ಚಿಕ್ಕಬಳ್ಳಾಪುರ, (ಜುಲೈ.16): ಕಾರಿನಲ್ಲಿ ರೂ.5 ಲಕ್ಷ ಇಟ್ಟಿದ ವ್ಯಾಪಾರಿ, ದೇವಸ್ಥಾನದ ಮುಂದೆ ಕಾರ್ ಪಾರ್ಕ್ ಮಾಡಿ ದೇವರ ದರ್ಶನಕ್ಕೆ ತೆರಳಿದರು, ಈ ವೇಳೆ ಕಾರಿನ ಗಾಜು ಹೊಡೆದ ಕಳ್ಳ ಕಾರಿನಲ್ಲಿದ್ದ 5 ಲಕ್ಷ ಹಣದೊಂದಿಗೆ ಪರಾರಿಯಾಗಿದ್ದಾನೆ, ಕಳ್ಳತನದ ದೃಶ್ಯ ಸಿಸಿ ಕ್ಯಾಮಾರದಲ್ಲಿ ಸೆರೆಯಾಗಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರದ ಎನ್ ಆರ್ ಬಡವಾಣೆಯಲ್ಲಿ ಇಂದು ಬೆಳಗ್ಗೆ ಘಟನೆ ನಡೆದಿದ್ದು, ನಗರದ ಪ್ರಭಾಕರ್ ಬಡಾವಣೆ ನಿವಾಸಿ ಕೃಷ್ಣಾರೆಡ್ಡಿಯವರ 5 ಲಕ್ಷ ರೂ. ಕಳ್ಳರ ಪಾಲಾಗಿದೆ.
ಅಂದಹಾಗೇ ಇಂದು ಬೆಳಗ್ಗೆ ಕೃಷ್ಣಾರೆಡ್ಡಿ ಕೋಳಿ ಫಾರ್ಮ್ ನಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಸಂಬಳ ನೀಡಲು ಕೆನರಾ ಬ್ಯಾಂಕ್ ನಲ್ಲಿ 5 ಲಕ್ಷ ಹಣವನ್ನ ಡ್ರಾ ಮಾಡಿದರು, ಹಣವನ್ನ ಕಾರಿನ ಮುಂಭಾಗದ ಸೀಟ್ ನಲ್ಲಿ ಇಟ್ಟಿದ್ದರು.
ಬ್ಯಾಂಕ್ ನಿಂದ ಹಣ ಡ್ರಾ ಮಾಡಿದ ನಂತರ ಅವರು ಎನ್.ಆರ್ ಬಡಾವಣೆಯ ದೇವಸ್ಥಾನದ ಮುಂಭಾಗದಲ್ಲಿ ಕಾರ್ ಪಾರ್ಕ್ ಮಾಡಿ ದೇವರ ದರ್ಶನಕ್ಕೆಂದು ತೆರಳಿದ್ದಾರೆ. ಈ ವೇಳೆ ಕಳ್ಳನೊಬ್ಬ ಹಾಡಹಗಲೇ ಕಾರಿನ ಗಾಜು ಹೊಡೆದು ಕಾರಿನಲ್ಲಿದ್ದ ಹಣದೊಂದಿಗೆ ಪರಾರಿಯಾಗಿದ್ದಾನೆ.
ಡಿವೈಎಸ್ಪಿ ಮುರಳಿಧರ್ ಚಿಂತಾಮಣಿ ನಗರ ಠಾಣೆ ಇನ್ಸ್ ಪೇಕ್ಟರ್ ವಿಜಯಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕಳ್ಳತನದ ದೃಶ್ಯ ಸಿಸಿ ಕ್ಯಾಮಾರದಲ್ಲಿ ಸೆರೆಯಾಗಿದ್ದು, ಕಳ್ಳ ಕೆನರಾ ಬ್ಯಾಂಕ್ ನಲ್ಲಿ ಹಣ ಡ್ರಾ ಮಾಡುವ ಸಮಯದಿಂದ ಕೃಷ್ಣಾರೆಡ್ಡಿಯವರನ್ನ ಬೈಕ್ ನಲ್ಲಿ ಹಿಂಬಾಲಿಸಿಕೊಂಡು ಬಂದು ಕೃತ್ಯ ಎಸೆಗಿರುವುದ್ದಾಗಿ ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.
ಚಿಂತಾಮಣಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….