ದೊಡ್ಡಬಳ್ಳಾಪುರ: ಭಾರತೀಯ ಜನತಾ ಪಾರ್ಟಿ ಮಹಿಳಾ ಘಟಕದವತಿಯಿಂದ ತಾಲೂಕಿನ ಹೊಸಹಳ್ಳಿ ಗ್ರಾಮದ “ಬ್ರಹ್ಮ ಸದನ”ದಲ್ಲಿ ಮಹಿಳೆಯರ ಸ್ವಾವಲಂಬಿ ಹಾಗೂ ಉದ್ಯಮಶೀಲತೆಯ ಅಭಿವೃದ್ಧಿಗಾಗಿ ಐದು ದಿನಗಳ ಉದ್ಯಮಶೀಲ ತರಬೇತಿ ಕಾರ್ಯಾಗಾರ ಆಯೋಜಿಸಲಾಗಿತ್ತು.
ಬೆಂಗಳೂರು ಗ್ರಾಮಾಂತರ ಜಿಲ್ಲೆ ಬಿಜೆಪಿ ಉಪಾಧ್ಯಕ್ಷ ಹೆಚ್.ಎಸ್.ಅಶ್ವತ್ಥ್ ನಾರಾಯಣ ಕುಮಾರ್ ತರಬೇತಿ ಕಾರ್ಯಾಗಾರಕ್ಕೆ ಚಾಲನೆ ನೀಡಿದರು.
ಯುಎನ್ಡಿಪಿ, ಎಎಪಿ ಸ್ವಯಂ ಸೇವಾ ಸಂಸ್ಥೆಯು ಐದು ದಿನಗಳ ತರಬೇತಿ ಕಾರ್ಯಾಗಾರಲ್ಲಿ ಮಹಿಳಾ ಸ್ವಾವಲಂಬನೆ ಗಾಗಿ ಒಂದು ದಿಟ್ಟ ಹೆಜ್ಜೆ. ತರಬೇತಿಯಲ್ಲಿ ಮಹಿಳಾ ಉದ್ಯಮದ ಅಭಿವೃದ್ಧಿ, ಅಡಚಣೆಗಳು, ಅವುಗಳ ನಿವಾರಣೆಗೆ ಮಾರ್ಗೋಪಾಯಗಳು ಹಾಗೂ ಮಾರುಕಟ್ಟೆಗೆ ಸಂಬಂಧಿಸಿದಂತೆ ಸಮಗ್ರ ಮಾಹಿತಿ ಗಳನ್ನು ನೀಡಿದರು.
ಬಿಜೆಪಿ ತಾಲೂಕು ಪ್ರಧಾನ ಕಾರ್ಯದರ್ಶಿ ರೋಹಿಣಿ ಗೋವಿಂದರಾಜು, ಸಂಸ್ಥೆಯ ಉನ್ನತ ಸಖಿಯರ ಮೇಲ್ವಿಚಾರಣೆಯಲ್ಲಿ ಉಜ್ಜಿನಿ ಹಾಗೂ ಹೊಸಹಳ್ಳಿಯ ಸುಮಾರು ನಲವತ್ತು ಮಹಿಳೆಯರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….