ಬೆಂಗಳೂರು: ನಗರದ ಬಾಬುಸಾಬ್ ಪಾಳ್ಯದಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿತ ಪ್ರಕರಣಕ್ಕೆ ಸಂಬಂಧಿ ಸಿದಂತೆ ಮೃತಪಟ್ಟವರ ಸಂಖ್ಯೆ 8ಕ್ಕೆ ಏರಿಕೆಯಾಗಿದೆ.
ಬಿಹಾರ ಮೂಲದ ಕಾರ್ಮಿಕ ಮೊಹಮ್ಮದ್ ಸಾಹಿಲ್, ತಿರುಪಾಲಿ, ಅರ್ಮಾನ್, ಶಂಕರ್, ಸತ್ಯ ರಾಜ್, ಸೋಲೋ ಪಾಸ್ವಾನ್ ಎಂಬುವವರ ಮೃತದೇಹ ಗಳು ಬುಧವಾರ ಪತ್ತೆ ಯಾಗಿವೆ. ಎನ್ಡಿಆರ್ಎಫ್, ಎಸ್ಡಿಆರ್ಎಫ್ ಮತ್ತು ಅಗ್ನಿಶಾಮಕ ಸಿಬ್ಬಂದಿಯಿಂದ ಕಾರ್ಯಾಚರಣೆ ಮುಂದು ವರಿದಿದ್ದು, ಇದುವರೆಗೂ 13 ಜನ ಕಾರ್ಮಿಕರನ್ನು ರಕ್ಷಣೆ ಮಾಡಲಾಗಿದೆ.
ಕಳಪೆ ಕಾಮಗಾರಿಯೇ ಘಟನೆಗೆ ಕಾರಣ: ಬಾಬುಸಾಬ್ ಪಾಳ್ಯದಲ್ಲಿ ಕಳೆದ ಎಂಟು ತಿಂಗಳಿಂದ ನಿರ್ಮಾಣ ಹಂತದ ಲ್ಲಿದ್ದ ಆರು ಅಂತಸ್ತಿನ ಕಟ್ಟಡವೊಂದು ಮಂಗಳವಾರ ಮಧ್ಯಾಹ್ನ ಕುಸಿದುಬಿದ್ದಿತ್ತು. ಈ ಕಟ್ಟಡ ನಿರ್ಮಾಣದಲ್ಲಿ ಪಿಲ್ಲರ್ ರಾಡ್ 28-30 ಎಂಎಂ ರಾಡ್ ಹಾಕಬೇಕಿತ್ತು. ಆದರೆ 18-20 ಎಂಎಂ ರಾಡ್ ಬಳಸಿದ್ದಾರೆ.
14-16 ರಾಡ್ ಹಾಕಿ ಮೋಲ್ಡಿಂಗ್ ಮಾಡಬೇಕಿತ್ತು, ಆದರೆ 8-10 ಎಂಎಂ ರಾಡ್ ಬಳಸಿದ್ದಾರೆ. ಎಂ ಸ್ಯಾಂಡ್ ಹೆಚ್ಚು ಬಳಸಿ, ಸಿಮೆಂಟ್ ಕಡಿಮೆ ಬಳಸಿರುವ ಶಂಕೆ ವ್ಯಕ್ತವಾಗಿದೆ. ಘಟನೆಗೆ ಕಳಪೆ ಕಾಮಗಾರಿಯೇ ಕಾರಣ ಎಂದು ಮೇಲ್ನೋಟಕ್ಕೆ ತಿಳಿದು ಬಂದಿದೆ.
An under-construction building has tragically collapsed in the Babusabpalya area of KR Puram, Bengaluru, following the heavy rains that have lashed the city. The incident has caused widespread panic in the area, with debris covering a significant portion of the site. According to… pic.twitter.com/TPvZnGdWhu
— Karnataka Portfolio (@karnatakaportf) October 22, 2024
ಇಬ್ಬರ ಬಂಧನ: ಕಾರ್ಮಿಕ ಮೊಹಮ್ಮದ್ ಹರ್ಷದ್ ನೀಡಿರುವ ದೂರಿನ ಮೇಲೆ ಕಟ್ಟಡದ ಮಾಲೀಕ ಮುನಿರಾಜು ರೆಡ್ಡಿ, ಗುತ್ತಿಗೆದಾರರಾದ ಮೋಹನ್ ರೆಡ್ಡಿ, ಏಳುಮಲೈ ವಿರುದ್ಧ ನಿರ್ಲಕ್ಷ್ಯತನದ ಆರೋಪದಡಿ ಹೆಣ್ಣೂರು ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಕಟ್ಟಡದ ಮಾಲೀಕ ಮತ್ತು ಗುತ್ತಿಗೆದಾರನನ್ನು ಪೊಲೀಸರು ಬಂಧಿಸಿದ್ದಾರೆ.
ಈ ನಿರ್ಮಾಣ ಹಂತದ ಕಟ್ಟಡ ಭುವನ್ ರೆಡ್ಡಿ ಹೆಸರಿನಲ್ಲಿದ್ದು, ಈತ ಪ್ರಕರಣದ ಮೊದಲನೇ ಆರೋಪಿ ಮುನಿರಾಜ ರೆಡ್ಡಿಯ ಮಗ. ಆರೋಪಿಗಳ ವಿರುದ್ಧ ಬಿಎನ್ ಎಸ್ 105, 125(ಎ) 125(ಬಿ), 270,3 (5) ಬಿಬಿಎಂಪಿ ಕಾಯಿದೆ 326, 327,328 ಕಾಯಿದೆಯಡಿ ಎಫ್ಐಆರ್ ದಾಖಲಾಗಿದೆ.