ದೊಡ್ಡಬಳ್ಳಾಪುರ: ತಾಲೂಕಿನ ವಿವಿಧ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪದೇ ಪದೇ ಸಂಭವಿಸುತ್ತಿರುವ ರಸ್ತೆ ಅಪಘಾತಗಳನ್ನು ತಡೆಗಟ್ಟಲು ಡಿವೈಎಸ್ಪಿ ಟಿ.ರಂಗಪ್ಪ ಅವರ ಸೂಚನೆಯ ಮೇರೆಗೆ ವಿವಿಧ ಇಲಾಖೆಯ ಅಧಿಕಾರಿಗಳು ಜಂಟಿ ಸರ್ವೆ ಕಾರ್ಯವನ್ನು ನಡೆಸಿದರು.
ಸರ್ಕಲ್ ಇನ್ಸ್ಪೆಕ್ಟರ್ ಎಂ.ಬಿ.ನವೀನ್ ಕುಮಾರ್ ನೇತೃತ್ವದಲ್ಲಿ ಪೊಲೀಸ್ ಇಲಾಖೆ, ಸಾರಿಗೆ ಇಲಾಖೆ, ಲೋಕೋಪಯೋಗಿ ಇಲಾಖೆ ಹಾಗೂ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸರ್ವೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ನಗರದ ರೈಲ್ವೆ ಸ್ಟೇಷನ್, ಡಿ.ಕ್ರಾಸ್ ವೃತ್ತ, ಪಿಎಸ್ ಐ ದಿ.ಜಗದೀಶ್ ವೃತ್ತ, ಟಿಬಿ ಸರ್ಕಲ್, ದೊಡ್ಡಬೆಳವಂಗಲ, ಹೊಸಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸರ್ವೆ ನಡೆಸಿದರು.
ರಸ್ತೆ ಅಪಘಾತಕ್ಕೆ ಕಾರಣವಾಗುತ್ತಿರುವ ರಸ್ತೆಯಲ್ಲಿ ಸೂಚನಾಫಲಕ ಅಳವಡಿಕೆ, ಹೈಮಾಸ್ಕ್ ದೀಪ ಅಳವಡಿ, ಬ್ಲಿಂಕಿಂಗ್ ಲೈಟ್, ಸೆಲಿಕಾನ್ ದೀಪ ಅಳವಡಿಕೆ, ಬ್ಯಾರಿಕೇಟ್ ಗಳಿಗೆ ಪ್ರತಿಫಲಿಸುವ ಸ್ಟಿಕರ್ ಅಳವಡಿಕೆ, ಸೆಲಿಕಾನ್ ದೀಪ ಅಳವಡಿಕೆ ಸೇರಿದಂತೆ ವೈಜ್ಞಾನಿಕ ವೇಗ ನಿಯಂತ್ರಕ ಮತ್ತಿತರ ಅಗತ್ಯ ಕ್ರಮಗಳ ಕುರಿತು ಪಟ್ಟಿ ಮಾಡಲಾಯಿತು.
ಈ ವೇಳೆ ಸಾರಿಗೆ ಇಲಾಖೆ ಇನ್ಸ್ಪೆಕ್ಟರ್ ರಾಕೇಶ್, ಸಬ್ ಇನ್ಸ್ ಪೆಕ್ಟರ್ ಗಳಾದ ಗೋವಿಂದ್, ವಿ.ಗಜೇಂದ್ರ, ಲೋಕೋಪಯೋಗಿ ಇಲಾಖೆಯ ಎಇಇ ಮುರುಳೀಧರ್, ಕೆಆರ್ ಡಿಸಿಎಲ್ ಇಲಾಖೆಯ ಪೊನ್ನಪ್ಪ ಹಾಗೂ ರವಿ ಬಾಬು, ಮತ್ತಿತರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..