prajwal| ಸದನದಲ್ಲಿ ಪ್ರಜ್ವಲ್ ಕೇಸ್ ಸದ್ದು.. ನನ್ನ ಮಗ ತಪ್ಪುಮಾಡಿದ್ದರೆ ಗಲ್ಲಿಗೇರಿಸಿ ಎಂದ ರೇವಣ್ಣ..!

ಬೆಂಗಳೂರು, (ಜುಲೈ.16): ವಿಧಾನಸಭೆಯ ಮುಂಗಾರ ಅಧಿವೇಶನದಲ್ಲಿ ವಾಲ್ಮೀಕಿ ಹಗರಣದ ವಾದ, ಚರ್ಚೆ ಸದ್ದು-ಗದ್ದಲದ ನಡುವೆಯೇ ಇಂದು ಎಸ್‌ಐಟಿ ತನಿಖಾ ಸಂಸೆ ವಿಚಾರವಾಗಿ ಮಾತನಾಡುವ ಬರದಲ್ಲಿ ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಜೆಡಿಎಸ್ ಶಾಸಕ ರೇವಣ್ಣ ಪ್ರಕರಣ ಎಳೆದು ತಂದರು..

ಈ ವೇಳೆ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣನ ಅತ್ಯಾಚಾರ, ಅಶ್ಲೀಲ ವಿಡಿಯೋ ಆರೋಪದ ಕೇಸ್ ಕುರಿತು ಚರ್ಚೆಗೆ ವೇದಿಕೆಯಾಯಿತು.

ಈ ಪ್ರಕರಣದ ಬಗ್ಗೆ ಮಾತನಾಡಿದ ಪ್ರಜ್ವಲ್ ತಂದೆ ಹಾಗೂ ಜೆಡಿಎಸ್ ಶಾಸಕ ಹೆಚ್.ಡಿ. ರೇವಣ್ಣ ‘ನನ್ನ ಮಗ ತಪ್ಪು ಮಾಡಿದ್ದರೆ ಗಲ್ಲಿಗೆ ಹಾಕಲಿ ನಾನು ಬೇಡ ಅನ್ನಲ್ಲ. ಆ ಪ್ರಕರಣದ ಬಗ್ಗೆ ವಹಿಸಿಕೊಂಡು ನಾನು ಮಾತನಾಡಲು ಇಲ್ಲಿಗೆ ಬಂದಿಲ್ಲ’ ಎಂದಿದ್ದಾರೆ.

ತಮ್ಮ ವಿರುದ್ಧ ಅನಗತ್ಯವಾಗಿ ಆರೋಪಿಸಿ, ಯಾರೋ ಹೆಣ್ಣು ಮಗಳನ್ನು ಕರೆದುತಂದು ಡಿಜಿ ಕಚೇರಿಯಲ್ಲಿ ಡಿಜಿ ದೂರು ಬರೆಸಿಕೊಂಡಿದ್ದಾರೆ. ಹಾಗಿದ್ದ ಮೇಲೆ ಅವನು ಡಿಜಿ ಆಗಲು ಲಾಯಕ್ಕಾ ಎಂದು ರೇವಣ್ಣ ಸದನದಲ್ಲಿ ಪ್ರಶ್ನಿಸಿದರು.

ಏರುಧ್ವನಿಯಲ್ಲೇ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಮಾತು ಮುಂದುವರಿಸಿದ ರೇವಣ್ಣ ಹಾಗೂ ಸರ್ಕಾರದ ಶಾಸಕರ ನಡುವೆ ಮಾತಿನಚಕಮಕಿಗೆ ಕಾರಣವಾಯಿತು.

ಈ ವೇಳೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾ‌ರ್ ಮಾತನಾಡಿ, ನಿಮಗೆ ಆ ಆಧಿಕಾರಿಯಿಂದ ತೀರಾ ಅನ್ಯಾಯವಾಗಿದ್ದರೆ ನೊಟೀಸ್ ಕೊಡಿಸಿ ಚರ್ಚಿಸೋಣ ಎಂದು ಹೇಳಿದರು‌.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….