ದೊಡ್ಡಬಳ್ಳಾಪುರ : ಚಾಲಕನ ನಿಯಂತ್ರಣ ತಪ್ಪಿದ ಲಾರಿಯೊಂದು ರಸ್ತೆ ಬದಿಯಲ್ಲಿ ನಿಂತಿದ್ದ ಕ್ರೈನ್ಗೆ ಗುದ್ದಿರುವ ಘಟನೆ ನಗರದ ಪ್ರವಾಸಿ ಮಂದಿರದ ಬಳಿ ನಡೆದಿದೆ.
ಗುರುವಾರ ರಾತ್ರಿ ಗೌರಿಬಿದನೂರಿಗೆ ತೆರಳುತ್ತಿದ್ದ ಲಾರಿಯ ಮುಂದಿನ ಚಕ್ರ ಸಿಡಿದ ಪರಿಣಾಮ,ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಕ್ರೈನ್ಗೆ ಗುದ್ದಿದೆ.
ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಪಾಯ ನಡೆದಿಲ್ಲವಾಗಿದ್ದು,ಎರಡು ವಾಹನಗಳಿಗೆ ತೀವ್ರ ಹಾನಿಯಾಗಿದೆ.ನಗರ ಪೊಲೀಸ್ ಠಾಣೆಯಲ್ಲಿ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.