ದೊಡ್ಡಬಳ್ಳಾಪುರ, (ಜ.12); ನಟ/ ರಾಜಕಾರಣಿ ನಿಖಿಲ್ ಕುಮಾರಸ್ವಾಮಿ ಅವರು ಈಚೆಗೆ ಸಿನಿಮಾಗಳಿಂದ ಕೊಂಚ ದೂರವೇ ಉಳಿದುಬಿಟ್ಟಿದ್ದರು. ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ರಾಮನಗರದಿಂದ ಅವರು ಚುನಾವಣೆಗೆ ಸ್ಪರ್ಧಿಸಿದ್ದರು.
ಹಾಗಾಗಿ, ಸಿನಿಮಾಗಳಿಂದ ಬ್ರೇಕ್ ಪಡೆದುಕೊಂಡು, ರಾಜಕೀಯದತ್ತ ಮುಖ ಮಾಡಿದ್ದರು. ಆದರೆ ಇದೀಗ ಪುನಃ ಸ್ಯಾಂಡಲ್‌ವುಡ್‌ನಲ್ಲಿ ಸದ್ದು ಮಾಡಲು ನಿಖಿಲ್ ರೆಡಿಯಾಗಿದ್ದಾರೆ.
ಈ ಬಾರಿ ದೊಡ್ಡಮಟ್ಟದಲ್ಲೇ ಹವಾ ಮಾಡುವುದಕ್ಕೆ ನಿಖಿಲ್ ಸಜ್ಜಾಗಿದ್ದಾರೆ. ಅವರ ಹೊಸ ಹೊಸ ಪ್ಯಾನ್ ಇಂಡಿಯಾ ಸಿನಿಮಾವನ್ನು ಸೌತ್ ಇಂಡಿಯಾದ ಬಿಗ್ ಬ್ಯಾನರ್‌ವೊಂದು ನಿರ್ಮಾಣ ಮಾಡುತ್ತಿದೆ.
ತಮಿಳುನಾಡಿನ ಲೈಕಾ ಪ್ರೊಡಕ್ಷನ್ಸ್ ಸಂಸ್ಥೆ ಜೊತೆ ನಿಖಿಲ್ ಕುಮಾರಸ್ವಾಮಿ ಒಂದು ಸಿನಿಮಾ ಮಾಡಲಿದ್ದಾರೆ ಎಂಬ ಮಾತು ಇಂದು ನಿನ್ನೆಯದಲ್ಲ. ಹಲವು ವರ್ಷಗಳಿಂದ ಇಂಥದ್ದೊಂದು ಟಾಕ್ ಕೇಳಿಬರುತ್ತಲೇ ಇತ್ತು. ಆದರೆ ಸಿನಿಮಾ ಮಾತ್ರ ಟೇಕ್ ಆಫ್ ಆಗಿರಲಿಲ್ಲ. ಆದರೆ ಈಗ ಸದ್ದಿಲ್ಲದೆ ಲೈಕಾ ಪ್ರೊಡಕ್ಷನ್ಸ್ ಮತ್ತು ನಿಖಿಲ್ ಕಾಂಬಿನೇಷನ್‌ನ ಹೊಸ ಸಿನಿಮಾ ಸೆಟ್ಟೇರಿದೆ.
ನಿಖಿಲ್ ಕುಮಾರಸ್ವಾಮಿ ಮೊದಲು ಬಣ್ಣ ಹಚ್ಚಿದ್ದು ‘ಜಾಗ್ವಾರ್’ ಸಿನಿಮಾಕ್ಕಾಗಿ. ಆ ಸಿನಿಮಾವು ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಏಕಕಾಲಕ್ಕೆ ತೆರೆಗೆ ಬಂದಿತ್ತು. ಆನಂತರ ಬಂದ ಸಿನಿಮಾಗಳ್ಯಾವುವು ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಕಂಡಿರಲಿಲ್ಲ. ಆದರೆ ಈಗ ನಿಖಿಲ್ ಮತ್ತು ಲೈಕಾ ಪ್ರೊಡಕ್ಷನ್ಸ್‌ನ ಸಿನಿಮಾವು ಪ್ಯಾನ್ ಇಂಡಿಯಾ ಲೆವೆಲ್‌ನಲ್ಲೇ ಸಿದ್ಧಗೊಂಡು ತೆರೆಗೆ ಬರಲಿದೆ. ಅಂದಹಾಗೆ, ದೊಡ್ಡ ಬಜೆಟ್‌ನಲ್ಲಿ ನಿರ್ಮಾಣವಾಗುತ್ತಿದೆ ಎಂದು ವರದಿಯಾಗಿದೆ.
ಈ ಸಿನಿಮಾಗೆ ಮಾನ್ ಸ್ಟರ್ ಎಂದು ಹೆಸರಿಡಲಾಗಿದ್ದು, ಈ ಚಿತ್ರದ ಸಾಹಸ ಸನ್ನಿವೇಶವನ್ನು ದೊಡ್ಡಬಳ್ಳಾಪುರದ ಹೊರವಲಯದಲ್ಲಿರುವ ಕೊಡಿಗೇಹಳ್ಳಿ ಮೇಲ್ ಸೇತುವೆ ಬಳಿ ಗುರುವಾರ ರಾತ್ರಿ ಚಿತ್ರೀಕರಿಸಲಾಯಿತು.
ಪ್ರತ್ಯಕ್ಷದರ್ಶಿಗಳ ಹೇಳಿಕೆ ಅನ್ವಯ ಮೇಲ್ ಸೇತುವೆಯಿಂದ ನಿಖಿಲ್ ಕುಮಾರಸ್ವಾಮಿ ಹಾರುವ ಸನ್ನಿವೇಶವನ್ನು ಚಿತ್ರೀಕರಿಸಲಾಗಿದ್ದು, ನಟ ಜಗ್ಗೇಶ್ ಸಹೋದರ ಕೋಮಲ್ ಹಾಗೂ ಸಹ ಕಲಾವಿದರು, ಸಾಹಸ ನಿರ್ದೇಶಕ, ತಂತ್ರಜ್ಞರು, ಭಾಗವಹಿಸಿದ್ದರು ಎಂದು ತಿಳಿದುಬಂದಿದೆ. ಚಿತ್ರೀಕರಣದ ಕೆಲ ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….