ಹರಿತಲೇಖನಿ ದಿನಕ್ಕೊಂದು ಕಥೆ: ಆಯ್ದಕ್ಕಿ ಮಾರಯ್ಯ – ಲಕ್ಕಮ್ಮ

ಆಯ್ದಕ್ಕಿ ಮಾರಯ್ಯ ಹನ್ನೆರಡನೆಯ ಶತಮಾನದ ಒಬ್ಬ ಶ್ರಮಜೀವಿ ಶರಣ. ಆತನ ಹೆಂಡತಿಯ ಹೆಸರು ಲಕ್ಕಮ್ಮ. ಅವರ ಊರು ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಅಮರೇಶ್ವರ. ಆ ಊರಿನ ದೈವದ ಹೆಸರೂ ಅಮರೇಶ್ವರ. ಮಾರಯ್ಯ ಮತ್ತು ಲಕ್ಕಮ್ಮ ಇಬ್ಬರೂ ವಚನಕಾರರು. 

ದಲಿತ ವರ್ಗಕ್ಕೆ ಸೇರಿದ ಇವರನ್ನು ಅಲ್ಲಿನ ಮೇಲುವರ್ಗದವರು ಕೀಳಾಗಿ ಕಾಣುತ್ತಿದ್ದರು. ಆ ಅವಮಾನ ತಾಳಲಾಗದೆ ಅವರು ಊರನ್ನೇ ಬಿಡ ಬೇಕೆಂದು ನಿರ್ಧಾರ ಮಾಡಿದರು. ಅಷ್ಟರಲ್ಲಿ ಅವರು ಬಸವಣ್ಣನವರಿದ್ದ ಕಲ್ಯಾಣದ ಬಗೆಗೆ ಕೇಳಿದ್ದರು. ಕಲ್ಯಾಣದಲ್ಲಿ ಎಲ್ಲರಿಗೂ ಸಮಾನ ಗೌರವ ಇದೆ ಎಂಬುದನ್ನು ತಿಳಿದು ಕಲ್ಯಾಣಕ್ಕೆ ಹೋಗಿ ನೆಲೆಸಿದರು.

ಕಲ್ಯಾಣದಲ್ಲಿ ಬಸವಣ್ಣನವರು ಒಂದು ಹೊಸ ಸಮಾಜವನ್ನು ಸ್ಥಾಪಿಸಿದ್ದರು. ಆ ಸಮಾಜದಲ್ಲಿ ಸ್ತ್ರೀ- ಪುರುಷ ಭೇದವಿರಲಿಲ್ಲ. ಮೇಲು-ಕೀಳು ಭಾವವಿರಲಿಲ್ಲ. ಬಡವ-ಶ್ರೀಮಂತ ವ್ಯತ್ಯಾಸವಿರಲಿಲ್ಲ. ಯಾರೇ ವ್ಯಕ್ತಿ ಆತ ಪಂಡಿತನಿರಲಿ, ಪಾದರಕ್ಷೆ ಮಾಡುವವನಿರಲಿ ಎಲ್ಲರೂ ಸಮಾನರೇ. ಆದರೆ, ಪ್ರತಿಯೊಬ್ಬ ವ್ಯಕ್ತಿಯೂ ಯಾವುದಾದರೂ ಕೆಲಸವನ್ನು ಮಾಡಬೇಕಾಗಿತ್ತು. ತನಗೆ ಇಷ್ಟವೆನಿಸುವ ಕೆಲಸವನ್ನು ಆಯ್ದುಕೊಳ್ಳಲು ಅವಕಾಶವಿತ್ತು. ನಿಷ್ಠೆಯಿಂದ ಮಾಡುವ ಆ ಕೆಲಸಕ್ಕೆ ‘ಕಾಯಕ’ ಎಂದು ಕರೆಯಲಾಗುತ್ತಿತ್ತು. 

ಯಾರೇ ಇರಲಿ, ದುಡಿಯದೆ ಉಣ್ಣುವುದು ಧರ್ಮವಲ್ಲ ಎನ್ನುವುದು ಅಲ್ಲಿನ ನಿಯಮವಾಗಿತ್ತು. ಅಮರೇಶ್ವರದಿಂದ ಕಲ್ಯಾಣಕ್ಕೆ ಬಂದು ನೆಲೆಸಿದ ಮಾರಯ್ಯ ಆರಿಸಿಕೊಂಡ ಕಾಯಕ ಯಾವುದು ಗೊತ್ತೆ? ಅದು ಹೊಲ-ಗದ್ದೆ ಉಳುವುದಲ್ಲ; ಬಟ್ಟೆ ನೇಯುವುದಲ್ಲ; ಬಡಗಿ ಕೆಲಸವಲ್ಲ; ಕಮ್ಮಾರನ ಕೆಲಸವಲ್ಲ; ಮಡಕೆ ಮಾಡುವದಲ್ಲ, ಮತ್ತೆ ಯಾವ ಕಾಯಕ?

ಅದು ಅಕ್ಕಿಕಾಳು ಆರಿಸುವ ಕಾಯಕ! ಬಸವಣ್ಣನವರ ದಾಸೋಹದ ಮನೆಯ ಮುಂದೋ, ಬೀದಿಯಲ್ಲೋ, ಅಂಗಡಿ ಮುಂಗಟ್ಟುಗಳ ಮುಂದೋ, ಹೊಲ-ಗದ್ದೆಗಳಲ್ಲಿ ಬಿದ್ದ ತೆನೆಗಳಿಂದಲೋ ಚೆಲ್ಲಿಬಿದ್ದ ಕಾಳುಗಳನ್ನು ಸಂಗ್ರಹಿಸಿ ತರುವುದು. ಹಾಗೆ ಸಂಗ್ರಹಿಸಿ ತಂದ ಅಕ್ಕಿ ಕಾಳಿನಿಂದ ಅಡುಗೆ ಮಾಡಿ ಬಡಿಸುವುದು ಮಾರಯ್ಯನ ಪತ್ನಿ ಲಕ್ಕಮ್ಮನ ಕೆಲಸ. ಮಾಡಿದ ಅಡುಗೆಯನ್ನು ಅವರಷ್ಟೇ ಉಣ್ಣುತ್ತಿರಲಿಲ್ಲ. ಹಸಿದು ಬಂದವರಿಗೆ, ಅಸಹಾಯಕರಿಗೆ, ಅನಾಥರಿಗೆ ಉಣಬಿಡಿಸಿ, ಎಲ್ಲರ ಊಟವಾದ ನಂತರ ತಾವು ಉಣ್ಣುತ್ತಿದ್ದರು. ಇದಕ್ಕೆ ಶರಣ ಸಂಸ್ಕೃತಿಯಲ್ಲಿ ‘ದಾಸೋಹ’ ಎನ್ನಲಾಗಿದೆ.

ಹೀಗೆ ಅಲ್ಲಲ್ಲಿ ಚೆಲ್ಲಿಬಿದ್ದು ವ್ಯರ್ಥವಾಗುತ್ತಿದ್ದ ಅಕ್ಕಿಕಾಳನ್ನು ಆಯ್ದು ತರುತ್ತಿದ್ದ ಕಾರಣ ಮಾರಯ್ಯನಿಗೆ ‘ಆಯ್ದಕ್ಕಿ ಮಾರಯ್ಯ’ ಎಂದೇ ಹೆಸರಾಯಿತು. ಒಂದು ರೀತಿಯಲ್ಲಿ ಮಾರಯ್ಯ- ಲಕ್ಕಮ್ಮ ದಂಪತಿ ಕಾಯಕ ಮತ್ತು ದಾಸೋಹದ ದಂಪತಿಯಾಗಿದ್ದರು.

ಹೀಗಿರುವಾಗ, ಒಂದು ದಿನ ಮಾರಯ್ಯ ಯಾರೊಡನೆಯೋ ಮಾತನಾಡುತ್ತ ಕುಳಿತು, ಆ ಹೊತ್ತಿನ ಕಾಯಕವನ್ನೇ ಮರೆತುಬಿಟ್ಟಿದ್ದ. ಅದನ್ನು ಕಂಡು, ಲಕ್ಕಮ್ಮ ಮಾರಯ್ಯನನ್ನು ಎಚ್ಚರಿಸಿ, ‘ಕಾಯಕ ನಿಂದಿತ್ತು ಹೋಗಯ್ಯಾ’ ಎಂದು ಹೇಳಿದಳು. ಏಕೆಂದರೆ, ಅಂದಿಗೆ ಬೇಕಾದುದನ್ನು ಅಂದೇ ಗಳಿಸಬೇಕೆಂಬುದು ಕಾಯಕದ ಸೂತ್ರ.

ಲಕ್ಕಮ್ಮನ ಮಾತಿನಿಂದ ಎಚ್ಚರಗೊಂಡ ಮಾರಯ್ಯ ತಕ್ಷಣವೇ ತನ್ನ ಕಾಯಕಕ್ಕೆ ಹೊರಟ. ಬಸವಣ್ಣನವರ ಮಹಾಮನೆಯ ಬಳಿಗೆ ಹೋಗಿ, ಅಲ್ಲಿ ಚೆಲ್ಲಿದ್ದ ಅಕ್ಕಿ ಕಾಳನ್ನು ಅವಸರವಸರದಲ್ಲಿ ತನ್ನ ಚೀಲದಲ್ಲಿ ತುಂಬಿಕೊಂಡು ಮನೆಗೆ ಬಂದ. ಅವಸರವಸರದಲ್ಲಿ ಅವನು ಎಂದಿಗಿಂತ ಹೆಚ್ಚು ಅಕ್ಕಿಯನ್ನು ತಂದಿದ್ದ.

ಗಂಡ ತಂದ ಅಕ್ಕಿಯನ್ನು ನೋಡಿ, ಲಕ್ಕಮ್ಮ ‘ಇದೇನಿದು? ಇಷ್ಟೊಂದು ಅಕ್ಕಿ ತಂದಿದ್ದೀರಲ್ಲ. ನಮಗೆ ಬೇಕಾಗಿದ್ದುದು ಒಂದು ಮಾನದಷ್ಟು ಅಕ್ಕಿ. ಅದಕ್ಕಿಂತ ಹೆಚ್ಚಾಗಿ ಏಕೆ ತಂದಿರಿ?’ ಎಂದು ಕೇಳಿ, ‘ಆಸೆ ಎಂಬುದು ಅರಸಿಂಗಲ್ಲದೆ ಶಿವಭಕ್ತರಿಗುಂಟೆ ಅಯ್ಯಾ, ಈಸಕ್ಕಿಯ ಆಸೆ ನಮಗೇಕೆ? ಈಶ್ವರನೊಪ್ಪ’ ಎಂದು ಹೇಳಿದಳು. ಅಷ್ಟೇ ಅಲ್ಲ, ‘ಹೆಚ್ಚಾಗಿ ತಂದುದನ್ನು ಹಿಂದಕ್ಕೆ ತೆಗೆದುಕೊಂಡು ಹೋಗಿ ಅಲ್ಲೇ ಸುರಿದು ಬನ್ನಿ, ಮತ್ತೆ ಬೇಕಾದವರು ಅದನ್ನು ಕೊಂಡೊಯ್ಯಲಿ. ನಮಗೆ ಇಷ್ಟೆ ಸಾಕು’ ಎಂದು ಹೇಳಿ ಹೆಚ್ಚಾಗಿದ್ದ ಅಕ್ಕಿಯ ಚೀಲವನ್ನು ಗಂಡನ ಕೈಗೆ ಕೊಟ್ಟಳು.

ಲಕ್ಕಮ್ಮನ ಮಾತು ಸರಿಯಾಗಿತ್ತು. ಅಗತ್ಯಕ್ಕಿಂತಲೂ ಹೆಚ್ಚು ಸಂಗ್ರಹಿಸಿಕೊಂಡು ಬಂದದ್ದು ತಪ್ಪಾಯಿತು ಎಂಬುದು ಮಾರಯ್ಯನಿಗೆ ಮನವರಿಕೆಯಾಯಿತು. ಹೆಂಡತಿಯ ಮಾತಿನಂತೆ ಆ ಹೆಚ್ಚಿನ ಅಕ್ಕಿಯನ್ನು ಹಿಂದಕ್ಕೆ ಒಯ್ದು ಮಹಾಮನೆಯ ಅಂಗಳದಲ್ಲೇ ಇಟ್ಟು ಬಂದ.

ಲಕ್ಕಮ್ಮ ಅಡುಗೆ ಮಾಡಿ ಬಂದ ಅತಿಥಿಗಳಿಗೆ ದಾಸೋಹ ಸೇವೆ ಮಾಡುವಷ್ಟರಲ್ಲಿ ಮನೆಗೆ ಬಂದ ಮಾರಯ್ಯನೊಡನೆ ತಾನೂ ಪ್ರಸಾದ ಸೇವಿಸಿದಳು. ಇಂತಹ ಆದರ್ಶ ಜೀವನ ಆ ದಂಪತಿಯದು. ಅವರ ಪ್ರಕಾರ, ನಿತ್ಯ ದುಡಿಯಬೇಕು, ದುಡಿದದ್ದನ್ನು ಹಂಚಿ ಉಣ್ಣಬೇಕು. ಅಷ್ಟೇ ಅಲ್ಲ, ಅಂದು ಗಳಿಸಿದ್ದನ್ನು ಅಂದೇ ಬಳಕೆ ಮಾಡಬೇಕು. ನಾಳೆಗೆ ಎಂದು ಕೂಡಿಟ್ಟುಕೊಳ್ಳಬಾರದು. ಹಾಗೆ ಕೂಡಿಟ್ಟುಕೊಂಡರೆ ಇನ್ನೊಬ್ಬರ ಅನ್ನವನ್ನು ಕಸಿದುಕೊಂಡಂತೆ ಆಗುತ್ತದೆ.

ಆ ದಂಪತಿಗೆ ಕಾಯಕದ ಬಗೆಗೆ ಅಪಾರ ನಿಷ್ಠೆ ಇತ್ತು. ಆ ನಿಷ್ಠೆ ಎಷ್ಟೆಂದರೆ ‘ಕಾಯಕದಲ್ಲಿ ನಿರತನಾದಡೆ ಗುರುದರ್ಶನವಾದರೂ ಮರೆಯಬೇಕು’ ಎನ್ನುವಷ್ಟು. ಅವರ ದೃಷ್ಟಿಯಲ್ಲಿ ‘ಕಾಯಕವೇ ಕೈಲಾಸ’ವಾಗಿತ್ತು.

‘ಕಾಯಕವೇ ಕೈಲಾಸ’ ಎಂಬ ಸೂಳ್ಳುಡಿಯನ್ನು ಕೊಟ್ಟವನೇ ಆಯ್ದಕ್ಕಿ ಮಾರಯ್ಯ. ಯಾರೇ ಆಗಲಿ, ಅಗತ್ಯಕ್ಕಿಂತ ಹೆಚ್ಚು ಗಳಿಸಿ, ನಾಳೆಗೂ ಇರಲಿ ಎಂದು ಸಂಗ್ರಹಿಸಿ ಇಟ್ಟುಕೊಂಡರೆ ನಾಳೆ ಕಾಯಕಮಾಡದೆ ಸುಮ್ಮನೆ ಕುಳಿತಿರಬೇಕಾಗುತ್ತದೆ. ಹಾಗೆ ಸುಮ್ಮನೆ ಕುಳಿತುಕೊಳ್ಳುವುದು ಸೋಮಾರಿತನ. ಈ ಸೋಮಾರಿತನ ಒಂದು ರೋಗವಿದ್ದಂತೆ. ಅದು ಒಂದು ಸಲ ನಮ್ಮ ಮೈಗೂಡಿದರೆ ಅದನ್ನು ನಿವಾರಿಸುವುದು ಕಷ್ಟ, ಸೋಮಾರಿತನ ನಮ್ಮ ಹತ್ತಿರ ಬರದೆ ಇರಬೇಕಾದರೆ, ನಾವು ಪ್ರತಿ ನಿತ್ಯವೂ ಕಾಯಕ ಮಾಡುತ್ತಿರಬೇಕು. ಅದಕ್ಕೇ ಶರಣರು ಕಾಯಕಕ್ಕೆ ಅಷ್ಟೊಂದು ಮಹತ್ವ ಕೊಟ್ಟಿದ್ದರು. ಮಾರಯ್ಯ ಎಷ್ಟು ಜಾಣ! ಅವನು ಕೈಗೊಂಡದ್ದು ಎಂತಹ ಕಾಯಕ! ನೆಲದ ಮೇಲೆ ಬಿದ್ದ ಅಕ್ಕಿಯ ಕಾಳನ್ನು ಆರಿಸುವುದು. ಒಂದು ವೇಳೆ ಅಂತಹ ಅಕ್ಕಿಕಾಳನ್ನು ಆರಿಸದಿದ್ದರೆ ಅವು ಮಣ್ಣಲ್ಲಿ ಸೇರಿ ವ್ಯರ್ಥವಾಗುತ್ತಿದ್ದವು. ಮಾರಯ್ಯ ಅವನ್ನು ಆರಿಸಿ ತರುತ್ತಿದ್ದುದರಿಂದ ಅವುಗಳ ಸಾರ್ಥಕ ಬಳಕೆ ಆದಂತಾಯಿತು.

ಹೀಗೆ ಮಾರಯ್ಯ-ಲಕ್ಕಮ್ಮ ತಮ್ಮ ಜೀವನದ ಕೊನೆಯವರೆಗೂ ಕಾಯಕ ನಿಷ್ಠೆ ಮತ್ತು ದಾಸೋಹ ಸೇವೆಗಳನ್ನು ಸಲ್ಲಿಸಿದರು. ಅವರ ಸೇವೆಯನ್ನು ಕಂಡು ಅಂದಿನ ಶರಣರೆಲ್ಲ ಅವರನ್ನು ಕೊಂಡಾಡಿದರು.

ಈ ದಂಪತಿಯ ಜೀವನದಿಂದ ನಾವು ತಿಳಿದುಕೊಳ್ಳಬೇಕಾದುದೆಂದರೆ – ಶ್ರಮಪಟ್ಟು ದುಡಿಯಬೇಕು. ನಾವು ದುಡಿದುದನ್ನು ಮಿತವಾಗಿ ಬಳಸಬೇಕು. ಅಗತ್ಯವಿರುವವರಿಗೆ ಹಂಚಬೇಕು. ಗಳಿಸಿದುದನ್ನು ಮುಂದೆ ಬೇಕಾಗುತ್ತದೆ ಎಂದು ಸಂಗ್ರಹಿಸಿ ಇಟ್ಟುಕೊಳ್ಳಬಾರದು. ಹಾಗೆ ಸಂಗ್ರಹಿಸಿ ಇಟ್ಟುಕೊಂಡರೆ, ಅಗತ್ಯ ಇರುವವರಿಗೆ ಇಲ್ಲದಂತಾಗುತ್ತದೆ. ಆಗ ಉಳ್ಳವರು-ಇಲ್ಲದವರು ಎಂದರೆ ಶ್ರೀಮಂತರು-ಬಡವರು ಎಂಬ ಭೇದ ಉಂಟಾಗುತ್ತದೆ.

ಸಾಮಾಜಿಕ ನ್ಯಾಯಕ್ಕೆ ಭಂಗವುಂಟಾಗುತ್ತದೆ. ನಮ್ಮ ಅಗತ್ಯಕ್ಕಿಂತ ಹೆಚ್ಚು ಗಳಿಸುವುದು ಆಸೆಯಾಗುತ್ತದೆ. ಹೆಚ್ಚು ಬಳಸುವುದು ಅನರ್ಥವಾಗುತ್ತದೆ. ಹಾಗೆಯೇ ಕೂಡಿಟ್ಟುಕೊಳ್ಳುವುದು ಸ್ವಾರ್ಥವಾಗುತ್ತದೆ.

ಆಯ್ದಕ್ಕಿ ಮಾರಯ್ಯ ದಂಪತಿಯಂತೆ ‘ಅಂದಂದಿನ ಗಳಿಕೆ, ಅಂದಂದಿನ ಬಳಕೆ’ ನಮ್ಮ ಜೀವನದ ಸೂತ್ರವಾಗಬೇಕು!

ಕೃಪೆ: ಮಕ್ಕಳ ಅಭಿವೃದ್ಧಿ ಪ್ರಾಧಿಕಾರ.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

ರಾಜಕೀಯ

ಬೆಂಗಳೂರಿನಲ್ಲಿ ಶಾಶ್ವತ ಹೆಜ್ಜೆಗುರುತು ಬಿಟ್ಟು ಹೋಗುವ ಆಸೆ ನನ್ನದು : ಡಿಸಿಎಂ ಡಿ.ಕೆ. ಶಿವಕುಮಾರ್

ಬೆಂಗಳೂರಿನಲ್ಲಿ ಶಾಶ್ವತ ಹೆಜ್ಜೆಗುರುತು ಬಿಟ್ಟು ಹೋಗುವ ಆಸೆ ನನ್ನದು : ಡಿಸಿಎಂ ಡಿ.ಕೆ.

ಬೆಂಗಳೂರಿನಲ್ಲಿ ಬದಲಾವಣೆ ತರಬೇಕು, ನನ್ನ ಕೆಲಸಗಳ ಮೂಲಕ ನನ್ನ ಹೆಸರು ಶಾಶ್ವತವಾಗಿ ಉಳಿಯಬೇಕು, ಶಾಶ್ವತ ಹೆಜ್ಜೆ ಗುರುತು ಬಿಟ್ಟು ಹೋಗುವ ಆಸೆ ನನಗೆ ಇದೆ: D.K. Shivakumar

[ccc_my_favorite_select_button post_id="117318"]
ರಾಜ್ಯದಲ್ಲಿ 2,84,881 ಹುದ್ದೆಗಳು ಖಾಲಿ: ನಿರುದ್ಯೋಗಿಗಳ ಅಳಲು ಕೇಳುವವರು ಯಾರು..?

ರಾಜ್ಯದಲ್ಲಿ 2,84,881 ಹುದ್ದೆಗಳು ಖಾಲಿ: ನಿರುದ್ಯೋಗಿಗಳ ಅಳಲು ಕೇಳುವವರು ಯಾರು..?

ರಾಜ್ಯದಲ್ಲಿ ಸರ್ಕಾರದಲ್ಲಿ ವಿವಿಧ ಇಲಾಖೆಗಳೂ ಸೇರಿದಂತೆ ರಾಜ್ಯದಲ್ಲಿ ಬರೋಬ್ಬರಿ 2,84,881 ಹುದ್ದೆಗಳು ಖಾಲಿಯಿರುವ (Bacant Posts) ಮಾಹಿತಿ ಬಯಲಾಗಿದೆ.

[ccc_my_favorite_select_button post_id="117270"]
ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಸಂಸದ ಡಾ.ಕೆ.ಸುಧಾಕರ್‌ ಭಾಗಿ

ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಸಂಸದ ಡಾ.ಕೆ.ಸುಧಾಕರ್‌ ಭಾಗಿ

ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ಅವರೊಂದಿಗೆ, ಸಂಘಟನೆಯ ಟ್ರಸ್ಟಿಯೂ ಆಗಿರುವ ಸಂಸದ ಡಾ.ಕೆ.ಸುಧಾಕರ್‌ (Dr.K.Sudhakar)

[ccc_my_favorite_select_button post_id="113863"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಾವಳಿಗೆ ಅನುಮತಿ; ಸಚಿವ ಸಂಪುಟ ಸಭೆಯಲ್ಲಿ  ತೀರ್ಮಾನ: ಡಿಸಿಎಂ ಡಿ.ಕೆ.ಶಿವಕುಮಾರ್

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಾವಳಿಗೆ ಅನುಮತಿ; ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ: ಡಿಸಿಎಂ

"ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಗಳಿಗೆ ಅನುಮತಿ ನೀಡುವ ಬಗ್ಗೆ ಗುರುವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಿ ತೀರ್ಮಾನ ಮಾಡಲಾಗುವುದು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ (D.K. Shivakumar) ತಿಳಿಸಿದರು.

[ccc_my_favorite_select_button post_id="117214"]
ಫೇಸ್‌ಬುಕ್‌ ಪರಿಚಯ: ಮಹಿಳೆಗೆ ಹಣ ನೀಡಿ ಪೆಟ್ಟು ತಿಂದ ಯುವಕ

ಫೇಸ್‌ಬುಕ್‌ ಪರಿಚಯ: ಮಹಿಳೆಗೆ ಹಣ ನೀಡಿ ಪೆಟ್ಟು ತಿಂದ ಯುವಕ

ಫೇಸ್‌ಬುಕ್‌ನಲ್ಲಿ (Facebook) ಪರಿಚಯವಾದ ಮಹಿಳೆ ನೋಡಲು ಬೆಂಗಳೂರಿನಿಂದ ಮಡಿಕೇರಿಗೆ ಬಂದಿದ್ದ ಯುವಕನ ಮೇಲೆ ಮೂವರು ಯುವಕರು ಹಲ್ಲೆ ನಡೆಸಿರುವ ಘಟನೆ ಶುಕ್ರವಾರ ನಡೆದಿದೆ.

[ccc_my_favorite_select_button post_id="117343"]
ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ.. 3 ಮಂದಿ ದುರ್ಮರಣ

ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ.. 3 ಮಂದಿ ದುರ್ಮರಣ

ಕಾರು ಮತ್ತು ಕೆಎಸ್ಆರ್ಟಿಸಿ ಬಸ್ ನಡುವೆ ಭವಿಸಿದ ಭೀಕರ ರಸ್ತೆ ಅಫಘಾತದಲ್ಲಿ (Accident) ಮೂವರು ಸಾವನಪ್ಪಿರುವ ಘಟನೆ *** ಹೊರವಲಯದ *** ಗೇಟ್ ಬಳಿ ಸಂಭವಿಸಿದೆ.

[ccc_my_favorite_select_button post_id="117239"]

ಆರೋಗ್ಯ

ಸಿನಿಮಾ

‘ದಿ ಡೆವಿಲ್’ ರಿಲೀಸ್; ದೊಡ್ಡಬಳ್ಳಾಪುರದಲ್ಲಿ ಮುಗಿಲು ಮುಟ್ಟಿದ ದರ್ಶನ್ ಅಭಿಮಾನಿಗಳ ಸಂಭ್ರಮ.!| Video ನೋಡಿ

‘ದಿ ಡೆವಿಲ್’ ರಿಲೀಸ್; ದೊಡ್ಡಬಳ್ಳಾಪುರದಲ್ಲಿ ಮುಗಿಲು ಮುಟ್ಟಿದ ದರ್ಶನ್ ಅಭಿಮಾನಿಗಳ ಸಂಭ್ರಮ.!| Video

ಅಭಿಮಾನಿಗಳ ದಾಸ, ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ (Darshan) ಅಭಿನಯದ ಬಹುನಿರೀಕ್ಷಿತ ಚಿತ್ರ 'ದಿ ಡೆವಿಲ್' ಇಂದು (ಡಿ.11) ರಾಜ್ಯಾದ್ಯಂತ ಅದ್ಧೂರಿಯಾಗಿ ರಿಲೀಸ್ ಆಗಿದ್ದು, ಯಶಸ್ವಿ ಪ್ರದರ್ಶನ ಕಾಣುತ್ತಿದೆ.

[ccc_my_favorite_select_button post_id="117242"]