ಚಿಕ್ಕಬಳ್ಳಾಪುರ, (ಆ.25): ವರಮಹಾಲಕ್ಷ್ಮೀ ಹಬ್ಬಕ್ಕೆ ಮಡದಿಗೆ ಆನ್‌ಲೈನ್‌ನಲ್ಲಿ ಸೀರೆ ಬುಕ್ ಮಾಡಿದ ತರಕಾರಿ ವ್ಯಾಪಾರಿಯೊಬ್ಬ ಲಕ್ಷ ರೂ. ಕಳೆದು ಕೊಂಡ ಘಟನೆ ಜಿಲ್ಲೆಯ ನೂತನ ತಾಲೂಕು ಚೇಳೂರಿನ ನಲ್ಲಗುಟ್ಲಪಲ್ಲಿ ಗ್ರಾಮ ಪಂಚಾಯತಿ ವ್ಯಾಪ್ತಿಯ ರಾಜುವಾಂಡ್ಲಪಲ್ಲಿ ನಡೆದಿದೆ.
ರಾಜುವಾಂಡ್ಲಪಲ್ಲಿ ಗ್ರಾಮದ ಬಾಲಾಜಿ ನಾಯಕ್ ವಂಚನೆಗೆ ಒಳಗಾದ ತರಕಾರಿ ವ್ಯಾಪಾರಿ.
ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಬಾಲಾಜಿ ನಾಯಕ್ ಮಡದಿಗೆ ಸರ್‌ಪ್ರೈಜ್ ಕೊಡಲು ಆನ್‌ಲೈನ್‌ನಲ್ಲಿ ಸೀರೆ ಬುಕ್ ಮಾಡಿದ್ದಾರೆ. ಒಂದು ವಾರದ ನಂತರ ಮೀಶೊ ಕಂಪನಿಯ ಡೆಲಿವರಿ ಬಾಯ್ ಎಂದು ಬಂದ ಯುವಕ ಬಾಲಾಜಿ ನಾಯಕ್ ಬಳಿ ಬಂದು ಸೀರೆ ಬಂದಿದೆ ಎಂದು ಹೇಳಿ 582 ರೂ. ಹಣವನ್ನು ತನ್ನ ಮೋಬೈಲ್‌ನ ಸ್ಕ್ಯಾನರ್‌ಗೆ ಆನ್ ಲೈನ್‌ನಲ್ಲಿ ಹಾಕಿಸಿಕೊಂಡು ಪಾರ್ಸೆಲ್ ಕೊಟ್ಟು ಹೋದ.
ಪಾರ್ಸಲ್ ಬಾಕ್ಸ್ ತೆರೆದು ನೋಡಿದಾಗ ಹೊಸ ಸೀರೆಯ ಬದಲಿಗೆ ಹಳೆಯ ಪ್ಯಾಂಟ್ ಇತ್ತು.
ಗೂಗಲ್‌ನಲ್ಲಿ ಮಿಶೊ ಕಂಪನಿಯ ಫೋನ್ ನಂಬರ್ ಹುಡುಕಿ, ಮೊಬೈಲ್‌ನಲ್ಲಿ ಸಂಪರ್ಕಿಸಿದಾಗ, ’ರೆಸ್ಟ್ ಡೆಸ್ಕ್’ ಆಪ್ ಡೌನ್‌ಲೋಡ್ ಮಾಡಿಕೊಳ್ಳಿ ಎಂದು ಹೇಳಿದ್ದಾರೆ.
ಬಾಲಾಜಿ ನಾಯಕ್ ಆಪ್ ಡೌನ್‌ಲೋಡ್ ಮಾಡಿಕೊಂಡ ತಕ್ಷಣ ಸಂಪರ್ಕ ಕಡಿತವಾಗಿದೆ. ಇದಾದ ಕೆಲವೇ ನಿಮಿಷಗಳಲ್ಲಿ ತರಕಾರಿ ವ್ಯಾಪಾರಿಯ ಖಾತೆಯಲ್ಲಿದ್ದ 99,450 ರೂಪಾಯಿ ಕಡಿತ ಆಗಿರುವ ಮೆಸೇಜ್ ಬಂದಿದೆ.
ತನಗಾದ ಮೋಸ ಅನ್ಯಾಯದ ಬಗ್ಗೆ ಚೇಳೂರು ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.
ಪ್ರಕರಣ ದಾಖಲಿಸಿದ ಪಿಎಸ್‌ಐ ಹರೀಶ್ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದ ಹಿರಿಯ ಅಧಿಕಾರಿಗಳು ಸರ್ಕಲ್ ಇನ್ಸ್‌ಪೆಕ್ಟರ್ ಪ್ರಶಾಂತ್ ನೇತೃತ್ವದಲ್ಲಿ ಪಿಎಸ್‌ಐ ಹರೀಶ್ ಹಾಗೂ ಸಿಬ್ಬಂದಿಗಳು ತನಿಖೆ ನಡೆಸಿದ್ದಾರೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….