ವಿಡಿಯೋ ವೈರಲ್ ಆಟೋ ಚಾಲಕ ಸೆರೆ: ಕೆರಳಿದ ರೂಪೇಶ್ ರಾಜಣ್ಣ| ಕಾರಣವೇನು ವಿಡಿಯೋ ನೋಡಿ

ಬೆಂಗಳೂರು, (ಸೆ.06); ಬೆಂಗಳೂರು ಓಲಾ ಆಟೋ ಬುಕಿಂಗ್ ಕ್ಯಾನ್ಸಲ್ ಮಾಡಿದ್ದಕ್ಕೆ ಹೊರರಾಜ್ಯದ ರರಾಜ್ಯದ ವಿದ್ಯಾರ್ಥಿ ನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ಮಾಡಿದ ಆರೋಪದಡಿ ಆಟೋ ಚಾಲಕನನ್ನು ಮಾಗಡಿ ರಸ್ತೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

ದೊಡ್ಡಕಲ್ಲಸಂದ್ರದ ಮುತ್ತುರಾಜ್ ಬಂಧಿತ ಆಟೋ ಚಾಲಕನಾಗಿದ್ದು, ಸೆ.2ರಂದು ರಾಜಾಜಿನಗರದ ಡಾ| ರಾಜ್ ಕುಮಾರ್ ರಸ್ತೆಯಲ್ಲಿ ಈ ಘಟನೆ ನಡೆದಿದೆ.

ಈ ಘಟನೆ ಸಂಬಂಧ ಬಿಹಾರ ಮೂಲದ ವಿದ್ಯಾರ್ಥಿನಿ ನೀತಿ ಶರ್ಮಾ ತಮ್ಮ ಎಕ್ಸ್ ಖಾತೆಯಲ್ಲಿ ಆಟೋ ಚಾಲಕ ಮುತ್ತುರಾಜ್ ವರ್ತನೆ ವಿಡಿ ಯೋ ಹಂಚಿಕೊಂಡು ಘಟನೆ ಬಗ್ಗೆ ಬರೆದುಕೊಂಡಿದ್ದರು. ಓಲಾ ಕಂಪನಿ ಹಾಗೂ ನಗರ ಪೊಲೀಸರಿಗೂ ಟ್ಯಾಗ್ ಮಾಡಿದ್ದರು. 

ಘಟನೆ ನಡೆದ ಸ್ಥಳದ ಆಧಾರದ ಮೇಲೆ ಮಾಗಡಿ ರಸ್ತೆ ಠಾಣೆ ಪೊಲೀಸರು, ನೀತಿಶರ್ಮಾ ಅವರ ದೂರಿಗೆ ಸ್ಪಂದಿಸಿದ್ದಾರೆ. ನೀತಿಯಿಂದ ದೂರು ಪಡೆದು ಪ್ರಕರಣ ದಾಖಲಿಸಿ, ಆಟೋ ಚಾಲಕ ಮುತ್ತುರಾಜ್‌ನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಘಟನೆ ಬೆನ್ನಲ್ಲೇ ರೂಪೇಶ್ ರಾಜಣ್ಣ ಕೆರಳಿದ್ದು, ಕರ್ನಾಟಕದಲ್ಲಿ 2 ರೀತಿಯ ಘಟನೆ ಒಂದು ಕಡೆ ಏರ್ಫೋರ್ಟ್ ಬಳಿ ಕನ್ನಡಿಗನ ಮೇಲೆ ಹಿಂದಿ ಸೇಕ್ಯೂರಿಟಿ ಹಲ್ಲೆ ಮಾಡ್ತಾನೆ. ಇದಕ್ಕೆ ಕ್ರಮವು ಆಗಲಿಲ್ಲಾ ಸುದ್ದಿಯು ಆಗಲಿಲ್ಲಾ. ಇನ್ನೊಂದು ಕಡೆ 2ಆಟೋ ಬುಕ್ ಮಾಡಿ ಕ್ಯಾನ್ಸಲ್ ಮಾಡಿದ್ದಕ್ಕೆ ಗಲಾಟೆ ಆಗಿದೆ ಇದು ದೇಶಾದ್ಯಂತ ಸುದ್ದಿಯಾಗಿ ಈತ ಅರೆಸ್ಟ್ ಆಗ್ತಾನೆ ಅವರು ಮಾಡಿದ್ರೆ ಸರಿನಾ..? ಎಂಬ ಪ್ರಶ್ನೆ ಮಾಡಿದ್ದಾರೆ.

ಈ ಕುರಿತಂತೆ ಸರಣಿ ಟ್ವಿಟ್ ಮಾಡಿರುವ ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ, ಹಿಂದಿ ಹುಡುಗಿ ವಿಡಿಯೋ ಮಾಡಿದ್ರು, ಕೂಡಲೇ ದೇಶಾದ್ಯಂತ ಸುದ್ದಿ ಮಾಡಿಬಿಟ್ರು ತಕ್ಷಣ ಪೊಲೀಸ್ ಇಲಾಖೆ ತಮ್ಮ ಟ್ವಿಟ್ಟರ್ ಅಲ್ಲಿ ಈ ಆಟೋ ಡ್ರೈವರ್ ಫೋಟೋ ಹಾಕಿದ್ರಿ. ಹಾಗೆ ಕನ್ನಡ, ಕನ್ನಡಿಗರ ವಿಚಾರದಲ್ಲಿ ಅಸಭ್ಯವಾಗಿ ನಡೆದುಕೊಂಡ ಹತ್ತಾರು ಘಟನೆಗಳ ಯಾವ ಹಿಂದಿಗನ ವಿರುದ್ಧದ ಕ್ರಮದ ಫೋಟೋ ಇದುವರೆಗೂ ಟ್ವಿಟ್ ಮಾಡಿದ್ದೀರಿ ಎಂದು ಪ್ರಶ್ನಿಸಿದ್ದಾರೆ.

ಆಟೋ ಚಾಲಕ ಮಾಡಿದ ತಪ್ಪಿಗೆ ಕ್ರಮ ಆಗಿದೆ ಅಭಿನಂದನೆಗಳು. ಇದೆ ರೀತಿ ಹತ್ತಾರು ಘಟನೆಗಳು ಬ್ಯಾಂಕ್ ಗಳು ಸೇರಿದಂತೆ ಸಾರ್ವಜನಿಕವಾಗಿ ಕನ್ನಡ, ಕನ್ನಡಿಗರ ಮೇಲೆ ಕರ್ನಾಟಕದಲ್ಲಿ ಆಗಿವೆ. ಎಷ್ಟು ಜನರ ಮೇಲೆ ಈ ರೀತಿ ಕ್ರಮ ಮಾಡಿ ಅವರ ಫೋಟೋ ಟ್ವಿಟ್ಟರ್ನಲ್ಲಿ ಹಾಕಿದ್ದೀರಾ? ನಮ್ಮವರು ಮಾಡಿದ್ರೆ ತಪ್ಪು ಹೊರಗಿನವರು ಮಾಡಿದ್ರೆ ಸರಿನಾ? ಅವ್ರೇನು ಸುಪ್ರೀಂಗಳಾ? ಎಂದು ರೂಪೇಶ್ ರಾಜಣ್ಣ ಕಿಡಿಕಾರಿದ್ದಾರೆ.

ಕರ್ನಾಟಕವನ್ನು ತೂ ಎಂದೂ ಉಗಿದು ಕನ್ನಡವನ್ನು ಬುಲ್ಶೀಟ್ ಭಾಷೆ ಎಂದೂ ಕರೆದು ಕನ್ನಡಿಗರ ಭಾವನೆಗೆ ಧಕ್ಕೆ ತಂದ ಈ ದುರಹಂಕಾರಿಯ ವಿರುದ್ದ ಅಮೃತ್ತಳ್ಳಿ ಠಾಣೆಯಲ್ಲಿ ದೂರು ನೀಡಿದ್ರು ಈಕೆಯ ಮೇಲೆ ಕ್ರಮ ಆಗಲಿಲ್ಲಾ.

ಬೆಂಗಳೂರಿಗೆ ಬದುಕಲು ಬಂದು ಇಲ್ಲೇ ಇದ್ದು ಕನ್ನಡ ಕಲಿಯಲ್ಲ ಅನ್ನೋದು ದುರಹಂಕಾರ ತಾನೇ? ಇಂತಹ ಮನಸ್ಥಿತಿನಾ ಕನ್ನಡಿಗರು ವಿರೋಧಿಸೋದು ಎಂದು ವಿಡಿಯೋ ಶೇರ್ ಮಾಡಿದ್ದಾರೆ.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….