ದೊಡ್ಡಬಳ್ಳಾಪುರ, (ಜೂ.03): ರೈತರಿಂದ ಖರೀದಿಸಲಾಗುತ್ತಿರುವ ಹಾಲಿನ ಬೆಲೆಯನ್ನು ಇಳಿಕೆ ಮಾಡಲು ತೀರ್ಮಾನಿಸಿದ್ದ ಬಮೂಲ್ ನಿರ್ಣಯವನ್ನು ನಿರ್ದೇಶಕರ ಒತ್ತಡಕ್ಕೆ ಮಣಿದು ಹಿಂಪಡೆದಿದೆ ಎಂದು ಕೆಎಂಎಫ್ ನಿರ್ದೆಶಕ ಬಿ.ಸಿ.ಆನಂದಕುಮಾರ್ ತಿಳಿಸಿದ್ದಾರೆ.
ಅವರು ಈ ಕುರಿತು ಹರಿತಲೇಖನಿಗೆ ಮಾಹಿತಿ ನೀಡಿ, ಹಾಲಿನ ಬೆಲೆ ಇಳಿಕೆ ಕುರಿತಂತೆ ರೈತರಲ್ಲಿ ಸಾಕಷ್ಟು ಗೊಂದಲಗಳನ್ನು ಸೃಷ್ಠಿಸಲಾಗುತ್ತಿದೆ. ಆದರೆ ಬಮೂಲ್ ವತಿಯಿಂದ ಹಾಲಿನ ಬೆಲೆ ಇಳಿಕೆ ಮಾಡುವ ನಿರ್ಣಯ ಹಿಂಪಡೆದಿದೆ ಎಂದು ಸ್ಪಷ್ಟಪಡಿಸಿದರು.
ಹಾಲಿಗೆ ಸಾಕಷ್ಟು ಬೇಡಿಕೆ ಇದ್ದು ಗ್ರಾಹಕರಿಗೆ ಪೂರೈಕೆ ಮಾಡುವುದೇ ಕಷ್ಟವಾಗಿದೆ. ಈಗಷ್ಟೇ ಮಳೆ ಪ್ರಾರಂಭವಾಗಿರುವುದರಿಂದ ಹಾಲಿನ ಉತ್ಪಾದನೆ ಹೆಚ್ಚಾಗುವ ನಿರೀಕ್ಷೆ ಹೊಂದಲಾಗಿದೆ.
ಮುಂದಿನ ಒಂದೆರಡು ವಾರಗಳಲ್ಲಿ ಗ್ರಾಹಕರಿಗೆ ಕೇಳಿದಷ್ಟು ಹಾಲಿನ ಪೂರೈಕೆ, ಬೆಣ್ಣೆ, ತುಪ್ಪ ಸೇರಿದಂತೆ ಹಾಲಿನ ಇತರೆ ಉತ್ಪನ್ನಗಳ ಸರಬರಾಜು ಯತಾಸ್ಥಿತಿಗೆ ಬರುವ ನಂಬಿಕೆ ಇದೆ ಎಂದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….