ಬೆಂಗಳೂರು, (ಜೂ.01); ಯಾವುದೇ ಎಕ್ಸಿಟ್ ಪೋಲ್ ಬಗ್ಗೆ ನನಗೆ ವಿಶ್ವಾಸವಿಲ್ಲ ಎಂದು ಈ ಮುಂಚೆಯೇ ಹೇಳಿದ್ದೇನೆ, ರಾಜ್ಯದಲ್ಲಿ ಕಾಂಗ್ರೆಸ್ ಗೆಲ್ಲಲಿರುವ ಸ್ಥಾನಗಳು ಡಬಲ್ ಡಿಜಿಲ್ ಮೇಲೆ ಹೋಗುತ್ತವೆ, ಫಲಿತಾಂಶಕ್ಕಾಗಿ ಕಾಯಿರಿ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಕ್ಸಿಟ್ ಪೋಲ್ ಮಾಡುವ ಸಂಸ್ಥೆಗಳು ಆಳವಾಗಿ ಜನರ ಅಭಿಪ್ರಾಯ ಸಂಗ್ರಹಣೆ ಮಾಡಲ್ಲ, ಕೇವಲ ಸ್ಯಾಂಪಲ್ ಅಷ್ಟೆ ಮಾಡ್ಯಾರೆ.. ನನ್ನ ಅಭಿಪ್ರಾಯದಂತೆ ಇಂಡಿಯಾ ಮೈತ್ರಿಕೂಟ ದೇಶದಲ್ಲಿ ಅಧಿಕಾರ ಹಿಡಿಯಲು ಸಜ್ಜಾಗಿದೆ.
ಮೂರು, ನಾಲ್ಕು ತೋರುಸ್ತಾ ಇದ್ದೀರಾ.. ರಾಜ್ಯದಲ್ಲಿ ವಾಸ್ತವ ಏನಿದೆ ಅಂತ ನೀವುಗಳೇ (ಮಾಧ್ಯಮಗಳು) ಕಣ್ಣಾರೆ ಕಂಡಿರುವುದ ಹೇಳಿ.. ಕರ್ನಾಟಕದಲ್ಲಿ ಡಬಲ್ ಡಿಜಿಟ್ ಕ್ರಾಸ್ ಮಾಡುತ್ತೇವೆ ಎಂದಿದ್ದಾರೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….