ದೊಡ್ಡಬಳ್ಳಾಪುರ, (ಸೆ.06); ನಗರದ ಗ್ರಾಮಾಂತರ ಪೊಲೀಸ್ ಠಾಣೆಗೆ ಹೊಂದಿಕೊಂಡಂತಿರುವ ಪೊಲೀಸ್ ಕ್ವಾಟ್ರಸ್ ಸುತ್ತಲು ಬೆಳೆದಿದ್ದ ಗಿಡಗೆಂಟೆಗಳನ್ನು ಸ್ವಚ್ಛ ಮಾಡುವ ಮೂಲಕ ಸರ್ಕಾರಿ ಕಾಲೇಜಿನ ವಿದ್ಯಾರ್ಥಿಗಳು ಗುರುವಾರ ಶ್ರಮದಾನ ನಡೆಸಿದ್ದಾರೆ.
ಪೋಲಿಸ್ ವಸತಿ ನಿಲಯ ಸುತ್ತಮುತ್ತ ಸ್ವಚ್ಛಗೊಳಿಸುವಾಗ ಸುಮಾರು 10ಕ್ಕೂ ಹೆಚ್ಚು ಹಾವುಗಳು ಪತ್ತೆಯಾಗಿದ್ದು ಕೆಲಕಾಲ ಆತಂಕಕ್ಕೆ ಕಾರಣವಾಗಿತ್ತು.
ಕೂಡಲೇ ಹೆಚ್ಚೆತ್ತ ಪೊಲೀಸರು ಉರಗ ತಜ್ಞ ರಾಮಾಂಜಿ ಎನ್ನುವವರನ್ನು ಸ್ಥಳಕ್ಕೆ ಕರೆಯಿಸಿ, ಸುಮಾರು 10 ಹಾವುಗಳನ್ನು ಹಿಡಿಸಿ ಸಂರಕ್ಷಣೆ ಮಾಡಲಾಗಿದೆ ಎಂದು ಗ್ರಾಮಾಂತರ ಪೊಲೀಸ್ ಠಾಣೆಯ ಅಧಿಕೃತ ಫೇಸ್‌ಬುಕ್ ಖಾತೆಯಲ್ಲಿ ಬರೆಯಲಾಗಿದೆ.
ಶ್ರಮದಾನದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್‌ಎಸ್‌ಎಸ್ ವಿದ್ಯಾರ್ಥಿಗಳು, ಸ್ಕೌಟ್ ಅಂಡ್ ಗೈಡ್ ಸೇರಿದಂತೆ ಪೊಲೀಸ್ ಇಲಾಖೆಯ ಎಲ್ಲಾ ಸಿಬ್ಬಂದಿ ವರ್ಗದವರು ಜೊತೆಗೂಡಿ ಪೊಲೀಸ್ ವಸತಿ ಗೃಹದ ಸುತ್ತ ಸ್ವಚ್ಚತಾ ಕಾರ್ಯ ನಡೆಸಿದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….