ಹರಿತಲೇಖನಿ ದಿನಕ್ಕೊಂದು ಕಥೆ: ಲಕ್ಷ್ಮಿ – ಸರಸ್ವತಿ ಜಗಳ..!

ಸರಸ್ವತಿ ದೇವಿ ವೀಣೆ ನುಡಿಸುತ್ತಾ ಆನಂದದಿಂದ ಮೈಮರೆತು ಬ್ರಹ್ಮಲೋಕದಲ್ಲಿ ಕುಳಿತಿದ್ದರು. ಅದೇ ಸಮಯಕ್ಕೆ ಲಕ್ಷ್ಮೀದೇವಿಯು ಬ್ರಹ್ಮ ಲೋಕಕ್ಕೆ ಬಂದರು, ಪರಸ್ಪರರು ನಮಸ್ಕರಿಸಿ ಲಕ್ಷ್ಮಿ ಆಸನದಲ್ಲಿ ಕುಳಿತಳು. 

ಸರಸ್ವತಿ ಸಂತೋಷದಿಂದ, ದೇವಿ ಲಕ್ಷ್ಮಿ ನೀವು ಬಂದು ಬ್ರಹ್ಮ ಲೋಕಕ್ಕೆ ಮಂಗಳಮಯವಾದ ಆನಂದ ತಂದಿದ್ದೀರಿ ಎಂದು ಸಂತೋಷದಿಂದ ಹೇಳಿದರು. ಇಲ್ಲ ಇಲ್ಲ ಅಷ್ಟು ಸಮಯ ನನಗಿಲ್ಲ. ಹಾಗೆ ಬಂದೆ ಅಷ್ಟೇ ಈಗಲೇ ಹೋಗಬೇಕು. ನಾನು ಜನಕಲ್ಯಾಣ ಸೇವೆಯ ಕಾರ್ಯದಲ್ಲಿ ಸದಾ ಮುಳುಗಿರುತ್ತೇನೆ ಏಕೆಂದರೆ ನಾನು ‘ಲಕ್ಷ್ಮಿ’ ನಾನಿಲ್ಲದೆ ಯಾವ ಕೆಲಸಗಳು ನಡೆಯುವುದಿಲ್ಲ. 

ಇಡೀ ಜಗತ್ತೇ ನನ್ನನ್ನು ಆದರಿಸುತ್ತದೆ. ಭೂಮಿಯಲ್ಲಿರುವ ಮನೆಮನೆಗಳಲ್ಲೂ ನನ್ನ ಬರುವಿಕೆಗಾಗಿ ಕಾಯುತ್ತಿರುತ್ತಾರೆ. ಸ್ವಾಗತಕ್ಕೆ ಸದಾ ಸಿದ್ಧತೆ ಮಾಡಿಕೊಂಡಿರುತ್ತಾರೆ. ಏಕೆಂದರೆ ನಾನು ಸುಖವಾಗಿರಲು ಸಂಪತ್ತನ್ನು ಅನುಗ್ರಹಿಸುತ್ತೇನೆ. ಸಂಪತ್ತಿನಿಂದ ಎಲ್ಲರೂ ಖುಷಿಖುಷಿಯಾಗಿ ಇರುತ್ತಾರೆ. ಎಂದು ಲಕ್ಷ್ಮಿ ಹೇಳಿದಳು.

ಆಗ ಸರಸ್ವತಿ ದೇವಿ, ಲಕ್ಷ್ಮಿ ನೀನು ಹೇಳಿದ್ದು ಸರಿ, ಆದರೆ ಕೇವಲ ಸಂಪತ್ತು ಇದ್ದರೆ ಮನುಷ್ಯನ ಬುದ್ಧಿ ಸ್ಥಿಮಿತದಲ್ಲಿ ಇರುವುದಿಲ್ಲ. ಹಣ ಸಿಕ್ಕರೆ ಅವನ ಮನಸ್ಸು ಚಂಚಲವಾಗಿ ಎಲ್ಲಿಂದ ಎಲ್ಲಿಗೋ ಓಡುತ್ತದೆ. ಸಂಪತ್ತು ಸಿಕ್ಕಮೇಲೆ ಅಧಿಕಾರದ ಆಸೆ ಬರುತ್ತದೆ. ಅದು ಸಿಕ್ಕ ಮೇಲೆ ಅಹಂಕಾರ ಬರುತ್ತದೆ. 

ಆದ್ದರಿಂದ ಸಂಪತ್ತಿಗಿಂತ ಮನುಷ್ಯನಿಗೆ ಜ್ಞಾನ ಬಹಳ ಅಗತ್ಯವಾಗಿದೆ. ಜ್ಞಾನವಿದ್ದ ಮನುಷ್ಯ ಏನನ್ನು ಅಪೇಕ್ಷೆ ಪಡುವುದಿಲ್ಲ ಜ್ಞಾನ ಪಡೆಯಲು ಮಂದಿರಕ್ಕೆ ಬಂದು ಪ್ರಾರ್ಥಿಸುತ್ತಾರೆ. ಜ್ಞಾನವನ್ನು ಸಂಪತ್ತಿನಿಂದ ಕೊಳ್ಳಲು ಬರುವುದಿಲ್ಲ. ಜ್ಞಾನವಿಲ್ಲದ ಮನುಷ್ಯನಿಗೆ ಎಳ್ಳು ಕಾಳಷ್ಟು ಬೆಲೆ ಇಲ್ಲ. ಸಂಪತ್ತಿನಿಂದ ಕೇವಲ ಸುಖ ಮಾತ್ರ ಸಿಗುತ್ತದೆ. ಜ್ಞಾನ ಬುದ್ಧಿಯಿಂದ ಗೌರವ ದೊರೆಯುತ್ತದೆ. ಆಸ್ತಿ ಅಂತಸ್ತಿಗಿಂತ, ಜ್ಞಾನಕ್ಕೆ ಜನರು ತಲೆಬಾಗುತ್ತಾರೆ ಎಂದರು.

ಆಗ ಲಕ್ಷ್ಮಿಯು ಸಂಪತ್ತಿಗಿರುವ ಬೆಲೆ ಯಾವ ವಿದ್ಯೆಗೂ ಇಲ್ಲ. ಬಡತನವು ಮನುಷ್ಯನಿಗೆ ಒಂದು ಶಾಪ. ವಿದ್ಯೆ ಇಲ್ಲದಿದ್ದರೂ ನಡೆಯುತ್ತದೆ. ಆದರೆ ಧನ ವಿಲ್ಲದೆ ಯಾರಿಗೂ ನೆಮ್ಮದಿಯಾಗಿರಲು ಸಾಧ್ಯವಿಲ್ಲ ಎನ್ನುತ್ತಾರೆ.

ಆಗ ಸರಸ್ವತಿ ದೇವಿ ನಿನ್ನ ಸಂಪತ್ತು. ಮನೆಯಲ್ಲಿ ತುಂಬಿರಲು ಮಾತ್ರ ಸಾಧ್ಯ. ಆದರೆ ನಾನು ಜ್ಞಾನ, ವಿದ್ಯೆ, ಕಲೆ, ಇವುಗಳಿದ್ದರೆ ಜಗತ್ತಿನೆಲ್ಲೆಡೆ ಉಪಯೋಗಕ್ಕೆ ಬರುತ್ತದೆ. ಋಷಿ ಮುನಿಗಳಿಂದ ಹಿಡಿದು ದೇವಾನುದೇವತೆಗಳು ಜ್ಞಾನ ಸಂಪಾದನೆಗಾಗಿ, ತಪಸ್ಸು ವ್ರತ ನಿಯಮಗಳನ್ನು ಮಾಡುತ್ತಾರೆ. ಸಂಪತ್ತನ್ನು ಯಾರು, ಯಾವಾಗ ಬೇಕಾದರೂ ದೋಚಬಹುದು. ಆದರೆ ವಿದ್ಯೆಯನ್ನು ಯಾರೂ ಕದಿಯಲು ಸಾಧ್ಯವಿಲ್ಲ.

ಐಶ್ವರ್ಯ. ಇದ್ದರೆ ನೆಮ್ಮದಿ ಇರುವುದಿಲ್ಲ ಜ್ಞಾನವಿದ್ದಲ್ಲಿ ಶಾಂತಿ ವಿವೇಕ, ಇರುತ್ತದೆ. ರಾಜ – ಮಹಾರಾಜರಿಗೆ ಸಂಪತ್ತಿದ್ದರೆ ಸಾಲುವುದಿಲ್ಲ ಜ್ಞಾನವಿಲ್ಲದ ರಾಜನಿಂದ ಯಾವ ದೇಶವು ಉದ್ಧಾರವಾಗಿಲ್ಲ. ರಾಜ‌ ಮುಕುಟ ಲಕ್ಷಣವೇ ಶ್ರೇಷ್ಠತೆ ಮತ್ತು ಜ್ಞಾನದ ಪ್ರತೀಕ. ರಾಜ ತಿಲಕವು, ಬಲ, ಶಕ್ತಿ, ಜ್ಞಾನ ಮತ್ತು ತೇಜಸ್ಸಿನ ಭಂಡಾರ. ರಾಜನ ಜೊತೆ ಯಾವಾಗಲೂ ಬುದ್ಧಿವಂತ ಮಂತ್ರಿಗಳೇ ಇರಬೇಕು.

ರಕ್ಷಣೆಗೆ, ಧೈರ್ಯಕ್ಕೆ, ವ್ಯವಸ್ಥೆಗಳಿಗೆ ಜ್ಞಾನವೇ ಅಗತ್ಯ. ಜ್ಞಾನದ ಸರ್ವಾಭರಣ, ಸರ್ವಭೂಷಣ ಜ್ಞಾನವಿಲ್ಲದಿದ್ದರೆ ನಿನ್ನ ಸಂಪತ್ತು ಅರ್ಥವನ್ನೇ ಕಳೆದುಕೊಳ್ಳುತ್ತದೆ. ಸಂಗೀತ, ಸಾಹಿತ್ಯ, ಕಲೆ, ವಾಕ್ಚಾತುರ್ಯ ನೃತ್ಯ, ಅಭಿನಯ, ಇದೆಲ್ಲವೂ ಜ್ಞಾನದ ಮಹತ್ವವನ್ನು ತಿಳಿಸುತ್ತವೆ ಎಂದಳು. ಜ್ಞಾನಕ್ಕಾಗಿ ಹಪಹಪಿಸುವ ಜನರು ಎಲ್ಲೆಡೆಯೂ ಕಾಣುತ್ತಾರೆ. ವಿದ್ಯೆ ಬುದ್ಧಿ ಜ್ಞಾನ ಇದ್ದ ಕುಟುಂಬಗಳು ಸಂತೋಷವಾಗಿವೆ.

ಆಗ ಲಕ್ಷ್ಮೀ, ಮಾತೆ ಸರಸ್ವತಿ ನಿನ್ನ ಮೋಡಿ ಮಾಡುವ ಮಾತುಗಳಿಗೆ ನಾನು ಮರಳಾಗುವುದಿಲ್ಲ. ಧನ ಸಂಪತ್ತು ಇದ್ದಲ್ಲಿ ನೃತ್ಯ, ಹಾಸ್ಯ, ವೈಭೋಗ, ಆಭರಣ, ಅಲಂಕಾರ, ನಗು, ನೆಮ್ಮದಿ, ಹೆಮ್ಮೆ, ಒಳ್ಳೆಯ ಭೋಜನ. ಎಲ್ಲಾ ತುಂಬಿರುತ್ತದೆ. ಸಂಪತ್ತಿಲ್ಲದ ಬರೀ ಜ್ಞಾನವಿದ್ದ ಕಡೆ ಯಾವಾಗಲೂ ನರಳಾಟ, ಅಳು, ಒದ್ದಾಟ, ಹಸಿವು, ಬಡಿದಾಟ, ಅವಮಾನ, ತುಂಬಿರುತ್ತದೆ. ಆದ್ದರಿಂದ ನಾನೇ ಎಲ್ಲರಿಗಿಂತ ಶ್ರೇಷ್ಠ ಎಂದು ಲಕ್ಷ್ಮಿ ವಾದಿಸಿದರು.

ಇಬ್ಬರಲ್ಲೂ ವಾಗ್ವಾದ ನಡೆದು, ನಮ್ಮಿಬ್ಬರಲ್ಲಿ ಯಾರು ಶ್ರೇಷ್ಠರೆಂದು ಹೇಳಲು ಭಗವಾನ್ ವಿಷ್ಣುವೇ ಸರಿ ಅಲ್ಲಿಗೆ ಹೋಗೋಣ ಎಂದು ನಿರ್ಣಯಿಸಿದರು.‌ ಲಕ್ಷ್ಮಿ, ಸರಸ್ವತಿಯನ್ನು ವೈಕುಂಟಕ್ಕೆ ಆಹ್ವಾನಿಸಿದಳು. ಇಬ್ಬರೂ ವೈಕುಂಟಕ್ಕೆ ಬಂದ ಸಮಯದಲ್ಲಿ ವಿಷ್ಣು ಯೋಗ ನಿದ್ರೆಗೆ ಜಾರಿದ್ದರು. ಅವನ ಪಾದದ ಬಳಿ ಗಂಗೆ ಕುಳಿತಿದ್ದರು. ಲಕ್ಷ್ಮಿ ಬಂದವರೆ ಸೀದಾ ಹೋಗಿ ವಿಷ್ಣುವಿನ ಹೃದಯದ ಹತ್ತಿರ ಕುಳಿತರು.

ನಿಂತೇ ಇದ್ದ ಸರಸ್ವತಿ ಕೇಳಿದರು. ಲಕ್ಷ್ಮಿ ನೀವೇ ಆಹ್ವಾನಿಸಿ ಇಲ್ಲಿಗೆ ಬಂದ ಮೇಲೆ ನನಗೆ ಕುಳಿತುಕೊಳ್ಳಲು ಆಸನವನ್ನು ತೋರಿಸದೆ ನೀವು ಸ್ವತಹ ಹೋಗಿ ಕುಳಿತಿರಿ.‌ ಅತಿಥಿಗಳಿಗೆ ಸತ್ಕಾರ ಮಾಡುವ ಕ್ರಮ ವೈಕುಂಠದಲ್ಲಿ ಇದೇ ರೀತಿಯೇ? ಎಂದು ಕೇಳಿದಾಗ, ಹರಿಯ ಪದತಳದಲ್ಲಿ ಕುಳಿತ ಗಂಗೆಯು ಕ್ಷಮಿಸಿ ದೇವಿ ಸರಸ್ವತಿ, ಲಕ್ಷ್ಮಿನಿವಾಸ ನಾರಾಯಣನ ಹೃದಯಕಮಲದಲ್ಲಿ, ಇನ್ನು ತಮ್ಮ ಚರಣಕಮಲದ ಹತ್ತಿರ ಕುಳಿತಿರಲು ನನಗೆ ವಿಷ್ಣುವೇ ಜಾಗ ಕಲ್ಪಿಸಿದ್ದಾರೆ. ತಮಗೆ ಇಲ್ಲಿ ಸ್ಥಾನದ ಕೊರತೆಯಿದೆ ಎಂದರು.

ಸರಸ್ವತಿ ಸಿಟ್ಟಿನಿಂದ ಇದು ನನ್ನ ಸಮಸ್ಯೆಯಲ್ಲ. ಕರೆದುಕೊಂಡು ಬಂದು ಲಕ್ಷ್ಮೀ ತನ್ನ ಸ್ಥಾನವನ್ನು ಅತಿಥಿಗೆ ಬಿಟ್ಟು ಕೊಡಬೇಕಿತ್ತು. ಇದು ಅವಳ ಅಹಂಕಾರದ ಪರಮಾವಧಿ ಎಂದರು. ಆಗ ಲಕ್ಷ್ಮಿಯು ಸುಮ್ಮನಿರದೆ, ನಾನು ವಿಷ್ಣುವಿನ ಹೃದಯದ ಸ್ಥಾನವನ್ನು ಎಂದಿಗೂ ಯಾರಿಗೂ ಕುಳಿತು ಕೊಳ್ಳಲು ಬಿಟ್ಟುಕೊಡಲಾರೆ ಸಿಟ್ಟಿನಿಂದ ಹೇಳಿದಾಗ, ಸರಸ್ವತಿಯು ಭಗವಾನ್ ವಿಷ್ಣುವು ವಿದ್ಯಾ, ಬುದ್ಧಿ ಜ್ಞಾನಗಳನ್ನು ಆದರಣೀಯವಾಗಿ ಕಾಣುತ್ತಾರೆ. ಆದ್ದರಿಂದ ನಿಮ್ಮೆಲ್ಲರಿಗಿಂತ ಎತ್ತರದ ಸ್ಥಾನವನ್ನು ನನಗೆ ಕೊಡುತ್ತಾರೆ. ಅಲ್ಲಿಯವರೆಗೂ ಕಾಯುತ್ತೇನೆ ಎಂದರು. 

ದೇವಿ ಸರಸ್ವತಿ ನೀವು ಎಷ್ಟು ಸಮಯ ಕಾದರೂ ಯೋಗ ನಿದ್ರೆಗೆ ಜಾರಿದ ಶ್ರೀಹರಿಯು ಎಚ್ಚರವಾಗಲು ಬಹಳ ಸಮಯ ಬೇಕು. ಎಷ್ಟೇ ಕಾಲವಾದರೂ ಸರಿಯೇ ನಾನು ಶ್ರೀ ಹರಿಯು ಕೊಡುವ ಸ್ಥಾನಕ್ಕೆ ಕಾಯುತ್ತೇನೆ. ಆದರೆ ಈ ದಿನ ದೇವಿ ಲಕ್ಷ್ಮಿ ನನಗೆ ಘೋರ ಅಪಮಾನ ಮಾಡಿದ್ದಿ, ಇದನ್ನು ನಾನು ಸಹಿಸುವುದಿಲ್ಲ. ಎಂಬ ಮಾತಿಗೆ ಗಂಗೆಯು ಲಕ್ಷ್ಮಿ ಸರಿಯಾಗಿ ಮಾಡಿದ್ದಾಳೆ ತಪ್ಪೇನೂ ಇಲ್ಲ ಎಂದರು.

ಸರಸ್ವತಿ ಕೋಪದಿಂದ ಗಂಗೆ ನಮ್ಮಿಬ್ಬರ ಮಾತಿನ ನಡುವೆ ನೀನು ಹೇಗೆ ಬಾಯಿ ಹಾಕುತ್ತಿ ಇದು ನಿನಗೆ ಶೋಭೆ ತರುವುದಿಲ್ಲ. ನನ್ನ ಜ್ಞಾನ, ವಿದ್ಯೆ – ಬುದ್ಧಿ, ಕಲೆಗಳಿಗೆ, ವಿಷ್ಣು ಅತ್ಯಂತ ಎತ್ತರದ ಸ್ಥಾನ ಕೊಡುತ್ತಾರೆ ಎಂದರು.

ಇದನ್ನು ಕೇಳಿದ ಲಕ್ಷ್ಮಿ, ಇಲ್ಲ ಇಲ್ಲ ಸರಸ್ವತಿ ಅಂತಹ ದಿನಗಳು ಬರುವುದಿಲ್ಲ. ನನಗಲ್ಲದೆ ಆ ಸ್ಥಾನ ಯಾರಿಗೂ ಕೊಡುವುದಿಲ್ಲ. ಇದನ್ನು ನಾನು ಒಪ್ಪಲ್ಲ ಎಂದಾಗ, ಲಕ್ಷ್ಮಿಯು ಈ ಜಗಳ ಗಂಗೆಯಿಂದ ಆರಂಭವಾಗಿ ಅದನ್ನು ನೀನು ದೊಡ್ಡದು ಮಾಡಿದೆ. ಇದರಲ್ಲಿ ನನ್ನನ್ನೇ ಎಳೆದಿರಿ ಎಂದು ಸರಸ್ವತಿಯ ಮೇಲೂ ಆರೋಪಿಸಿ. ನೀನು ನನ್ನ ಅಷ್ಟೈಶ್ವರ್ಯದ ಸಂಪತ್ತಿನ ಲೋಕದಲ್ಲಿ ಇರಲು ಸಾಧ್ಯವಿಲ್ಲ. ಆದಿಪರಾಶಕ್ತಿ ಹತ್ತಿರ ಹೋಗು ಅಲ್ಲಿ ನಿನಗೆ ನ್ಯಾಯ ಸಿಗುತ್ತದೆ ಅದೇ ಸರಿಯಾದ ಸ್ಥಾನ ಎಂದು ಅಬ್ಬರಿಸಿದರು.

ಆಗ ಸರಸ್ವತಿಯು ಆಯ್ತು ನಾನು ಹೊರಡುತ್ತೇನೆ. ಆದರೆ ನಿನ್ನ ಇಷ್ಟೊಂದು ದುರಹಂಕಾರಕ್ಕೆ ತಕ್ಕಶಾಸ್ತಿ ಮಾಡುತ್ತೇನೆ. ಲಕ್ಷ್ಮಿ ದೇವಿ ನೀನು ನಿನ್ನ ಸ್ವಸ್ಥಾನದಿಂದ ದೂರವಾಗಿ ಅಂದರೆ ವಿಷ್ಣು ಲೋಕದಿಂದ ಭೂಮಿಗೆ ಹೋಗಿ ಸಾಮಾನ್ಯ ಸ್ತ್ರೀಯಂತೆ ಜನಿಸು ಎಂದು ಶಾಪ ಕೊಟ್ಟರು. ಈ ಪ್ರಕಾರ ಲಕ್ಷ್ಮಿ ವಿಷ್ಣು ಲೋಕದಿಂದ ದೂರವಾಗಿ ಪೃಥ್ವಿಯಲ್ಲಿ ತುಳಸಿ ಗಿಡವಾಗಿ ಹುಟ್ಟ ಬೇಕಾಯಿತು.

ಇದನ್ನು ಕೇಳಿದ ಗಂಗೆಗೆ ಸಿಟ್ಟು ಬಂದು ಸರಸ್ವತಿ ನೀನು ಸಹ ಭೂಮಿಯಲ್ಲಿ ನದಿಯಾಗಿ ಜನ್ಮ ತಾಳಿ ಪ್ರವಾಹದಂತೆ ಹರಿಯುತ್ತಿರು ಎಂದು ಶಾಪ ಕೊಟ್ಟರು‌. ಇದಕ್ಕೆ ಪ್ರತಿಯಾಗಿ, ಸರಸ್ವತಿ ದೇವಿ ಗಂಗೆ ನಿನಗೆ ಸಂಬಂಧವಿಲ್ಲದಿದ್ದರೂ ಆಗಿನಿಂದ ಮೂಗು ತೂರಿಸಿಕೊಂಡು ಬರುತ್ತಿದ್ದಿ, ಆದ್ದರಿಂದ ನೀನು ಸಹ ಭೂಮಿಯಲ್ಲಿ ಗಂಗಾನದಿಯಾಗಿ ಜನಿಸಿ ಜನಗಳು ಮಾಡಿದಾಗೆಲ್ಲಾ ಪಾಪಗಳನ್ನು ತೊಳೆಯುವವಂತಾಗು ಎಂದು ಗಂಗೆಗೆ ಶಾಪ ಕೊಟ್ಟರು.

ಇಬ್ಬರು ಶಕ್ತಿದೇವತೆಗಳ ಜಗಳವನ್ನು ಕುರಿತು ಕಾಳಿಮಾತೆ, ಪಾರ್ವತಿ ದೇವಿಯನ್ನು ಹೀಗೇಕೆ ಶಕ್ತಿದೇವತೆಯರು ಜಗಳವಾಡಿದರು ಎಂದು ಕೇಳಿದಾಗ, ಎರಡು ಶಕ್ತಿದೇವತೆಗಳ ನಡುವೆ ಈ ತರಹ ಜಗಳ ಒಂದು ಒಳ್ಳೆಯ ಉದ್ದೇಶಕ್ಕಾಗಿ ಆಗಲೇ ಬೇಕಿತ್ತು ಆ ಸಮಯ ಈಗ ಬಂದಿತ್ತು. 

ಇದು ಐಶ್ವರ್ಯದ ಮದ, ಜ್ಞಾನದ ಅಹಂಕಾರದ ನಡುವೆ ನಡೆದ ವಾಗ್ವಾದ. ಈ ಮೂರು ಜನ ದೇವಿಯರು ಪರಸ್ಪರರು ಶಾಪ ಕೊಡಲು ಕಾರಣವೇನು ಎಂದಾಗ, ಇವೆಲ್ಲವೂ ಜನಕಲ್ಯಾಣಕ್ಕೋಸ್ಕರವೇ ಆಗಿದೆ. 

ಶ್ರೀ ಲಕ್ಷ್ಮಿ ದೇವಿ ರಾಜ ಧರ್ಮ ದ್ವಜನ ಮಗಳಾಗಿ ತುಳಸಿ ರೂಪದಲ್ಲಿ ಜನ್ಮ ತಾಳಿದರೆ, ದೇವಿ ಸರಸ್ವತಿ ಜನಗಳಿಗೆ ಕಲ್ಯಾಣಕ್ಕಾಗಿ ನದಿಯಾಗಿ ಹುಟ್ಟಿ ಹರಿಯುತ್ತಾಳೆ. 

ಇನ್ನು ದೇವಿ ಗಂಗಾ ಭೂಲೋಕವನ್ನೇ ಪವಿತ್ರಗೊಳಿಸಲು ರಾಜ ಮಹಾನ್ ತಪಸ್ವಿ, ಭಗೀರಥನ ಹಿಂದೆ ಭೂಮಿಗೆ ಬಂದು ಜನಗಳ ಪಾಪಗಳನ್ನು ತೊಳೆಯುತ್ತಾಳೆ. ಕಾಳಿಕಾಂಬೆ ದೇವಿ ಪಾರ್ವತಿ ಯೋಜನೆ ತಿಳಿದು ಹರ್ಷಗೊಂಡರು.

ವೈಕುಂಠದಲ್ಲಿ ಲಕ್ಷ್ಮಿಯು ಚಿಂತಿಸುತ್ತಾ, ನಾರಾಯಣನಿಗೆ, ಸ್ವಾಮಿ, ಸರಸ್ವತಿ ನನಗೆ ಪೃಥ್ವಿಯಲ್ಲಿ ಸಾಧಾರಣ ಮಾನವರಂತೆ ಜನಿಸಲು ಶಾಪ ಕೊಟ್ಟಿದ್ದಾಳೆ. ದೇವಿ ಚಿಂತಿಸ ಬೇಡ ಇದು ಶಾಪದ ಕಾರಣವಲ್ಲ ವಿಧಿಯ ವಿಧಾನವೇ ಹೀಗಿದೆ. ಇದು ನನಗೆ ಮುಂಚಿತವಾಗಿಯೇ ಗೊತ್ತಿತ್ತು. ಭೂಮಿಯಲ್ಲಿ ಧರ್ಮಧ್ವಜನೆಂಬ ರಾಜನು ಸಂತಾನಕ್ಕಾಗಿ, ಚಳಿ, ಮಳೆ, ಗಾಳಿ, ಬಿಸಿಲು ಎನ್ನದೆ ಕ್ರೂರಮೃಗಗಳ ಕಾಡಿನ ನಡುವೆ ಕುಳಿತು ಘೋರ ತಪಸ್ಸು ಮಾಡುತ್ತಿದ್ದಾನೆ ಅವನ ಮೈಯ್ಯೆಲ್ಲಾ ಮಣ್ಣಿನ ಹುತ್ತಗಳಾಗಿ, ಕ್ರಿಮಿಕೀಟಗಳು ವಾಸಿಸುತ್ತಿವೆ.

ನೀನು ಅವನ ಸಂತಾನವಾಗಿ ಹುಟ್ಟಬೇಕೆಂದು ಮಹಾನ್ ತಪಸ್ವಿ ಧರ್ಮಧ್ವಜನು ಕಠಿಣ ತಪಸ್ಸು ಮಾಡುತ್ತಿದ್ದಾನೆ. ಭೂಮಿಯಲ್ಲಿ ಅವನ ಸಂತಾನವಾಗಿ ಲೋಕ ಕಲ್ಯಾಣ ವನ್ನು ಮಾಡಿ, ಸ್ವಲ್ಪ ದಿನಗಳು ಜನರಿಗೆ ಕಲ್ಯಾಣವನ್ನು ಮಾಡಿ ನಂತರ ಬಂದು ವೈಕುಂಟದಲ್ಲಿ ನೆಲೆಸುತ್ತಿ ಎಂದು ನುಡಿದನು. ಭೂಭಾರವನ್ನು ಕಡಿಮೆ ಮಾಡಲು ಅದರ್ಮ ನಾಶಮಾಡಲು ವಿಷ್ಣುವಿನ ಅಂಶ ರಾಮ – ಕೃಷ್ಣರು ಮಾನವ ಅವತಾರವೆತ್ತಿದಂತೆ, ಶಕ್ತಿ ದೇವತೆಯರ ಶ್ರೇಷ್ಠತೆಯ ಜಗಳ ಲೋಕಕಲ್ಯಾಣಕ್ಕಾಗಿಯೇ ಕಾರ್ಯ – ಕಾರಣ ನಿಮಿತ್ತವಾಗಿ ನಡೆದಿದ್ದು, ದೇವಿಯರ ಅಂಶಗಳು ಮಾನವ ಸಂಕುಲದ ಉದ್ಧಾರಕ್ಕಾಗಿ ಭೂಮಿಯಲ್ಲಿ ಜನ್ಮ ತಾಳುವಂತಾಯಿತು.

ಕೃಪೆ: ವಿಷಯ

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

ರಾಜಕೀಯ

ಧರ್ಮದ ವಿಚಾರದಲ್ಲಿ ರಾಜಕೀಯ ಬೇಡ; ನಾವು ಅವರ ಪರವೂ ಇಲ್ಲ,‌ ಇವರ ಪರವೂ ಇಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್

ಧರ್ಮದ ವಿಚಾರದಲ್ಲಿ ರಾಜಕೀಯ ಬೇಡ; ನಾವು ಅವರ ಪರವೂ ಇಲ್ಲ,‌ ಇವರ ಪರವೂ

"ನಾವು ಅವರ (ಧರ್ಮಸ್ಥಳ) ಪರವೂ ಇಲ್ಲ, ಇವರ ಪರವೂ ಇಲ್ಲ. ನಾವು ನ್ಯಾಯದ ಪರ. ಧರ್ಮದ ವಿಚಾರದಲ್ಲಿ ರಾಜಕಾರಣ ಮಾಡಬೇಡಿ ಎಂದಷ್ಟೇ ನಾವು ಹೇಳುತ್ತಿದ್ದೇವೆ": ಡಿಸಿಎಂ ಡಿ.ಕೆ.ಶಿವಕುಮಾರ್ (D.K. Shivakumar)

[ccc_my_favorite_select_button post_id="113000"]
2ನೇ ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ಹಸಿರು ನಿಶಾನೆ ತೋರಿದ ಸಂಸದೆ ಡಾ;ಪ್ರಭಾ ಮಲ್ಲಿಕಾರ್ಜುನ್

2ನೇ ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ಹಸಿರು ನಿಶಾನೆ ತೋರಿದ ಸಂಸದೆ ಡಾ;ಪ್ರಭಾ ಮಲ್ಲಿಕಾರ್ಜುನ್

ದಾವಣಗೆರೆ: ಬೆಂಗಳೂರು-ದಾವಣಗೆರೆ- ಬೆಳಗಾವಿಗೆ ವಂದೇ ಭಾರತ್ ಎಕ್ಸ್‍ಪ್ರೆಸ್ (Vande Bharat Express) ರೈಲು ಸೇವೆಯಿಂದ ಶಿಕ್ಷಣ, ಆರೋಗ್ಯ ಸೇವೆಯ ಅನುಕೂಲದ ಜೊತೆಗೆ ವ್ಯಾಪಾರ ವಹಿವಾಟು ವೃದ್ದಿಯಾಗಲಿದೆ ಎಂದು ಸಂಸದರಾದ ಡಾ; ಪ್ರಭಾ ಮಲ್ಲಿಕಾರ್ಜುನ್ (Dr.

[ccc_my_favorite_select_button post_id="112408"]
Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

ಹಳೆ ದ್ವೇಷದ ಹಿನ್ನೆಲೆ ಎರಡು ಗ್ಯಾಂಗ್‌ಗಳ ನಡುವೆ ಮಾರಾಮಾರಿ ನಡೆದಿದೆ. ದೊಣ್ಣೆ, ಮಾರಕಾಸ್ತ್ರಗಳಿಂದ ಪರಸ್ಪರ ಹೊಡೆ ದಾಡಿಕೊಂಡಿದ್ದಾರೆ. Crime News;

[ccc_my_favorite_select_button post_id="110866"]
ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಪ್ರವಾಸದಲ್ಲಿರುವ ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ತಮ್ಮ ಪ್ರವಾಸದ ಎರಡನೇ ದಿನವೂ ಇಲ್ಲಿನ ಆಡಳಿತ

[ccc_my_favorite_select_button post_id="110371"]

ಕ್ರೀಡೆ

ಮಂಡ್ಯದ ಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ: ಡಿ.ಕೆ.ಶಿವಕುಮಾರ್

ಮಂಡ್ಯದ ಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ: ಡಿ.ಕೆ.ಶಿವಕುಮಾರ್

ಒಡಿಶಾದ ಭುವನೇಶ್ವರದಲ್ಲಿ‌ ಇದೇ ತಿಂಗಳ 10ರಂದು ನಡೆದ ವಿಶ್ವ ಅಥ್ಲೆಟಿಕ್ಸ್ ನ ಕಾಂಟಿನೆಂಟಲ್ ಕೂಟದ ಮಹಿಳೆಯರ ವಿಭಾಗದ 400 ಮೀಟರ್ ಓಟದಲ್ಲಿ ಚಿನ್ನದ ಪದಕ ಗಳಿಸಿದ ರಾಜ್ಯಕ್ಕೆ ಕೀರ್ತಿ ತಂದ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ

[ccc_my_favorite_select_button post_id="112580"]
ದೊಡ್ಡಬಳ್ಳಾಪುರ: ಹೆಂಡ ಸಾಗಿಸುತ್ತಿದ್ದ ಮಹಿಳೆಯ ಬಂಧನ.. 70 ಲೀಟರ್‌ ಹೆಂಡ ವಶ..!

ದೊಡ್ಡಬಳ್ಳಾಪುರ: ಹೆಂಡ ಸಾಗಿಸುತ್ತಿದ್ದ ಮಹಿಳೆಯ ಬಂಧನ.. 70 ಲೀಟರ್‌ ಹೆಂಡ ವಶ..!

ನೆರೆ ರಾಜ್ಯದಿಂದ ಅಕ್ರಮವಾಗಿ ಹೆಂಡ (Toddy) ಸಾಗಿಸುತ್ತಿದ್ದ ಮಹಿಳೆಯನ್ನು ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.

[ccc_my_favorite_select_button post_id="112911"]
ದೊಡ್ಡಬಳ್ಳಾಪುರ: ಮಳೆಗೆ ಟ್ರಾಕ್ಟರ್ ಕಾಣದೆ ಡಿಕ್ಕಿ.. ಬೈಕ್ ಸವಾರ ಸ್ಥಳದಲ್ಲೇ ಸಾವು..!

ದೊಡ್ಡಬಳ್ಳಾಪುರ: ಮಳೆಗೆ ಟ್ರಾಕ್ಟರ್ ಕಾಣದೆ ಡಿಕ್ಕಿ.. ಬೈಕ್ ಸವಾರ ಸ್ಥಳದಲ್ಲೇ ಸಾವು..!

ಮಳೆಯ ವೇಳೆ ವಾಹನ ಸವಾರರು ಎಷ್ಟು ಮುಂಜಾಗ್ರತೆ ಸಾಲದು. ಏಕೆಂದರೆ ನಿನ್ನೆ ಸಂಜೆ ಸುರಿದ ಭಾರಿ ಮಳೆಯ ಕಾರಣ ರಸ್ತೆ ಬದಿಯಲ್ಲಿ ಕೆಟ್ಟು ನಿಂತಿದ್ದ ಟ್ರಾಕ್ಟರ್ ಕಾಣದೆ Accident

[ccc_my_favorite_select_button post_id="112435"]

ಆರೋಗ್ಯ

ಸಿನಿಮಾ

ಗುಡ್ಮಾರ್ನಿಂಗ್ ನ್ಯೂಸ್: ಇಂದು ಚುನಾವಣೆ ಆಯೋಗ ಸುದ್ದಿಗೋಷ್ಠಿ

ಗುಡ್ಮಾರ್ನಿಂಗ್ ನ್ಯೂಸ್: ಇಂದು ಚುನಾವಣೆ ಆಯೋಗ ಸುದ್ದಿಗೋಷ್ಠಿ

ಕಾಂಗ್ರೆಸ್ (Congress) ಮಾಡಿರುವ ಓಟ್ ಚೋರಿ ಆರೋಪ ದಿನೇದಿನೇ ತೀವ್ರ ಸ್ವರೂಪ ಪಡೆಯುತ್ತಿದ್ದು, ಚುನಾವಣೆ ಆಯೋಗ (Election Commission) ಹಾಗೂ ಕೇಂದ್ರ ಸರ್ಕಾರದ (Central Government) ವಿರುದ್ಧ ಅನುಮಾನ ಹೆಚ್ಚಿಸುವಂತೆ ಮಾಡುತ್ತಿದೆ‌.

[ccc_my_favorite_select_button post_id="112714"]
error: Content is protected !!