ದೊಡ್ಡಬಳ್ಳಾಪುರ: ಎಲ್ & ಟಿ ಮತ್ತು ರೋಟರಿ ಸಹಯೋಗದೊಂದಿಗೆ ತಾಲೂಕಿನ 100 ಸರ್ಕಾರಿ ಶಾಲೆಗಳಿಗೆ ಹ್ಯಾಪಿ ಸ್ಕೂಲ್ ಯೋಜನೆಯನ್ನು ಬೀಡಿಕೆರೆ ಸರ್ಕಾರಿ ಶಾಲೆಯಲ್ಲಿ ಚಾಲನೆ ನೀಡಲಾಯಿತು.
ಈ ಯೋಜನೆಯಡಿಯಲ್ಲಿ 100 ಸರ್ಕಾರಿ ಶಾಲೆಗಳಿಗೆ, ಇ ಕ್ಲಾಸ್ ರೂಮ್ ವಿಡಿಯೋ ಕಾಮೆರಾದೊಂದಿಗೆ ಎಲ್ಸಿಡಿ ಟಿವಿ, ಹ್ಯಾಂಡ್ ವಾಶ್ ಸ್ಟೇಷನ್, ಪುಸ್ತಕಗಳೊಂದಿಗೆ ಓದುವ ಕೊಣೆ, ಒಂದು ತರಗತಿ ಕೋಣೆಯನ್ನು ಸಂತೋಷದ ಶಾಲಾ ಪರಿಕಲ್ಪನೆಯೊಂದಿಗೆ ಚಿತ್ರಿಸಲಾಗಿದೆ.
ಎಲ್ಲಾ ವಿದ್ಯಾರ್ಥಿಗಳಿಗೆ ಕುಳಿತುಕೊಳ್ಳುವ ಮೇಜುಗಳು, ವರ್ಚುವಲ್ ತರಗತಿ, ವಿಜ್ಞಾನ ಉಪಕರಣಗಳು, ಆಟದ ವಸ್ತುಗಳು, ಹೆಣ್ಣು ಮಕಳಿಗೆ ನೈರ್ಮಲ್ಯ ತರಬೇತಿ, ಕೆರಿಯರ್ ಗೈಡೆನ್ಸ್ ಕೌನ್ಸಿಲಿಂಗ್ ನೀಡಲಾಗುತ್ತಿದೆ.
ಕಾರ್ಯಕ್ರಮದಲ್ಲಿ ಎಲ್ & ಟಿಯ ಉಪಾಧ್ಯಕ್ಷ ಅರವಿಂದ್ ಕೆ.ಗಾರ್ಗ್ ಸಲಹೆಗಾರ ಕೇಶವ ಮೂರ್ತಿ. ಹೆಚ್.ಎಲ್ ಹಂಡೆ, ರೋಟರಿ ಸಂಸ್ಥೆಯ ಗವರ್ನರ್ ಹಾಗೂ ಚಿತ್ರ ನಿರ್ದೇಶಕ B.L ನಾಗೇಂದ್ರ ಪ್ರಸಾದ್, ಹೈಡ್ರಾಲಿಕ್ ಸಂಸ್ಥೆ ಮುಖ್ಯಸ್ಥ ಶೈಲೇಶ್ ಕೊಡೋಕಾಣಿ, ಮಿಂಡಾ ನಿಗಮದ ಶ್ರೀಮಿಂಡಾ, ರೋಟೇರಿಯನ್ ಮಿಲಂದ್ ದೇಶಪಾಂಡೆ, ನರೇಶ್ ಚೌದರಿ, ಬೆಂಗಳೂರು ರೋಟರಿ ಜಂಕ್ಷನ್ ವೇಲು, ಕ್ಷೇತ್ರ ಶಿಕ್ಷಣಾಧಿಕಾರಿ ಬೈಯಪ್ಪರೆಡ್ಡಿ ಮತ್ತಿತರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ.ಟೆಲಿಗ್ರಾಂ ಗುಂಪಿಗೆ ಸೇರಿರಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ.