ಬೆಂಗಳೂರು, (ಜೂ.01): ಊಟಕ್ಕೆ ಕುಳಿತಿದ್ದ ವೇಳೆ ಮೊಟ್ಟೆ ತಿನ್ನುವ ವಿಚಾರಕ್ಕೆ ನಡೆದ ಜಗಳದಿಂದ ಪತ್ನಿ ಆತ್ಮಹತ್ಯೆಗೆ ಅಂತ್ಯವಾದ ಘಟನೆ ಬೆಂಗಳೂರು ಉತ್ತರ ತಾಲೂಕಿನ ಮಾಚೋಹಳ್ಳಿಯಲ್ಲಿ ನಡೆದಿದೆ.
ಉತ್ತರ ಪ್ರದೇಶ ಮೂಲದ ಪೂಜಾ (31 ವರ್ಷ) ಆತ್ಮಹತ್ಯೆಗೆ ಶರಣಾದ ಮಹಿಳೆ ಎಂದು ಗುರುತಿಸಲಾಗಿದೆ. ಪತಿ ಅನಿಲ್ ಕುಮಾರ್ (35 ವರ್ಷ) ಹಾಗೂ ಪೂಜಾ ಎರಡು ವರ್ಷಗಳ ಹಿಂದೆ ದಂಪತಿ ಕೆಲಸಕ್ಕಾಗಿ ಬೆಂಗಳೂರಿಗೆ ಬಂದಿದ್ದರು.
ಊಟಕ್ಕೆ ಕುಳಿತಿದ್ದಾಗ ಮೊಟ್ಟೆ ತಿನ್ನುವ ವಿಚಾರಕ್ಕೆ ದಂಪತಿ ನಡುವೆ ಜಗಳ ಶುರುವಾಗಿದೆ. ನಾನು ಮನೆ ಯಜಮಾನ, ನನಗೆ 1 ಮೊಟ್ಟೆ ಹೆಚ್ಚುಬೇಕೆಂದು ನಡೆದ ಗಲಾಟೆಯಲ್ಲಿ, ಪತ್ನಿ ಪೂಜಾ ಮೇಲೆ ಅನಿಲ್ ಹಲ್ಲೆ ಮಾಡಿದ್ದಾನೆ. ಪತಿ ತಾರತಮ್ಯ ಭಾವನೆಗೆ ಬೇಸತ್ತು ಪೂಜಾ ಮನೆ ಮೇಲಿಂದ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಸದ್ಯ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಯುತ್ತಿದೆ. ನಂತರ ಕುಟುಂಬ ಸದಸ್ಯರಿಗೆ ಪೂಜಾ ಮೃತದೇಹವನ್ನು ಹಸ್ತಾಂತರ ಮಾಡಿದ್ದಾರೆ.
ಈ ಕುರಿತು ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಅನಿಲ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….