ದೊಡ್ಡಬಳ್ಳಾಪುರ: ಕೇಂದ್ರದ ಮಾಜಿ ಸಚಿವ ಆರ್.ಎಲ್.ಜಾಲಪ್ಪರ ಅಂತ್ಯಕ್ರಿಯೆ ವೇಳೆ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ.
ಶನಿವಾರ ಸಂಜೆ ನಡೆದ ಆರ್.ಎಲ್.ಜಾಲಪ್ಪರ ಅಂತ್ಯಕ್ರಿಯೆ ಕಾರ್ಯದಲ್ಲಿ ಭಾಗವಹಿಸಿದ್ದ ಶಾಸಕ ಟಿ.ವೆಂಕಟರಮಣಯ್ಯರ ಜೇಬಿನಲ್ಲಿದ್ದ ಪರ್ಸನ್ನು ಕಳ್ಳರು ಕದ್ದಿದ್ದಾರೆನ್ನುವ ಮಾಹಿತಿ ತಡವಾಗಿ ತಿಳಿದು ಬಂದಿದೆ.
ಈ ಕುರಿತು ಹರಿತಲೇಖನಿಗೆ ಮಾಹಿತಿ ನೀಡಿರುವ ಶಾಸಕ ಟಿ.ವೆಂಕಟರಮಣಯ್ಯ, ಅಂತ್ಯಕ್ರಿಯೆ ವೇಳೆ ಉಂಟಾದ ತಳ್ಳಾಟದ ವೇಳೆ ಜೇಬಿನಲ್ಲಿದ್ದ ಪರ್ಸ್ ಕದಿಯಲಾಗಿದ್ದು, ಸುಮಾರು 10 ಸಾವಿರ ನಗದು ಹಾಗೂ ಹಲವು ಗುರುತಿನ ಚೀಟಿಗಳು ಕಳುವಾಗಿದೆ. ಸಾರ್ವಜನಿಕರಿಗೆ ಗುರುತಿನ ಚೀಟಿಗಳು ದೊರೆತಲ್ಲಿ ಹಿಂತಿರುಗಿಸುವಂತೆ ಅವರು ಮನವಿ ಮಾಡಿದ್ದಾರೆ.
ಘಟನೆ ಕುರಿತು ಪೊಲೀಸ್ ಠಾಣೆಗೆ ದೂರು ನೀಡಲು ಶಾಸಕ ಟಿ.ವೆಂಕಟರಮಣಯ್ಯ ಮುಂದಾಗಿರುವುದಾಗಿ ಅವರು ತಿಳಿಸಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….