ದೊಡ್ಡಬಳ್ಳಾಪುರದಲ್ಲಿ ಸಂಭವಿಸಿದ ಘೋರ ಅಪರಾಧ ಪ್ರಕರಣಗಳು; ಒಂದು ವರ್ಷದಲ್ಲಿ ಸತ್ತವರೇಷ್ಟು ಗೊತ್ತಾ..!?

ದೊಡ್ಡಬಳ್ಳಾಪುರ, (ಜೂ.01); ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಳೆದೊಂದು ವರ್ಷಗಳಿಂದ ಹದಗೆಟ್ಟಿದೆ ಎಂಬುದು ಹಲವು ಮಾಧ್ಯಮಗಳಲ್ಲಿ ವರದಿಯಾದಂತೆ, ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಕೂಡ ಕಳೆದ ಒಂದು ವರ್ಷದಿಂದ ಸಂಭವಿಸುತ್ತಿರುವ ಆಘಾತಕಾರಿ ಸಾವಿನ ಸಂಖ್ಯೆಗಳು ಸಾರ್ವಜನಿಕರಲ್ಲಿ ಆತಂಕವನ್ನುಂಟು ಮಾಡಿದೆ.

ಇತ್ತೀಚಿಗೆ ನಡೆದ ಗ್ಯಾಂಗ್ ವಾರ್‌‌ನಲ್ಲಿ ಯುವಕ ಹೇಮಂತ್‌ಗೌಡ ಹತ್ಯೆ ಪ್ರಕರಣ ಸೇರಿದಂತೆ, ತಾಲೂಕಿನಲ್ಲಿ ನಡೆದಿರುವ ಘೋರ ಪ್ರಕರಣಗಳು ದೊಡ್ಡಬಳ್ಳಾಪುರ ತಾಲೂಕಿನ ಜನರನ್ನು ಬೆಚ್ಚಿ ಬೀಳಿಸಿದ್ದು, ನೇಕಾರರ ನಗರಿ, ಹೆಮ್ಮೆಯ ದೊಡ್ಡಬಳ್ಳಾಪುರ ಎತ್ತ ಸಾಗುತ್ತಿದೆ ಎಂಬ ಚಿಂತೆ ಜನರನ್ನು ಕಾಡುತ್ತಿದೆ.

2023 ರಿಂದ 2024ರ ವರೆಗೆ ತಾಲೂಕಿನಲ್ಲಿ ನಡೆದ ಅಪರಾಧ ಪ್ರಕರಣಗಳಲ್ಲಿ 121 ಮಂದಿ ಘೋರ ಸಾವನಪ್ಪಿದ್ದಾರೆ. ಇದಲ್ಲದೆ ಒಂದು ಅತ್ಯಾಚಾರ ಪ್ರಕರಣ, 23  ಪೋಕ್ಸೋ ಪ್ರಕರಣಗಳು ದಾಖಲಾಗಿವೆ. 

ದೊಡ್ಡಬಳ್ಳಾಪುರ ಉಪವಿಭಾಗದ ವ್ಯಾಪ್ತಿಗೆ ಹೊರಗಿನ ತಾಲೂಕುಗಳಿಗೆ ಸೇರಿದ ಪೊಲೀಸ್ ಠಾಣೆ ಹೊರತು ಪಡೆಸಿದರೆ.. ದೊಡ್ಡಬಳ್ಳಾಪುರ ನಗರ, ದೊಡ್ಡಬಳ್ಳಾಪುರ ಗ್ರಾಮಾಂತರ, ದೊಡ್ಡಬೆಳವಂಗಲ ಹಾಗೂ ಹೊಸಹಳ್ಳಿ ಪೊಲೀಸ್ ಠಾಣೆ ಕಾರ್ಯ ನಿರ್ವಹಿಸುತ್ತಿವೆ.

ಈ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಕಳೆದ ಒಂದು ವರ್ಷದ ಅನ್ವಯ  2023 ರಲ್ಲಿ 09 ಕೊಲೆ, 2024 ರಲ್ಲಿ 2 ಕೊಲೆ ಒಟ್ಟು ಹತ್ಯೆ ಪ್ರಕರಣದಲ್ಲಿ 11 ಮಂದಿ ಹತ್ಯೆ.

ಮಾರಣಾಂತಿಕ ಅಪಘಾತದಲ್ಲಿ 2023 ರಲ್ಲಿ 74 ಮಂದಿ, 2024 ರಲ್ಲಿ 36 ಮಂದಿ  ಒಟ್ಟು 110 ಜನ ಸಾವು.

ಅತ್ಯಾಚಾರ 2023ರಲ್ಲಿ ಒಂದು ಹಾಗೂ ಪೋಕ್ಸೋ ಕಾಯಿದೆ 2023ರಲ್ಲಿ 14 ಪ್ರಕರಣ, 2024 ನಡು ವರ್ಷಕ್ಕೆ ಮುನ್ನವೇ 9 ಪ್ರಕರಣ ಸೇರಿ ಒಟ್ಟು 23 ದೂರು ದಾಖಲಾಗಿದೆ ಎಂದು ತಿಳಿದು ಬಂದಿದೆ.

ಪ್ರಕರಣಗಳು; ಎಪಿಎಂಸಿ ಬಳಿ ಲಾರಿಗೆ ಸಿಲುಕಿ ತಂದೆ, ಮಗಳ ಭೀಕರ ಸಾವಿನ ಆಘಾತ ಇಂದಿಗೂ ತಾಲೂಕಿನ ಜನ ಮರೆತಿಲ್ಲ, ದ್ವಿ ಚಕ್ರವಾಹನ ಸವಾರರ ಸಾವು, ದೊಡ್ಡಬೆಳವಂಗಲ ವ್ಯಾಪ್ತಿಯಲ್ಲಿ ಮಲಗಿದ್ದ ಕುಟುಂಬ ಶವವಾಗಿ ಪತ್ತೆ, ತಾವರೆ ಹೂ ಕೀಳಲು ತೆರಳಿ ಸಾವು, ದನ ತೊಳೆಯಲು ನೀರಿಗಿಳಿದು ಸಾವು, ಚಿಕ್ಕ ತುಮಕೂರು ಬಳಿ ಅಕ್ಕಾ, ತಮ್ಮನಿಗೆ ಸಂಭವಿಸಿದ ಘೋರ ಅಪಘಾತ, ಬೈದ ಕಾರಣ ವೃದ್ಧೆಯ ಹತ್ಯೆ ಸೇರಿದಂತೆ ಗ್ಯಾಂಗ್ ವಾರ್ ನಿಂದ ಸಾವು, ಕೇವಲ ಪೋಟೋ ಶೂಟ್ ವಿಚಾರಕ್ಕೆ ಯುವಕನ ಬರ್ಬರ ಹತ್ಯೆ, ನಡು ರಸ್ತೆಯಲ್ಲಿ ಲಾಂಗ್, ಮಚ್ಚು ಹಿಡಿದು ಬಡಿದಾಡುವ ಪುಡಿ ರೌಡಿಗಳ ಉಪಟಳ ಮುಂತಾದ ಪ್ರಕರಣಗಳು ತಾಲೂಕಿನ ಜನರನ್ನು ತೀವ್ರ ಆತಂಕಕ್ಕೆ ಒಳಗಾಗುವಂತೆ ಮಾಡಿದೆ.

ದಿಟ್ಟ ಪೊಲೀಸ್ ಅಧಿಕಾರಿಗಳಾದ ಡಿವೈಎಸ್ಪಿ ರವಿ, ಇನ್ಸ್ಪೆಕ್ಟರ್ ‌ಗಳಾದ ಸಾಧಿಕ್ ಪಾಷ, ಡಾ.ಎಂ.ಬಿ.ನವೀನ್ ಕುಮಾರ್, ರಾವ್ ಗಣೇಶ್ ಜನಾರ್ಧನ್ ಅವರುಗಳು ತಾಲೂಕಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಈ ರೀತಿಯ ಅಪರಾಧ ಪ್ರಕರಣಗಳಿಗೆ ಕಡಿವಾಣ ಹಾಕುವ ನಿರೀಕ್ಷೆಯಲ್ಲಿ ತಾಲೂಕಿನ ಜನ ಹೆಚ್ಚಿನ ಭರವಸೆ ಹೊಂದಿದ್ದಾರೆ.

ನಿರೀಕ್ಷೆ; ಸಾರಿಗೆ ನಿಯಮ ಉಲ್ಲಂಘನೆಗೆ ಕಡಿವಾಣ, ಶಾಲೆ ಕಾಲೇಜು ವ್ಯಾಪ್ತಿ ಸೇರಿದಂತೆ ವ್ಯಾಪಕ ಆರೋಪಕ್ಕೆ ಕಾರಣವಾಗಿರುವ ಗಾಂಜಾ ಮಾರಾಟಕ್ಕೆ ಕಡಿವಾಣ, ಡ್ರಾಗರ್ ಇಟ್ಕೊಂಡ್ ಓಡುವುದನ್ನೇ ಶೋಕಿಯಾಗಿಸಿ ಕೊಂಡಿರುವ ಪುಡಿ ರೌಡಿಗಳ ಹಾವಳಿ, ಶಾಲೆ – ಕಾಲೇಜು ಬಳಿ ವೀಲ್ಹಿಂಗ್ ಕಡಿವಾಣ, ರಾಜಕೀಯ ಕ್ಷೇತ್ರದಲ್ಲಿರುವವರ ಕಡೆಯವರ ಗೂಂಡಾ ವರ್ತನೆಗೆ ಕಡಿವಾಣ ಸೇರಿದಂತೆ ಹಲವು ತ್ವರಿತ ಕ್ರಮಗಳನ್ನು ಕೈಗೊಳ್ಳುವಂತೆ ಪೊಲೀಸರನ್ನು ತಾಲೂಕಿನ ಜನತೆ ಒತ್ತಾಯಿಸುತ್ತಿದ್ದಾರೆ.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

ರಾಜಕೀಯ

ಬೆಂಗಳೂರಿನಲ್ಲಿ ಶಾಶ್ವತ ಹೆಜ್ಜೆಗುರುತು ಬಿಟ್ಟು ಹೋಗುವ ಆಸೆ ನನ್ನದು : ಡಿಸಿಎಂ ಡಿ.ಕೆ. ಶಿವಕುಮಾರ್

ಬೆಂಗಳೂರಿನಲ್ಲಿ ಶಾಶ್ವತ ಹೆಜ್ಜೆಗುರುತು ಬಿಟ್ಟು ಹೋಗುವ ಆಸೆ ನನ್ನದು : ಡಿಸಿಎಂ ಡಿ.ಕೆ.

ಬೆಂಗಳೂರಿನಲ್ಲಿ ಬದಲಾವಣೆ ತರಬೇಕು, ನನ್ನ ಕೆಲಸಗಳ ಮೂಲಕ ನನ್ನ ಹೆಸರು ಶಾಶ್ವತವಾಗಿ ಉಳಿಯಬೇಕು, ಶಾಶ್ವತ ಹೆಜ್ಜೆ ಗುರುತು ಬಿಟ್ಟು ಹೋಗುವ ಆಸೆ ನನಗೆ ಇದೆ: D.K. Shivakumar

[ccc_my_favorite_select_button post_id="117318"]
ರಾಜ್ಯದಲ್ಲಿ 2,84,881 ಹುದ್ದೆಗಳು ಖಾಲಿ: ನಿರುದ್ಯೋಗಿಗಳ ಅಳಲು ಕೇಳುವವರು ಯಾರು..?

ರಾಜ್ಯದಲ್ಲಿ 2,84,881 ಹುದ್ದೆಗಳು ಖಾಲಿ: ನಿರುದ್ಯೋಗಿಗಳ ಅಳಲು ಕೇಳುವವರು ಯಾರು..?

ರಾಜ್ಯದಲ್ಲಿ ಸರ್ಕಾರದಲ್ಲಿ ವಿವಿಧ ಇಲಾಖೆಗಳೂ ಸೇರಿದಂತೆ ರಾಜ್ಯದಲ್ಲಿ ಬರೋಬ್ಬರಿ 2,84,881 ಹುದ್ದೆಗಳು ಖಾಲಿಯಿರುವ (Bacant Posts) ಮಾಹಿತಿ ಬಯಲಾಗಿದೆ.

[ccc_my_favorite_select_button post_id="117270"]
ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಸಂಸದ ಡಾ.ಕೆ.ಸುಧಾಕರ್‌ ಭಾಗಿ

ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಸಂಸದ ಡಾ.ಕೆ.ಸುಧಾಕರ್‌ ಭಾಗಿ

ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ಅವರೊಂದಿಗೆ, ಸಂಘಟನೆಯ ಟ್ರಸ್ಟಿಯೂ ಆಗಿರುವ ಸಂಸದ ಡಾ.ಕೆ.ಸುಧಾಕರ್‌ (Dr.K.Sudhakar)

[ccc_my_favorite_select_button post_id="113863"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಾವಳಿಗೆ ಅನುಮತಿ; ಸಚಿವ ಸಂಪುಟ ಸಭೆಯಲ್ಲಿ  ತೀರ್ಮಾನ: ಡಿಸಿಎಂ ಡಿ.ಕೆ.ಶಿವಕುಮಾರ್

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಾವಳಿಗೆ ಅನುಮತಿ; ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ: ಡಿಸಿಎಂ

"ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಗಳಿಗೆ ಅನುಮತಿ ನೀಡುವ ಬಗ್ಗೆ ಗುರುವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಿ ತೀರ್ಮಾನ ಮಾಡಲಾಗುವುದು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ (D.K. Shivakumar) ತಿಳಿಸಿದರು.

[ccc_my_favorite_select_button post_id="117214"]
ದೊಡ್ಡಬಳ್ಳಾಪುರ: ತಂದೆ-ಮಗನ ಮೇಲೆ ಮಾರಣಾಂತಿಕ ಹಲ್ಲೆ..!

ದೊಡ್ಡಬಳ್ಳಾಪುರ: ತಂದೆ-ಮಗನ ಮೇಲೆ ಮಾರಣಾಂತಿಕ ಹಲ್ಲೆ..!

ಮಹಿಳೆಯೊಂದಿಗೆ ಬಂದ ಯುವಕರ ಗುಂಪೊಂದು, ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿದ್ದ ತಂದೆ ಮತ್ತು ಮಗನ ಮೇಲೆ ಮಾರಣಾಂತಿಕ ಹಲ್ಲೆ (Assault) ನಡೆಸಿ ಪರಾರಿಯಾಗಿರುವ ಘಟನೆ ತಾಲೂಕಿನ ಪುಟ್ಟಯ್ಯನ ಅಗ್ರಹಾರ ಗ್ರಾಮದಲ್ಲಿ ನಡೆದಿದೆ.

[ccc_my_favorite_select_button post_id="117333"]
ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ.. 3 ಮಂದಿ ದುರ್ಮರಣ

ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ.. 3 ಮಂದಿ ದುರ್ಮರಣ

ಕಾರು ಮತ್ತು ಕೆಎಸ್ಆರ್ಟಿಸಿ ಬಸ್ ನಡುವೆ ಭವಿಸಿದ ಭೀಕರ ರಸ್ತೆ ಅಫಘಾತದಲ್ಲಿ (Accident) ಮೂವರು ಸಾವನಪ್ಪಿರುವ ಘಟನೆ *** ಹೊರವಲಯದ *** ಗೇಟ್ ಬಳಿ ಸಂಭವಿಸಿದೆ.

[ccc_my_favorite_select_button post_id="117239"]

ಆರೋಗ್ಯ

ಸಿನಿಮಾ

‘ದಿ ಡೆವಿಲ್’ ರಿಲೀಸ್; ದೊಡ್ಡಬಳ್ಳಾಪುರದಲ್ಲಿ ಮುಗಿಲು ಮುಟ್ಟಿದ ದರ್ಶನ್ ಅಭಿಮಾನಿಗಳ ಸಂಭ್ರಮ.!| Video ನೋಡಿ

‘ದಿ ಡೆವಿಲ್’ ರಿಲೀಸ್; ದೊಡ್ಡಬಳ್ಳಾಪುರದಲ್ಲಿ ಮುಗಿಲು ಮುಟ್ಟಿದ ದರ್ಶನ್ ಅಭಿಮಾನಿಗಳ ಸಂಭ್ರಮ.!| Video

ಅಭಿಮಾನಿಗಳ ದಾಸ, ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ (Darshan) ಅಭಿನಯದ ಬಹುನಿರೀಕ್ಷಿತ ಚಿತ್ರ 'ದಿ ಡೆವಿಲ್' ಇಂದು (ಡಿ.11) ರಾಜ್ಯಾದ್ಯಂತ ಅದ್ಧೂರಿಯಾಗಿ ರಿಲೀಸ್ ಆಗಿದ್ದು, ಯಶಸ್ವಿ ಪ್ರದರ್ಶನ ಕಾಣುತ್ತಿದೆ.

[ccc_my_favorite_select_button post_id="117242"]