ಶ್ರೀಹರಿಕೋಟಾ: ಇಂದು ಬೆಳಗ್ಗೆ ಆಂಧ್ರ ಪ್ರದೇಶದ ಶ್ರೀಹರಿಕೋಟಾದಲ್ಲಿರುವ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಗೊಂಡ ಜಿಎಸ್ಎಲ್ವಿ- ಎಫ್ 10 ರಾಕೆಟ್ ತಾಂತ್ರಿಕ ಕಾರಣದಿಂದ ತನ್ನೊಳಗಿದ್ದ ಉಪಗ್ರಹವನ್ನು ನಿಗದಿತ ಜಾಗಕ್ಕೆ ಸೇರಿಸಲು ವಿಫಲವಾಗಿದೆ. EOS-3 ಎಂಬ ಭೂ ವೀಕ್ಷಣಾ ಸೆಟಲೈಟನ್ನು ಹೊತ್ತೊಯ್ದಿದ್ದ ರಾಕೆಟ್ ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ.
EOS-3 ಸೆಟಲೈಟ್ ನ್ನು ಜಿಯೋಸಿಂಕ್ರೋನಸ್ ಟ್ರಾನ್ಸ್ಫರ್ ಆರ್ಬಿಟ್ನಲ್ಲಿ ಇರಿಸಲು 51.70 ಮೀಟರ್ ಎತ್ತರದ ಜಿಎಸ್ಎಲ್ವಿ-ಎಫ್10 ರಾಕೆಟ್ನಲ್ಲಿ ಯಶಸ್ವಿಯಾಗಿ ಮುಂಜಾನೆ 5.43ಕ್ಕೆ ಉಡಾವಣೆ ಮಾಡಲಾಗಿತ್ತು.
ಲಿಫ್ಟ್-ಆಫ್ಗೆ ಮುಂಚಿತವಾಗಿ, ಲಾಂಚ್ ಆಥರೈಸೇಶನ್ ಬೋರ್ಡ್ ಯೋಜಿಸಿದಂತೆ ಸಾಮಾನ್ಯ ಲಿಫ್ಟ್-ಆಫ್ಗಾಗಿ ಡೆಕ್ಗಳನ್ನು ತೆರವುಗೊಳಿಸಿತು. ಮೊದಲ ಮತ್ತು ಎರಡನೇ ಹಂತಗಳಲ್ಲಿ ರಾಕೆಟ್ನ ಕಾರ್ಯಕ್ಷಮತೆ ಸಾಮಾನ್ಯವಾಗಿತ್ತು. ಆದರೆ ಕೆಲವು ನಿಮಿಷಗಳ ನಂತರ ರಾಕೆಟ್ನಲ್ಲಿ ತಾಂತ್ರಿಕ ಅಡಚಣೆ ಉಂಟಾಗಿದ್ದು ಕಂಡು ಬಂದಿತು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..