ದೊಡ್ಡಬಳ್ಳಾಪುರ, (ಜುಲೈ.16); ನಗರದ ದರ್ಜಿಪೇಟೆಯಲ್ಲಿನ ಶ್ರೀ ಪಾಂಡುರಂಗಸ್ವಾಮಿ ದೇವಾಲಯದಲ್ಲಿ ಶ್ರೀ ಭಾವಸಾರ ಕ್ಷತ್ರಿಯ ಸಮಾಜದ ವತಿಯಿಂದ ಆಷಾಢ ಏಕಾದಶಿ ಅಂಗವಾಗಿ ಏಕಾದಶಿ ವಿಶೇಷ ಪೂಜಾ ಕಾರ್ಯಕ್ರಮ ಜುಲೈ17 ರಂದು ನಡೆಯಲಿದೆ.
ಇದರ ಅಂಗವಾಗಿ ಅಂದು ಬೆಳಗ್ಗೆ 4 ಕ್ಕೆ ವಿಶೇಷ ಪಂಚಾಮೃತಾಭಿಷೇಕ, ಮುತ್ತಿನ ಅಲಂಕಾರ, ಸಂಜೆ 7ಕ್ಕೆ ಸಾಂಪ್ರದಾಯಿಕ ಪಂಡರಿ ಭಜನೆ ಮತ್ತು ಮಹಿಳೆಯರಿಂದ ವಿಷ್ಣು ಮತ್ತು ಲಲಿತ ಸಹಸ್ರ ನಾಮ ಪಾರಾಯಣ ಏರ್ಪಡಿಸಲಾಗಿದೆ.
ಜುಲೈ 18 ರಂದು ಬೆಳಗ್ಗೆ 08 ಗಂಟೆಗೆ ರುಕ್ಮಿಣಿ ಸತ್ಯಭಾಮ ಸಮೇತ ಶ್ರೀ ಪಾಂಡುರಂಗ ಸ್ವಾಮಿಯ ಮೆರವಣಿಗೆ ಕಾರ್ಯಕ್ರಮವಿರುತ್ತದೆ ಎಂದು ದೇವಾಲಯದ ಪ್ರಕಟಣೆ ತಿಳಿಸಿದೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….