ಶಿರಸಿ, (ಮಾ.08): ಅಂಗನವಾಡಿ ಮಕ್ಕಳಿಗೆ ಬಾವಿ ತೋಡಿ ನೀರು ತರಿಸಿದ ಶಿರಸಿಯ ಗಣೇಶ ನಗರದ ಗೌರಿ ನಾಯ್ಕ ಅವರನ್ನು ಸಂಸದ ಅನಂತಕುಮಾರ್ ಹೆಗಡೆ ಸನ್ಮಾನಿಸಿದ್ದಾರೆ.
ಮಹಿಳಾ ದಿನಾಚರಣೆಯ ನಿಮಿತ್ತ ಗೌರಿ ನಾಯ್ಕ ಅವರನ್ನು ಅವರ ಸ್ವಗೃಹದಲ್ಲಿ ಸಂಸದ ಅನಂತಕುಮಾರ ಹೆಗಡೆ ಸನ್ಮಾನಿಸಿದರು.
ಈ ಬಗ್ಗೆ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಗಂಗೆಯನ್ನು ಗೆದ್ದ ಗೌರಿಗೆ ಜಲಗೌರಿ ಎಂಬ ಬಿರುದು ನೀಡಿ ಸನ್ಮಾನ ಮಾಡಲಾಗಿದೆ ಎಂದು ಬರೆದುಕೊಂಡಿದ್ದಾರೆ.
ಹಿನ್ನಲೆ; ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಗಣೇಶನಗರದಲ್ಲಿ ಅಂಗನವಾಡಿ ಮಕ್ಕಳಿಗೋಸ್ಕರ ಕಳೆದ ಜನವರಿ 30ನೇ ತಾರೀಕಿನಿಂದ ಗೌರಿ ನಾಯ್ಕ ಅವರು ಅಂಗನವಾಡಿಯ ಹಿಂಭಾಗದ ಜಾಗದಲ್ಲಿ ಯಾರ ಸಹಾಯವನ್ನೂ ಪಡೆಯದೇ ಬಾವಿ ತೋಡಿದ್ದಾರೆ.
ಬೇಸಿಗೆಯ ಹಿನ್ನೆಲೆಯಲ್ಲಿ ಗೌರಿ ನಾಯಕ್ ಕಳೆದ ಜನವರಿ 30ರಂದು ಅಂಗನವಾಡಿ ಮಕ್ಕಳಿಗೋಸ್ಕರ ಬಾವಿ ತೋಡಲು ಆರಂಭಿಸಿದ್ದರು.
ಏಕಾಂಗಿಯಾಗಿ ಭಾವಿ ತೋಡಿ ಕೊನೆಗೂ ನೀರು ತರಿಸಿದ ಗೌರಿ ನಾಯಕ್ 45 ಅಡಿ ಆಳದಲ್ಲಿ ನೀರು ಕಂಡು ಬಾವುಕರಾಗಿದ್ದಾರೆ. ಗಣೇಶನಗರದಲ್ಲಿ ಅಂಗನವಾಡಿ ಮಕ್ಕಳಿಗಾಗಿ ಗೌರಿ ಬಾವಿ ತೋಡಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಗಣೇಶನಗರದಲ್ಲಿ ಅಂಗನವಾಡಿ ಮಕ್ಕಳಿಗೆ ಎಂದು ಗೌರಿ ಬಾವಿ ತೋಡಿದ್ದಾರೆ.
ಜನವರಿ 30 ರಿಂದ ಗೌರಿ ನಾಯಕ್ ಮಕ್ಕಳಿಗಾಗಿ ಬಾವಿ ತೋಡುತ್ತಿದ್ದರು. ಈ ವೇಳೆ ಪರವಾನಿಗೆ ಪತ್ರ ಇಲ್ಲವೆಂದು ಅಧಿಕಾರಿಗಳು ಇದೇ ವೇಳೆ ಗೌರಿಗೆ ಬಾವಿ ತೋಡಲು ಅಡ್ಡಿಪಡಿಸಿದ್ದರು. ಅನುಮತಿ ಪತ್ರ ಇಲ್ಲವೆಂದು ಅಧಿಕಾರಿಗಳು ಹಲಗೆ ಹಾಕಿ ಬಾವಿಯನ್ನು ಮುಚ್ಚಿದ್ದರು.
ಬಳಿಕ ಉತ್ತರ ಕನ್ನಡ ಜಿಲ್ಲಾಧಿಕಾರಿ ಬಾವಿ ತೊಡಲು ಗೌರಿಗೆ ಅನುಮತಿ ನೀಡಿದ್ದರು. ಅದರ ಪ್ರತಿಫಲವಾಗಿ ಇಂದು 45 ಅಡಿ ಆಳದಲ್ಲಿ ನೀರು ಬಂದಿದ್ದು ಇದನ್ನು ಕಂಡು ಗೌರಿ ಭಾವುಕರಾಗಿದ್ದಾರೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….