ಬೆಂಗಳೂರು, (ಫೆ.16); ಪ್ರಸ್ತುತ ರಾಜ್ಯ ಬಜೆಟ್ ಬೆಂಗಳೂರು ಗ್ರಾಮಾಂತರ ಜಿಲ್ಲೆ ಪಾಲಿಗೆ ಬೇವು-ಬೆಲ್ಲದಂತಾಗಿದೆ ಎಂದು ಉದಯ ಆರಾಧ್ಯ ಟಿ ಎಸ್ ಅಭಿಪ್ರಾಯಪಟ್ಟಿದ್ದಾರೆ.
ಪೂಜೇನಹಳ್ಳಿಯಲ್ಲಿ ಆಹಾರ ಪಾರ್ಕ್, ನೆಲಮಂಗಲ ತಾಲೂಕು ಆಸ್ಪತ್ರೆ, ದೇವನಹಳ್ಳಿಯಲ್ಲಿ ಸಿಗ್ನೇಚರ್ ಬಿಜಿನೆಸ್ ಪಾರ್ಕ್ ಘೋಷಣೆ, ಹಾಗೂ ದೇವನಹಳ್ಳಿ ಮತ್ತು ನೆಲಮಂಗಲ ಮಾರ್ಗವಾಗಿ ತುಮಕೂರು ವರೆಗೆ ಮೆಟ್ರೋ ರೈಲು ಕಾರ್ಯಸಾಧ್ಯತಾ ವರದಿಗೆ ಮುಂದಾಗಿರುವುದು ಜಿಲ್ಲೆಯ ಪಾಲಿಗೆ ಹರ್ಷದ ಸಂಗತಿ.
ಉಳಿದಂತೆ ಬಹುದಿನಗಳ ಬೇಡಿಕೆಯಾದ ಜಿಲ್ಲಾ ಕೇಂದ್ರ ಘೋಷಣೆ, ಜಿಲ್ಲಾ ಆಸ್ಪತ್ರೆ, ಜಿಲ್ಲಾ ಕ್ರೀಡಾಂಗಣದ ನಿರೀಕ್ಷೆಗಳು ಹುಸಿಯಾಗಿದೆ. ಮೋಟಾರು ವಾಹನ, ಅಬಕಾರಿ, ವಾಣಿಜ್ಯ ತೆರಿಗೆಗಳನ್ನು ಹೆಚ್ಚಳದಿಂದ ಬಡವರ ಜೇಬಿಗೆ ಕತ್ತರಿ ಬೀಳುವುದು ಖಚಿತ ಎಂದಿದ್ದಾರೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….