ಬೆಂಗಳೂರು, (ಸೆ.14); ತನ್ನ ಪ್ರಿಯತಮನ ಜತೆ ಸೇರಿ, ತಾಯಿಯ ಕತ್ತು ಹಿಸುಕಿ ಕೊಲೆ ಮಾಡಿದ್ದು, ನಾಟಕ ಮಾಡಿದ್ದಾಳೆ. ಕೊನೆಗೆ ಅನುಮಾನಗೊಂಡ ಪೊಲೀಸರು, ತಮ್ಮ ಪೊಲೀಸ್ ಭಾಷೆಯಲ್ಲಿ ವಿಚಾರಣೆ ನಡೆಸಿದಾಗ ಹಂತಕಿ ಮಗಳು ಸತ್ಯ ಕಕ್ಕಿದ್ದಾಳೆ.
ಇಂಥದೊಂದು ಭೀಕರ ಘಟನೆ ಬೊಮ್ಮನಹಳ್ಳಿ ವಲಯದ ಹೊಂಗ ಸಂದ್ರದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
46 ವರ್ಷದ ಜಯಲಕ್ಷ್ಮೀ ಎಂಬುವರೇ ಕೊಲೆಯಾದ ನತದೃಷ್ಟ ತಾಯಿ. ಮಗಳು ಪವಿತ್ರಾ ಎಂಬಾಕೆ ತನ್ನ ಪ್ರಿಯತಮ ನವನೀಶ್ ಎಂಬಾತನೊಂದಿಗೆ ಸೇರಿಕೊಂಡು, ತಾಯಿ ಯನ್ನು ಕೊಲೆ ಮಾಡಿ, ಬಾತ್ ರೂಂನಲ್ಲಿ ಜಾರಿ ಬಿದ್ದು ತನ್ನ ತಾಯಿ ಸತ್ತಿದ್ದಾಗಿ ನಾಟಕ ಮಾಡಿದ್ದಾಳೆ.
ಕಳೆದ ಎರಡು ದಿನಗಳ ಹಿಂದೆ ಘಟನೆ ನಡೆದಿದ್ದು, ಇದೀಗ ಬೆಳಕಿಗೆ ಬಂದಿದೆ. ಸ್ನೇಹಿತ ನವನೀಶ್ ಜತೆ ಸೇರಿ ತಾಯಿಯ ಕೊಲೆ ಮಾಡಿದ ಪವಿತ್ರ ಡ್ರಾಮಾ ಮಾಡಿದ್ದಾಳೆ. ಕೊನೆಗೆ ಪೊಲೀಸರಿಗೆ ಅನುಮಾನ ಬಂದು, ವಿಚಾರಣೆ ನಡೆಸಿದಾಗ ಸತ್ಯ ಬೆಳಕಿಗೆ ಬಂದಿದೆ.
ದಿನಸಿ ಅಂಗಡಿ ಇಟ್ಟುಕೊಂಡಿದ್ದ ತಾಯಿ: ಇನ್ನು ಕೊಲೆಯಾದ ಜಯಲಕ್ಷ್ಮಿ ದಿನಸಿ ಅಂಗಡಿ ಇಟ್ಟುಕೊಂಡು ಜೀವನ ನಡೆಸುತ್ತಿದ್ದರು. ಆಕೆಯ ಮಗಳು ಪವಿತ್ರಾ, ತನ್ನ ಸ್ನೇಹಿತ ನವನೀಶ್ ಎಂಬಾತನ ಜತೆ ಸಲುಗೆಯಿಂದ ಇದ್ದಳು. ತಾಯಿ ಮನೆ ಯಲ್ಲಿ ಇಲ್ಲದೆ ವೇಳೆ ಪವಿತ್ರಾ ನವನೀಶ್‌ನನ್ನು ಮನೆಗೆ ಕರೆಸಿಕೊಂಡಿದ್ದಳು. ತಾಯಿ ಮನೆಗೆ ಬಂದಾಗ ಇಬ್ಬರ ವಿಚಾರ ಬಯಲಾಗಿದೆ.
ಈ ವೇಳೆ ತಾಯಿ ಮತ್ತು ಮಗಳ ನಡುವೆ ಜಗಳ ಉಂಟಾಗಿದೆ. ಕೊನೆಗೆ ತಾಯಿ, ಮಗಳ ನಡುವಿನ ಜಗಳ ವಿಕೋಪಕ್ಕೆ ಹೋಗಿದೆ. ಬಳಿಕ ಸ್ನೇಹಿತನ ಜತೆ ಸೇರಿ ತಾಯಿಯ ಕತ್ತು ಹಿಸುಕಿ ಪವಿತ್ರಾ ಕೊಲೆ ಮಾಡಿದ್ದಾಳೆ.
ಇದಾದ ಮೇಲೆ ತಾಯಿ ಸಾವಿನ ಬಗ್ಗೆ ಪೊಲೀಸರಿಗೆ ಕಥೆ ಕಟ್ಟಿ ಹೇಳಿದ್ದಾಳೆ. ತನ್ನ ತಾಯಿ ಬಾತ್ ರೂಮ್‌ನಲ್ಲಿ ಜಾರಿ ಬಿದ್ದು ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾಳೆ. ಆದರೆ ಜಯಲಕ್ಷ್ಮಿಯ ಮೃತದೇಹ ನೋಡಿ ಪೊಲೀಸರು ಅನುಮಾನ ವ್ಯಕ್ತಪಡಿಸಿದರು.
ಈ ಅನುಮಾನ ನಿಜವಾಗಿದೆ. ಮೃತ ದೇಹದ ಮರಣೋತ್ತರ ಪರೀಕ್ಷೆ ವೇಳೆ ಕೊಲೆ ಅನ್ನೋದು ಬೆಳಕಿಗೆ ಬಂದಿದೆ. ಕೂಡಲೇ ಪೊಲೀಸರು ಪವಿತ್ರಾ ಹಾಗೂ ನವನೀಶ್‌ನನ್ನು ಬಂಧಿಸಿದ್ದಾರೆ.
ಈ ಬಗ್ಗೆ ಬೊಮ್ಮಸಂದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….