ಕಾಟೇರ ಅಬ್ಬರಕ್ಕೆ ಫೀದಾ; ಹಾಡಿಹೊಗಳಿದ ದರ್ಶನ್‌ ಅಭಿಮಾನಿಗಳು

ಬೆಂಗಳೂರು, (ಡಿ.29); ದರ್ಶನ್‌ ನಟನೆಯ ಕಾಟೇರ ಸಿನಿಮಾ ನಿನ್ನೆ ಮಧ್ಯೆ ರಾತ್ರಿ ಬಿಡುಗಡೆಯಾಗಿದ್ದು, ಈಗಾಗಲೇ ಪಬ್ಲಿಕ್‌ ರಿವ್ಯೂ ಹೊರಬಿದ್ದಿದೆ. ಡಿಬಾಸ್‌ ಅಭಿಮಾನಿಗಳು ಕಾಟೇರ ಸಿನಿಮಾವನ್ನು ಅದ್ಭುತ, ಬೆಂಕಿ, ರೈತರ ಪರ, ಜಾತಿ ಎನ್ನುವವರು ಬಂದಿ ನೋಡಿ ಎಂದೆಲ್ಲ ಹೊಗಳಿದ್ದಾರೆ.

ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ನಟನೆಯ ಕಾಟೇರ ಸಿನಿಮಾ ಬಿಡುಗಡೆಯಾಗಿದೆ. ನಿನ್ನೆ ಮಧ್ಯರಾತ್ರಿ 12 ಗಂಟೆಗೆ ಥಿಯೇಟರ್‌ಗಳಲ್ಲಿ ಡಿಬಾಸ್‌ ಸಿನಿಮಾ ರಿಲೀಸ್‌ ಆಗಿದೆ. 

ಸಿನಿಮಾ ನೋಡಿ ಹೊರಬಂದ ಅಭಿಮಾನಿಗಳು ಸಮಾಜಿಕ ಜಾಲತಾಣಗಳಾದ ಟ್ವಿಟ್ಟರ್‌, ಫೇಸ್‌ಬುಕ್‌ ಸೇರಿದಂತೆ ಅನೇಕ ಕಡೆ ಕಾಟೇರ ಸಿನಿಮಾಗೆ ಮೆಚ್ಚಿಗೆ ಸೂಚಿಸಿ ವಿಮರ್ಶೆಯನ್ನು ಜನರು ಮಾಡುತ್ತಿದ್ದಾರೆ. 

ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌, ಮಾಲಾಶ್ರಿ ಪುತ್ರಿ ಆರಾಧನಾ ರಾಮ್‌ ನಟನೆ, ಸುಧೀರ್‌ ನಿರ್ದೇಶನ ಮಾಡಿದ್ದಾರೆ.

70ರ ದಶಕದ ಗ್ರಾಮದ ಕಥೆಯನ್ನಿಟ್ಟುಕೊಂಡು ಕನ್ನಡ ಸಿನಿಮಾ ವೀಕ್ಷಕರ ನಾಡಿಮಿಡಿತ ಅರಿತು ತರುಣ್‌ ಸುಧೀರ್‌ ಅವರು ಅತ್ಯುತ್ತಮವಾಗಿ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಸಿನಿಮಾದ ಮೊದಲಾರ್ಧ ಅತ್ಯುತ್ತಮವಾಗಿದೆ. ದ್ವಿತೀಯಾರ್ಧ ಸ್ವಲ್ಪ ಎಳೆದಂತೆ ಇದೆ. ಕೆಲವೊಂದು ಕಡೆ ಮುಂದೆ ಏನಾಗುತ್ತದೆ ಎಂದು ಊಹಿಸಲು ಸಾಧ್ಯವಾಗುತ್ತದೆ. ಆದರೆ, ಕ್ಲೈಮ್ಯಾಕ್ಸ್‌ ಅದ್ಭುತವಾಗಿದ್ದು, ಒಳ್ಳೆಯ ಸಂದೇಶ ನೀಡುತ್ತದೆ.

ಯಾವುದೇ ಅನಗತ್ಯ ಬಿಲ್ಡಪ್‌ ಇಲ್ಲದೆ ಡೈಲಾಗ್‌ಗಳು ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಸಾಹಸ ದೃಶ್ಯಗಳು ನೀಟಾಗಿವೆ. ಮ್ಯೂಸಿಕ್‌ ಇನ್ನಷ್ಟು ಉತ್ತಮವಾಗಬೇಕಿತ್ತು. ಆದರೆ, ಬಿಜಿಎಂ ಮಾತ್ರ ಅದ್ಭುತವಾಗಿ ಮೂಡಿ ಬಂದಿದೆ. ಸಿನಿಮಾಟೊಗ್ರಫಿ, ಎಡಿಟಿಂಗ್‌, ಕಲೆ, ವಿಎಫ್‌ಎಕ್ಸ್‌ ಅಂತೂ ಸೂಪರ್‌.

1970ರಲ್ಲಿ ನಡೆದ ಕೆಲವು ಸತ್ಯ ಘಟನೆಗಳನ್ನು ಆಧರಿತ ಈ ಸಿನಿಮಾವು ರೈತರ ಹೋರಾಟ, ಕಷ್ಟಗಳಿಗೆ ಕನ್ನಡಿ ಹಿಡಿದಿದೆ. ದರ್ಶನ್‌ ಅವರು ಎಂದಿನ ಕಮರ್ಷಿಯಲ್‌ ಅಂಶಗಳನ್ನು ಬದಿಗಿಟ್ಟು ಅತ್ಯುತ್ತಮವಾದ ಕಥೆಯನ್ನು ಆಯ್ಕೆ ಮಾಡಿದ್ದಾರೆ.

ಜಾತಿಯತೆ ಇತ್ಯಾದಿಗಳನ್ನು ಮೀರಿ ರೈತರ ಪ್ರಾಮುಖ್ಯತೆಯ ಕುರಿತು ಸಿನಿಮಾ ಮಾತನಾಡುತ್ತದೆ. ಒಳ್ಳೆಯ ಸಂದೇಶ ಮತ್ತು ಪರ್ಫಾಮೆನ್ಸ್‌ ಹೊಂದಿರುವಂತ ಸಿನಿಮಾವು ದರ್ಶನ್‌ ಕಡೆಯಿಂದ ಬಹು ಅಂತರದ ಬಳಿಕ ಬಂದಿದೆ ಎಂದು ಜೈಸ್‌ ಸಿನಿಮಾ ವರ್ಲ್ಡ್‌ ಟ್ವಿಟ್ಟರ್‌ನಲ್ಲಿ ವಿಮರ್ಶೆ ಮಾಡಿದೆ.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….