ಹರಿತಲೇಖನಿ ದಿನಕ್ಕೊಂದು ಕಥೆ; ಕರ್ಣನ ಕವಚಕುಂಡಲ

ಮಹಾಭಾರತ ಕಥೆಯಲ್ಲಿ ಬರುವ ಕರ್ಣನಷ್ಟು ನತದ್ರಷ್ಟ ಪಾತ್ರ ಮತ್ತೊಂದಿಲ್ಲ ಎನ್ನಬಹದು. ಜೇವನದುದ್ದಕ್ಕೂ ಸೂತಪುತ್ರನೆಂದು ಹಣೆಪಟ್ಟಿ ಹೊತ್ತುಕೊಂಡು ಮಹಾವೀರನಾಗಿದ್ದನೂ ಸಹ ಅವಮಾನಗಳಿಗೆ ಎದುರಾಗಬೇಕಾಯಿತು. ಅರ್ಜುನನನಿಗಿಂತ ಶಕ್ತಿಶಾಲಿ ಎನಿಸಿದ್ದ ಕರ್ಣ ತಾನು ಮಾಡದ ತಪ್ಪಿನಿಂದ ಸಂದರ್ಭಕ್ಕೆ ಸಿಕ್ಕಿ ಬಲಿಯಾಗುತ್ತಾನೆ. ಮಹಾಭಾರತದ ಪ್ರಮುಖ ಪಾತ್ರಗಳಲ್ಲಿ ಕರ್ಣನೂ ಒಬ್ಬ.

ಕರ್ಣನಲ್ಲಿ ಅದೆಷ್ಟೆ ಸದ್ಗುಣಗಳಿದ್ದರೂ ನತದೃಷ್ಟನಾಗಿದ್ದ. ಪೂರ್ವಜನ್ಮ ಕೃತಂ ಪಾಪಂ ವ್ಯಾಧಿ ರೂಪೇಣ ಭಾದಯೇತ್‌ ಎನ್ನುವಂತೆ ಕರ್ಣನ ಕರ್ಮಫಲಕ್ಕೆ ಪೂರ್ವಜನ್ಮದ ಕರ್ಮಫಲವೇ ಕಾರಣ ಎಂದರೆ ಅತಿಶಯೋಕ್ತಿಯಲ್ಲ.

ಅರ್ಜುನನ ಮೇಲ್ಮೈಯಲ್ಲಿ ಆಸಕ್ತನಾಗಿದ್ದ ಇಂದ್ರನಿಗೆ ಕರ್ಣನನ್ನು ಹೇಗಾದರೂ ಮಾಡಿ ನಿಶ್ಶಕ್ತನನ್ನಾಗಿ ಮಾಡಬೇಕೆಂಬ ಯೋಚನೆ ಬಲವಾಗಿ ಕಾಡಲಾರಂಭಿಸಿತು. ಕರ್ಣನ ಉದಾರಗುಣವನ್ನು ಕೇಳಿದ ಆತ ಒಂದು ದಿನ ವಿಪ್ರವೇಷದಲ್ಲಿ ಕರ್ಣನಲ್ಲಿಗೆ ಬಂದು ಆತನ ಕವಚಕುಂಡಲಗಳನ್ನು ಬೇಡಿದ.

ಇಂದ್ರನ ಸಂಚನ್ನು ಮೊದಲೇ ತಿಳಿದ ಸೂರ್ಯ ಕರ್ಣನಿಗೆ ಸ್ವಪ್ನದಲ್ಲಿ ಕಾಣಿಸಿಕೊಂಡು ಎಚ್ಚರಸಿದ್ದರೂ ಕರ್ಣ ತನ್ನ ಸಹಜಗುಣಕ್ಕೆ ಅನುಸಾರವಾಗಿ ತನಗೆ ರಕ್ಷೆಯಂತಿದ್ದ ಕವಚಕುಂಡಲಗಳನ್ನು ಮನಃಪೂರ್ವಕವಾಗಿ ಇಂದ್ರನಿಗೆ ಒಪ್ಪಿಸಿದ.

ಒಂದು ಸಲ ಭಗವಾನ ಶ್ರೀಕೃಷ್ಣ ಮತ್ತು ಅರ್ಜುನ ಕುಳಿತು ಮಾತಾಡುತ್ತಿದ್ದರು. ಮಾತಾಡುತ್ತಾ ಮಾತಾಡುತ್ತಾ ಕರ್ಣನ ದಾನಶೂರತೆಯ ಬಗ್ಗೆ ಚರ್ಚೆಯಾಯಿತು. ಶ್ರೀಕೃಷ್ಣನು ಕರ್ಣನ ದಾನಶೂರತೆಯನ್ನು ಪ್ರಶಂಸಿಸಿದನು. ಶ್ರೀಕೃಷ್ಣನು ಹೇಳಿದನು, “ಕರ್ಣನಂತ ಉದಾರಿ ವ್ಯಕ್ತಿಯು ಯಾರೂ ಇಲ್ಲ.” ಇದನ್ನು ಕೇಳಿ ಅರ್ಜುನನು ಆಶ್ಚರ್ಯಚಕಿತನಾದನು ಮತ್ತು ಹೇಳಿದನು.

“ಶ್ರೀಕೃಷ್ಣಾ, ಧರ್ಮರಾಜ ಕೂಡ ದಾನವೀರನೇ ಇದ್ದಾನೆ”. ಹಾಗಿದ್ದರೆ ಯಾರು ಹೆಚ್ಚು ದಾನವೀರರಿದ್ದಾರೆ ಎಂದು ಅವರುಚರ್ಚಿಸಲು ಪ್ರಾರಂಭಿಸಿದರು. ಆಗ ಶ್ರೀಕೃಷ್ಣನು, “ಸರಿ ಹಾಗಿದ್ದರೆ, ನಾಳೆಯೇ ನಾವು ಕರ್ಣ ಮತ್ತು ಧರ್ಮರಾಜರ ಬಳಿ ಹೋಗಿ ಪರೀಕ್ಷಿಸೋಣ” ಎಂದು ಹೇಳಿದರು.

ಆಗ ಮಳೆಗಾಲವಿತ್ತು, ಮರುದಿನ ಸೂರ್ಯನು ಉದಯಿಸುತ್ತಿದ್ದಂತೆಯೇ ಶ್ರೀಕೃಷ್ಣ ಮತ್ತು ಅರ್ಜುನರು ಧರ್ಮರಾಜರ ಬಳಿಗೆ ಹೋದರು. ಅವರನ್ನು ನೋಡಿ ಧರ್ಮರಾಜನಿಗೆ ತುಂಬಾ ಆನಂದವಾಯಿತು. ಅವರನ್ನು ಆದರದಿಂದ ಸತ್ಕರಿಸಿದನು ಮತ್ತು ಅಲ್ಲಿಗೆ ಆಗಮಿಸಿದ ಕಾರಣವನ್ನು ಕೇಳಿದನು.

ಆಗ ಶ್ರೀಕೃಷ್ಣನು ಹೇಳಿದನು, “ರಾಜ್ಯದಲ್ಲಿ ತಕ್ಷಣ ಒಂದು ಬೃಹತ್ ನಿರ್ಮಾಣ ಕಾರ್ಯ ಮಾಡಬೇಕಿದೆ. ಅದಕ್ಕಾಗಿ ಕಟ್ಟಿಗೆ ಬೇಕಾಗಿದೆ”. ತಕ್ಷಣ ಧರ್ಮರಾಯನು ತನ್ನ ಸೇವಕರನ್ನು ಕರೆದನು ಮತ್ತು ನಿರ್ಮಾಣಕ್ಕಾಗಿ ಅತ್ಯಂತ ಒಳ್ಳೆಯ ಗುಣಮಟ್ಟದ ಕಟ್ಟಿಗೆಯನ್ನು ತನ್ನಿರಿ ಎಂದು ಆಜ್ಞಾಪಿಸಿದನು.

ತುಂಬಾ ಹೊತ್ತಾದರೂ ಸೇವಕರು ಹಿಂತಿರುಗಲಿಲ್ಲ. ಸ್ವಲ್ಪ ಸಮಯದ ನಂತರ ಸೇವಕರು ತಲೆಯನ್ನು ಬಗ್ಗಿಸಿ ಖಾಲಿ ಕೈಯಲ್ಲಿ ಹಿಂತಿರುಗಿದರು. ಆಗ ಧರ್ಮರಾಜನು ಕೇಳಿದನು, “ಏನಾಯಿತು? ಕಟ್ಟಿಗೆಯು ಸಿಗಲಿಲ್ಲವೇ?”. ಸೇವಕರು ಹೇಳಿದರು, “ಮಳೆಯ ಕಾರಣದಿಂದಾಗಿ ಎಲ್ಲಾ ಕಟ್ಟಿಗೆಗಳು ಒದ್ದೆಯಾಗಿ ಬಿಟ್ಟಿದೆ. ಹಾಗಾಗಿ ನಾವು ಕಟ್ಟಿಗೆಯನ್ನು ತರಲಿಲ್ಲ”. ಧರ್ಮರಾಯನು ವಿಧಿ ಇಲ್ಲದೇ ಅರ್ಜುನ ಮತ್ತು ಕೃಷ್ಣನಿಗೆ ಕಟ್ಟಿಗೆ ಸಿಗಲಿಲ್ಲ ಎಂದು ತಿಳಿಸಿದನು.

ಅರ್ಜುನ ಮತ್ತು ಕೃಷ್ಣ ಹಿಂತಿರುಗಿದರು. ನಂತರ ಅವರು ಕರ್ಣನ ಬಳಿ ಹೋದರು. ಕರ್ಣನು ಅವರಿಗೆ ಆದರದಿಂದ ಕೂರಲು ಹೇಳಿದನು ಮತ್ತು ಅವರ ಕ್ಷೇಮ ಸಮಾಚಾರ ವಿಚಾರಿಸಿಕೊಂಡನು. ಆಗ ಅರ್ಜುನನು ಕಟ್ಟಿಗೆಯ ಕುರಿತು ಹೇಳಿದನು. ಆಗ ಕರ್ಣನು, “ಇಷ್ಟೇ ತಾನೇ? ಇದರಲ್ಲಿ ಇಷ್ಟು ಚಿಂತೆ ಮಾಡಲು ಏನಿದೆ?” ಎಂದು ಹೇಳುತ್ತಾತನ್ನ ಸೇವಕರನ್ನು ಕಟ್ಟಿಗೆ ತರಲು ಕಳಿಸಿದನು. ಸ್ವಲ್ಪ ಸಮಯದಲ್ಲಿ ಆ ಸೇವಕರು ಹಿಂತಿರುಗಿದರು ಮತ್ತು ಹೇಳಿದರು, “ಮಳೆಯಲ್ಲಿ ಎಲ್ಲಾ ಕಟ್ಟಿಗೆಯು ಒದ್ದೆಯಾದ ಕಾರಣಯಾವುದೇ ಕಟ್ಟಿಗೆ ಸಿಗಲಿಲ್ಲ”.

ಇದನ್ನು ಕೇಳಿದ ಕರ್ಣನು ಅರಮನೆಯ ಒಳಗೆ ಹೋದನು ಮತ್ತು ಎಷ್ಟು ಹೊತ್ತಾದರೂ ಹೊರಗೆ ಬರದಿದ್ದಾಗ ಶ್ರೀಕೃಷ್ಣನು ಅರ್ಜುನನನ್ನು ಕರೆದುಕೊಂಡು ಒಳಗೆ ಹೋದನು. ಅಲ್ಲಿ ನೋಡಿದರೆ ಕರ್ಣನು ತನ್ನ ಮಂಚದ ಮರವನ್ನು ಕಡಿಯುತ್ತಿದ್ದನು. ಅಕ್ಕಪಕ್ಕದಲ್ಲಿ ಅನೇಕ ಮರದ ಸಾಮಾನು ಮುರಿದು ಇಡಲಾಗಿತ್ತು. ಆಗ ಅವರಿಗೆ ತಿಳಿಯಿತು ಕರ್ಣ ಇಷ್ಟು ಹೊತ್ತು ಏನು ಮಾಡುತ್ತಿದ್ದನೆಂದು.

ಅರ್ಜುನನು ಕೇಳಿದನು, “ಕರ್ಣಾ, ಇಷ್ಟು ಸಣ್ಣ ವಿಷಯಕ್ಕಾಗಿ ನೀನು ಚಂದನದಮರದ, ಕರಕುಶಲ ಕೆತ್ತನೆಯನ್ನು ಮಾಡಲಾಗಿರುವ, ಸುಂದರವಾದ ಮಂಚವನ್ನೇಕೆ ಮುರಿದೆ?”. ಆಗ ಕರ್ಣನು ಹೇಳಿದನು, “ಈ ವಸ್ತುಗಳನ್ನು ಪುನಃ ಮಾಡಿಸಿಕೊಳ್ಳಬಹುದು ಆದರೆ ಯಾರಿಗಾದರು ಸಹಾಯ ಮಾಡುವಂತಹ ಅವಕಾಶವನ್ನು ಕಳೆದುಕೊಂಡರೆ ಅದಕ್ಕಿಂತ ದುಃಖದ ವಿಷಯವೇನಿದೆ ಎಂದು ಹೇಳಿದ.

ಅರ್ಜುನನಿಂದ ಹತನಾಗಿ ಯುದ್ಧಭೂಮಿಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಕರ್ಣನ ದಾನ ಗುಣ ಎಷ್ಟಿದೆ ಎಂಬುದನ್ನು ಪರೀಕ್ಷೆ ಮಾಡಲು ಶ್ರೀಕೃಷ್ಣ ಬ್ರಾಹ್ಮಣನ ರೂಪದಲ್ಲಿ ಹೋಗಿ ಭಿಕ್ಷೆ ಕೇಳುತ್ತಾನೆ. ಕರ್ಣನಿಗೆ ಎರಡು ಚಿನ್ನದ ಹಲ್ಲು ಇರುತ್ತದೆ, ಅವುಗಳನ್ನು ದಾನವಾಗಿ ಕೇಳುತ್ತಾನೆ.

ಆದರೆ ಅದರಲ್ಲಿ ಕರ್ಣನ  ಎಂಜಲು ಇದೆ ಎಂದು ಕೃಷ್ಣನು ಸಿಟ್ಟಾಗುತ್ತಾನೆ. ಆಗ ಕರ್ಣನ ಭೂಮಿಗೆ ಬಾಣ ಬಿಟ್ಟು ನೀರನ್ನು ಚಿಮ್ಮುವಂತೆ ಮಾಡಿ ಅದರಲ್ಲಿ ಚಿನ್ನದ ಹಲ್ಲನ್ನು ತೊಳೆದು ಕೊಡುತ್ತಾನೆ . ಇದರಿಂದ ಖುಷಿಯಾದ ಕೃಷ್ಣ ವಿಶ್ವರೂಪ ದರ್ಶನ ಕೊಡುತ್ತಾನೆ. ಕರ್ಣನನ್ನು ಸೇರಿಸಿ ಮೂರೇ ಜನ ಕೃಷ್ಣನ ವಿಶ್ವರೂಪವನ್ನು ನೋಡಿರುವುದು.

ಕೃಪೆ: ಸಾಮಾಜಿಕ ಜಾಲತಾಣ.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

ರಾಜಕೀಯ

ಬೆಂಗಳೂರಿನಲ್ಲಿ ಶಾಶ್ವತ ಹೆಜ್ಜೆಗುರುತು ಬಿಟ್ಟು ಹೋಗುವ ಆಸೆ ನನ್ನದು : ಡಿಸಿಎಂ ಡಿ.ಕೆ. ಶಿವಕುಮಾರ್

ಬೆಂಗಳೂರಿನಲ್ಲಿ ಶಾಶ್ವತ ಹೆಜ್ಜೆಗುರುತು ಬಿಟ್ಟು ಹೋಗುವ ಆಸೆ ನನ್ನದು : ಡಿಸಿಎಂ ಡಿ.ಕೆ.

ಬೆಂಗಳೂರಿನಲ್ಲಿ ಬದಲಾವಣೆ ತರಬೇಕು, ನನ್ನ ಕೆಲಸಗಳ ಮೂಲಕ ನನ್ನ ಹೆಸರು ಶಾಶ್ವತವಾಗಿ ಉಳಿಯಬೇಕು, ಶಾಶ್ವತ ಹೆಜ್ಜೆ ಗುರುತು ಬಿಟ್ಟು ಹೋಗುವ ಆಸೆ ನನಗೆ ಇದೆ: D.K. Shivakumar

[ccc_my_favorite_select_button post_id="117318"]
ರಾಜ್ಯದಲ್ಲಿ 2,84,881 ಹುದ್ದೆಗಳು ಖಾಲಿ: ನಿರುದ್ಯೋಗಿಗಳ ಅಳಲು ಕೇಳುವವರು ಯಾರು..?

ರಾಜ್ಯದಲ್ಲಿ 2,84,881 ಹುದ್ದೆಗಳು ಖಾಲಿ: ನಿರುದ್ಯೋಗಿಗಳ ಅಳಲು ಕೇಳುವವರು ಯಾರು..?

ರಾಜ್ಯದಲ್ಲಿ ಸರ್ಕಾರದಲ್ಲಿ ವಿವಿಧ ಇಲಾಖೆಗಳೂ ಸೇರಿದಂತೆ ರಾಜ್ಯದಲ್ಲಿ ಬರೋಬ್ಬರಿ 2,84,881 ಹುದ್ದೆಗಳು ಖಾಲಿಯಿರುವ (Bacant Posts) ಮಾಹಿತಿ ಬಯಲಾಗಿದೆ.

[ccc_my_favorite_select_button post_id="117270"]
ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಸಂಸದ ಡಾ.ಕೆ.ಸುಧಾಕರ್‌ ಭಾಗಿ

ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಸಂಸದ ಡಾ.ಕೆ.ಸುಧಾಕರ್‌ ಭಾಗಿ

ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ಅವರೊಂದಿಗೆ, ಸಂಘಟನೆಯ ಟ್ರಸ್ಟಿಯೂ ಆಗಿರುವ ಸಂಸದ ಡಾ.ಕೆ.ಸುಧಾಕರ್‌ (Dr.K.Sudhakar)

[ccc_my_favorite_select_button post_id="113863"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಾವಳಿಗೆ ಅನುಮತಿ; ಸಚಿವ ಸಂಪುಟ ಸಭೆಯಲ್ಲಿ  ತೀರ್ಮಾನ: ಡಿಸಿಎಂ ಡಿ.ಕೆ.ಶಿವಕುಮಾರ್

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಾವಳಿಗೆ ಅನುಮತಿ; ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ: ಡಿಸಿಎಂ

"ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಗಳಿಗೆ ಅನುಮತಿ ನೀಡುವ ಬಗ್ಗೆ ಗುರುವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಿ ತೀರ್ಮಾನ ಮಾಡಲಾಗುವುದು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ (D.K. Shivakumar) ತಿಳಿಸಿದರು.

[ccc_my_favorite_select_button post_id="117214"]
ಫೇಸ್‌ಬುಕ್‌ ಪರಿಚಯ: ಮಹಿಳೆಗೆ ಹಣ ನೀಡಿ ಪೆಟ್ಟು ತಿಂದ ಯುವಕ

ಫೇಸ್‌ಬುಕ್‌ ಪರಿಚಯ: ಮಹಿಳೆಗೆ ಹಣ ನೀಡಿ ಪೆಟ್ಟು ತಿಂದ ಯುವಕ

ಫೇಸ್‌ಬುಕ್‌ನಲ್ಲಿ (Facebook) ಪರಿಚಯವಾದ ಮಹಿಳೆ ನೋಡಲು ಬೆಂಗಳೂರಿನಿಂದ ಮಡಿಕೇರಿಗೆ ಬಂದಿದ್ದ ಯುವಕನ ಮೇಲೆ ಮೂವರು ಯುವಕರು ಹಲ್ಲೆ ನಡೆಸಿರುವ ಘಟನೆ ಶುಕ್ರವಾರ ನಡೆದಿದೆ.

[ccc_my_favorite_select_button post_id="117343"]
ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ.. 3 ಮಂದಿ ದುರ್ಮರಣ

ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ.. 3 ಮಂದಿ ದುರ್ಮರಣ

ಕಾರು ಮತ್ತು ಕೆಎಸ್ಆರ್ಟಿಸಿ ಬಸ್ ನಡುವೆ ಭವಿಸಿದ ಭೀಕರ ರಸ್ತೆ ಅಫಘಾತದಲ್ಲಿ (Accident) ಮೂವರು ಸಾವನಪ್ಪಿರುವ ಘಟನೆ *** ಹೊರವಲಯದ *** ಗೇಟ್ ಬಳಿ ಸಂಭವಿಸಿದೆ.

[ccc_my_favorite_select_button post_id="117239"]

ಆರೋಗ್ಯ

ಸಿನಿಮಾ

‘ದಿ ಡೆವಿಲ್’ ರಿಲೀಸ್; ದೊಡ್ಡಬಳ್ಳಾಪುರದಲ್ಲಿ ಮುಗಿಲು ಮುಟ್ಟಿದ ದರ್ಶನ್ ಅಭಿಮಾನಿಗಳ ಸಂಭ್ರಮ.!| Video ನೋಡಿ

‘ದಿ ಡೆವಿಲ್’ ರಿಲೀಸ್; ದೊಡ್ಡಬಳ್ಳಾಪುರದಲ್ಲಿ ಮುಗಿಲು ಮುಟ್ಟಿದ ದರ್ಶನ್ ಅಭಿಮಾನಿಗಳ ಸಂಭ್ರಮ.!| Video

ಅಭಿಮಾನಿಗಳ ದಾಸ, ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ (Darshan) ಅಭಿನಯದ ಬಹುನಿರೀಕ್ಷಿತ ಚಿತ್ರ 'ದಿ ಡೆವಿಲ್' ಇಂದು (ಡಿ.11) ರಾಜ್ಯಾದ್ಯಂತ ಅದ್ಧೂರಿಯಾಗಿ ರಿಲೀಸ್ ಆಗಿದ್ದು, ಯಶಸ್ವಿ ಪ್ರದರ್ಶನ ಕಾಣುತ್ತಿದೆ.

[ccc_my_favorite_select_button post_id="117242"]