ದೊಡ್ಡಬಳ್ಳಾಪುರ, (ಆ.25): ಚಂದ್ರಯಾನ- 3ರ ವಿಕ್ರಮ್ ಲ್ಯಾಂಡರ್ ಅನ್ನು ಯಶಸ್ವಿಯಾಗಿ ಚಂದ್ರನ ದಕ್ಷಿಣ ಧ್ರುವದ ಮೇಲೆ ಇಳಿಸುವ ಮೂಲಕ ಇಸ್ರೋ ವಿಜ್ಞಾನಿಗಳು ಚರಿತ್ರೆ ಸೃಷ್ಟಿಸಿದ್ದಾರೆ.
ದೇಶದ ವಿವಿಧ ಭಾಗಗಳ ವಿಜ್ಞಾನಿಗಳು ಬೆಂಗಳೂರಿನ ಇಸ್ರೋ ಕೇಂದ್ರದಲ್ಲಿ ಈ ಸಾಧನೆಯನ್ನು ಸಂಭ್ರಮಿಸಿದ್ದರು. ಅವರಲ್ಲಿ ಕರ್ನಾಟಕದ ಅನೇಕ ವಿಜ್ಞಾನಿಗಳೂ ಕೂಡ ಇದ್ದರು.
ಇವರಲ್ಲಿ ದೊಡ್ಡಬಳ್ಳಾಪುರ ತಾಲೂಕಿನ ಇಬ್ಬರು ವಿಜ್ಞಾನಿ ಯಶಸ್ವಿ ಚಂದ್ರಯಾನ- 3ರ ಭಾಗವಾಗಿದ್ದರು ಎನ್ನುವುದು ತಡವಾಗಿ ಬೆಳಕಿಗೆ ಬಂದಿದ್ದು, ಆ ಮೂಲಕ ಭಾರತದ ಚಂದ್ರಯಾನ- 3ರಲ್ಲಿ ದೊಡ್ಡಬಳ್ಳಾಪುರ ಇಬ್ಬರು ವಿಜ್ಞಾನಿಗಳು ಕೊಡುಗೆ ನೀಡಿದ್ದಾರೆ.
ದೊಡ್ಡಬಳ್ಳಾಪುರ ನಗರದ ಕರೇಹಳ್ಳಿ ನಿವಾಸಿ ಲಕ್ಷ್ಮಿದೇವಮ್ಮ ಕುಮಾರ್ ದಂಪತಿಗಳ ಪುತ್ರ ಗೌತಮ್ ಅವರು ಈ ಮಹತ್ವದ ಯೋಜನೆಯಲ್ಲಿ ಭಾಗಿಯಾದ ತಾಲೂಕಿನ ಎರಡನೇ ಸಾಧಕರು.
ಬೆಂಗಳೂರಿನ ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಬಿಇ ಇನ್ ಇಸಿ ಪದವಿ ಪಡೆದಿರುವ 33 ವರ್ಷದ ವಿಜ್ಞಾನಿ ಗೌತಮ್ ಅವರು ಹಲವು ವರ್ಷಗಳಿಂದ ಇಸ್ರೋದಲ್ಲಿ ಕೆಲಸ ಮಾಡುತ್ತಿದ್ದಾರೆಂದು ಮಿತ್ರರು ತಿಳಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಂಡು ಶುಭಕೋರುತ್ತಿದ್ದಾರೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….