೃತಜ್ಞತೆಗಳು ಎಂದಿದ್ದಾರೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….