ಜೈಪುರ, (ಆಗಸ್ಟ್ 13): ವ್ಯಕ್ತಿಯೊಬ್ಬ ತನ್ನ ಪತ್ನಿ ಮಾಡಿರುವ ಚಿಕ್ಕತಪ್ಪಿಗೆ ಆಕೆಯ ಕಾಲುಗಳನ್ನು ಬೈಕ್ ನ ಹಿಂಭಾಗಕ್ಕೆ ಕಟ್ಟಿ ರಸ್ತೆಯುದ್ದಕ್ಕೂ ಎಳೆದೊಯ್ಯುವ ಮೂಲಕ ಶಿಕ್ಷೆ ನೀಡಿರುವ ದಾರುಣ ಘಟನೆ ರಾಜಸ್ಥಾನದ ನಾಗ್ವುರ್ ನಲ್ಲಿ ನಡೆದಿದೆ.
ಈ ಕುಕೃತ್ಯ ಮಾಡಿದವನನ್ನು ಪ್ರೇಮ್ ರಾಮ್ ಮೇಘವಾಲ್ ಎಂದು ಗುರುತಿಸಲಾಗಿದೆ.
ಹಲ್ಲೆ ನಡೆಸಿ ನಂತರ ಕಾಲುಗಳನ್ನು ಹಗ್ಗದ ಮೂಲಕ ಬೈಕ್ ನ ಹಿಂಬದಿಗೆ ಕಟ್ಟಿದ್ದಾನೆ. ತದನಂತರ ಬೈಕ್ ಅನ್ನು ಹೊಂಡ ಗುಂಡಿಗಳಲ್ಲಿ ಎಳೆದುಕೊಂಡು ಹೋಗಿದ್ದಾನೆ. ಸಹಾಯಕ್ಕಾಗಿ ಪತ್ನಿ ಅಂಗಾಲಾಚುತ್ತಿದ್ದರು ಕೂಡ ಹಿಂಸೆ ನೀಡಿದ್ದಾನೆ ಪಾಪಿ ಪತಿರಾಯ.
ದಾಳಿಯಲ್ಲಿ ಪತಿ ಸೇರಿದಂತೆ ಇನ್ನು ಇಬ್ಬರು ಮಹಿಳೆಗೆ ಹಿಂಸೆ ನೀಡಿದ್ದಾನೆ ಎನ್ನಲಾಗಿದೆ. ಇದೀಗ ಮಹಿಳೆಯ ಮೇಲೆ ಹಲ್ಲೆ ನಡೆಸಿದ ವಿಡಿಯೋ ವೈರಲ್ (Viral) ಆಗಿದೆ.
ಆರೋಪಿ ಪ್ರೇಮ್ ರಾಮ್ ಮೇಘವಾಲ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….