ದೊಡ್ಡಬಳ್ಳಾಪುರ, (ಜೂ.19): ಇಂದು ಮಧ್ಯಾಹ್ನ ಗೌರಿಬಿದನೂರು ರಸ್ತೆ ಗೊಲ್ಲಹಳ್ಳಿ ತಾಂಡ ಸಮೀಪ ಸಂಭವಿಸಿದ ಆಟೋ ಅಪಘಾತದಲ್ಲಿ ಇಬ್ಬರು ಮಹಿಳೆಯರು ಸಾವನಪ್ಪಿರುವುದು ಖಚಿವಾಗಿದೆ.
ಮೃತರನ್ನು ಮಾಕಳಿ ಗ್ರಾಮದ ನಿವಾಸಿ ಲಕ್ಷ್ಮಿ (47ವರ್ಷ), ಶಿವಪುರ ಗ್ರಾಮದ ನಿವಾಸಿ ಶಿಲ್ಪ (20ವರ್ಷ) ಎಂದು ಗುರುತಿಸಲಾಗಿದೆ.
ಗೌರಿಬಿದನೂರು ತಾಲೂಕಿನ ಬಸವನಹಳ್ಳಿ ಗ್ರಾಮದ ಪ್ಯಾಸೆಂಜರ್ ಆಟೋದಲ್ಲಿ ದೊಡ್ಡಬಳ್ಳಾಪುರದ ಕಡೆಯಿಂದ ಇಬ್ಬರು ಮಕ್ಕಳು ಸೇರಿದಂತೆ ಏಳು ಮಂದಿ ಪಯಣಿಸುತ್ತಿದ್ದ ವೇಳೆ, ವಾಹನ ಹಿಂದಿಕ್ಕುವ ಭರದಲ್ಲಿ ವೇಗವಾಗಿ ಬಂದ ಟಾಟಾ ಎಸ್ ಐಸ್ಕ್ರೀಂ ಸಂರಕ್ಷಿಸುವ ವಾಹನ ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ.
ಘಟನೆಯಲ್ಲಿ ಲಕ್ಷ್ಮಿ ಸ್ಥಳದಲ್ಲಿಯೇ ಸಾವನಪ್ಪಿದರೆ, ಶಿಲ್ಪ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗದ ನಡುವೆ ಸಾವನಪ್ಪಿದ್ದಾರೆ. ಅಲ್ಲದೆ ಒಂದು ಹೆಣ್ಣು ಮಗುವಿಗೆ ಹಾಗೂ ಓರ್ವ ಮಹಿಳೆಗೆ ಗಾಯಗಳಾಗಿದ್ದು ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತಂತೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಡಿವೈಎಸ್ಪಿ ನಾಗರಾಜ್, ಇನ್ಸ್ಪೆಕ್ಟರ್ ಮುನಿಕೃಷ್ಣ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….