ಹರಿತಲೇಖನಿ ದಿನಕ್ಕೊಂದು ಕಥೆ: ಬಾವಿಯೊಳಗೆ ಪಿಶಾಚಿ..!

ಬಹಳ ಹಿಂದೆ ಹುಡುಗನೊಬ್ಬ ಆಟವಾಡುತ್ತಾ ಆ ಬಾವಿಯಲ್ಲಿ ಬಿದ್ದಿ¤ದ್ದನಂತೆ. ಮಕ್ಕಳು ಬಾವಿ ಹತ್ತಿರ ಸುಳಿದರೆ ಆತನ ಆತ್ಮ ಆಟವಾಡಲು ಕರೆಯುತ್ತದೆ ಎಂದು ಊರವರೆಲ್ಲಾ ನಂಬಿದ್ದರು. ಆದರೆ ಶಾಂತಕುಮಾರ ಅದನ್ನು ನಂಬಲಿಲ್ಲ!

ಒಂದಾನೊಂದು ಊರಿನಲ್ಲಿ ಹಾಳು ಬಾವಿಯೊಂದಿತ್ತು. ಆ ಬಾವಿಯಲ್ಲಿ ಪಿಶಾಚಿಯಿದೆ ಎಂಬ ನಂಬಿಕೆ ಊರವರದಾಗಿತ್ತು. ಹೀಗಾಗಿ ಆ ಬಾವಿಯ ನೀರನ್ನು ಕುಡಿಯುವುದಿರಲಿ, ಅತ್ತ ಸುಳಿಯುತ್ತಲೂ ಇರಲಿಲ್ಲ.

ಬಹಳ ಹಿಂದೆ ಹುಡುಗನೊಬ್ಬ ಆಟವಾಡುತ್ತಾ ಆ ಬಾವಿಯಲ್ಲಿ ಬಿದ್ದು ಸತ್ತಿದ್ದನಂತೆ. ಮಕ್ಕಳು ಹತ್ತಿರದಲ್ಲಿ ಸುಳಿದರೆ ಆಟವಾಡಲು ಕರೆಯುತ್ತಾನೆ ಎಂದು ಊರವರೆಲ್ಲಾ ನಂಬಿದ್ದರು. ಇಂಥಾ ನೂರಾರು ವದಂತಿಗಳು ಊರಿನಲ್ಲಿ ಪ್ರಚಲಿತವಿದ್ದವು.

ಹೀಗಿರಲು ಪಕ್ಕದ ಊರಿನಿಂದ ಶಾಂತಕುಮಾರ ಎಂಬುವನೊಬ್ಬನು ಬಂದನು. ಬಾವಿಯ ಹಿನ್ನೆಲೆ ಒಂದೂ ಅವನಿಗೆ ತಿಳಿದಿರಲಿಲ್ಲ. ತುಂಬಾ ದೂರ ಪ್ರಯಾಣ ಮಾಡಿ ದಣಿದಿದ್ದ. ದಾಹ ನೀಗಿಸಲು ಬಾವಿಯ ನೀರನ್ನು ಕುಡಿಯುತ್ತಿದ್ದಾಗ, ಊರ ಹಿರಿಯರೊಬ್ಬರು ನೋಡಿಬಿಟ್ಟರು. ಅವರು “ಯಾರು ನೀನು? ಬಾವಿಯ ನೀರನ್ನು ಏಕೆ ಕುಡಿದೆ?’ ಎಂದು ತರಾಟೆಗೆ ತೆಗೆದುಕೊಂಡರು. ಶಾಂತಕುಮಾರ ನಡೆದುದೆಲ್ಲವನ್ನೂ ಹೇಳಿದನು. ಆ ಹಿರಿಯ ವ್ಯಕ್ತಿ ಬಾವಿಯ ಕತೆಯೆಲ್ಲವನ್ನೂ ವಿವರಿಸಿದರು.

ಶಾಂತಕುಮಾರನಿಗೆ ಕುತೂಹಲ ತಾಳಲಾಗಲಿಲ್ಲ. ಅವನಿಗೆ ದೆವ್ವದ ಕತೆಯ ಮೇಲೆ ನಂಬಿಕೆ ಬರಲಿಲ್ಲ. ಮರುದಿನ ತನ್ನ ಸ್ನೇಹಿತರನ್ನು ಬರಹೇಳಿದ. ಅವರೆಲ್ಲರೂ ಆ ದಿನ ರಾತ್ರಿ ಬಾವಿ ಬಳಿಯ ಪೊದೆಯೊಂದರಲ್ಲಿ ಅಡಗಿ ಕುಳಿತರು. ಸ್ವಲ್ಪ ಹೊತ್ತಿನಲ್ಲಿ ಪಿಸುಗುಡುವ ದನಿ ಕೇಳಿಸಿತು.

ಕಂಬಳಿ ಹೊದ್ದ ಆಕೃತಿಗಳೆಡರು ಬಾವಿಯ ಬಳಿ ಬಂದು ಅದೇನೋ ಪಿಸುಗುಡುತ್ತಾ ಕತ್ತಲಲ್ಲಿ ಮರೆಯಾಯಿತು. ಶಾಂತಕುಮಾರನ ಸ್ನೇಹಿತರು ಇದು ದೆವ್ವವೇ ಎಂದು ತಿಳಿದರು. ಊರವರಿಗೆ ಸುದ್ದಿ ಗೊತ್ತಾದಾಗ ಸ್ನೇಹಿತರ ಭಂಡತನಕ್ಕೆ ಬೈದರು.

ಇಷ್ಟೆಲ್ಲಾ ಆದರೂ ಶಾಂತಕುಮಾರನಿಗೆ ಮಾತ್ರ ಇದು ದೆವ್ವದ ಕೆಲಸವೆಂದು ನಂಬಿಕೆ ಬರಲಿಲ್ಲ. ಮತ್ತೂಂದು ದಿನ ರಾತ್ರಿ ತಾನೊಬ್ಬನೇ ಬಾವಿ ಬಳಿಗೆ ತೆರಳಿದ. ಹಿಂದಿನ ದಿನ ಆಗಿದ್ದಂತೆಯೇ ಕಂಬಳಿ ಹೊದ್ದ ಎರಡು ಆಕೃತಿಗಳು ಬಂದು ಹೋದವು. ನಂತರ ಶಾಂತಕುಮಾರ ಬಾವಿಗಿಳಿದು ನೋಡಿದ. ಅವನಿಗೆ ಮುತ್ತು, ರತ್ನ, ಚಿನ್ನದ ನಾಣ್ಯಗಳಿಂದ ತುಂಬಿದ ಪೆಟ್ಟಿಗೆಗಳು ಸಿಕ್ಕವು. ಸ್ವಲ್ಪ ಹೊತ್ತಿಗೆ ಮುಂಚೆ ಬಾವಿಯ ಬಳಿ ಬಂದಿದ್ದವರು ಕಳ್ಳರಾಗಿದ್ದರು ಎನ್ನುವುದು ಶಾಂತಕುಮಾರನಿಗೆ ತಿಳಿಯಿತು. ಅವನು ತನ್ನ ಗೆಳೆಯರಿಗೆ ಸುದ್ದಿ ಮುಟ್ಟಿಸಿದ.

ಅವರೆಲ್ಲರೂ ಜೊತೆಗೂಡಿ ಕಳ್ಳರನ್ನು ಹಿಡಿದುಹಾಕಿ ಊರವರ ಮುಂದೆ ಹಾಜರು ಪಡಿಸಿದರು. ಸತ್ಯ ಬಯಲಾಯಿತು. ಕಳ್ಳರು, ಸುಳ್ಳು ವದಂತಿಗಳನ್ನು ಹಬ್ಬಿಸಿ ತಮ್ಮ ಕಳ್ಳ ಮಾಲನ್ನು ಇಡಲು ಬಾವಿಯನ್ನು ಉಪಯೋಗಿಸುತ್ತಿದ್ದರು.  ಶಾಂತಕುಮಾರ ಮತ್ತು ಸ್ನೇಹಿತರ ಬುದ್ಧಿವಂತಿಕೆಗೆ ಊರ ಹಿರಿಯರೆಲ್ಲ ಬೆನ್ನು ತಟ್ಟಿ ಅವರಿಗೆ ಸಿಹಿ ನೀಡಿದರು.

ಕೃಪೆ: ಸಾವಿತ್ರಿ ಶ್ಯಾನಭಾಗ (ಸಾಮಾಜಿಕ ಜಾಲತಾಣ)

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

ರಾಜಕೀಯ

ಮೋದಿ ಸರ್ಕಾರದ ಮಲತಾಯಿ ಧೋರಣೆ: ಕೇರಳದಲ್ಲಿ ಇಂದು ಬ್ಲ್ಯಾಕ್ ಡೇ..!

ಮೋದಿ ಸರ್ಕಾರದ ಮಲತಾಯಿ ಧೋರಣೆ: ಕೇರಳದಲ್ಲಿ ಇಂದು ಬ್ಲ್ಯಾಕ್ ಡೇ..!

ಪ್ರಧಾನಿ ನರೇಂದ್ರ ಮೋದಿ (Narendra Modi) ನೇತೃತ್ವದ ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಮಿತ್ರಪಕ್ಷ ಅಧಿಕಾರದಲ್ಲಿರುವ ಆಂಧ್ರಪ್ರದೇಶದ ಹೊರತುಪಡಿಸಿ ದಕ್ಷಿಣ ಭಾರತದ ರಾಜ್ಯಗಳಿಗೆ ನಿರ್ಲಕ್ಷ್ಯ ತೋರಿದೆ ಎಂಬ ಆಕ್ರೋಶ ವ್ಯಾಪಕವಾಗಿದೆ.

[ccc_my_favorite_select_button post_id="119088"]
ಕೇಂದ್ರ ಬಜೆಟ್.. ಕಾಂಗ್ರೆಸ್ ಸರ್ಕಾರದ ಟೀಕೆಗಳಿಗೆ ಉತ್ತರ: ಹೆಚ್.ಡಿ. ಕುಮಾರಸ್ವಾಮಿ

ಕೇಂದ್ರ ಬಜೆಟ್.. ಕಾಂಗ್ರೆಸ್ ಸರ್ಕಾರದ ಟೀಕೆಗಳಿಗೆ ಉತ್ತರ: ಹೆಚ್.ಡಿ. ಕುಮಾರಸ್ವಾಮಿ

ಕೇಂದ್ರದ ಹಣಕಾಸು ಖಾತೆ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ 2026-27ನೇ ಸಾಲಿನ ಆಯವ್ಯಯದ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರ ಮಾಡುತ್ತಿರುವ ಟೀಕೆಗಳಿಗೆ ಉತ್ತರ ಕೊಡಲಾಗಿದೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು

[ccc_my_favorite_select_button post_id="119030"]
UGC ನಿಯಮಾವಳಿಗೆ ಸುಪ್ರೀಂ ತಡೆ.. ಕೇಂದ್ರ ಸರ್ಕಾರಕ್ಕೆ ನೋಟಿಸ್

UGC ನಿಯಮಾವಳಿಗೆ ಸುಪ್ರೀಂ ತಡೆ.. ಕೇಂದ್ರ ಸರ್ಕಾರಕ್ಕೆ ನೋಟಿಸ್

ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ತಾರತಮ್ಯವನ್ನು ತಡೆಗಟ್ಟಲು ವಿಶ್ವವಿದ್ಯಾಲಯ ಅನುದಾನ ಆಯೋಗ (UGC) ಇತ್ತೀಚೆಗೆ ಸೂಚಿಸಿದ ನಿಯಮಗಳನ್ನು ಸ್ಥಗಿತಗೊಳಿಸುವಂತೆ ಸುಪ್ರೀಂ ಕೋರ್ಟ್ ಗುರುವಾರ ಆದೇಶಿಸಿದ್ದು, ಕೇಂದ್ರ ಸರ್ಕಾರಕ್ಕೆ ನೋಟೀಸ್ ನೀಡಿದೆ.

[ccc_my_favorite_select_button post_id="118953"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ದೊಡ್ಡಬಳ್ಳಾಪುರದಲ್ಲಿ ಜಿಲ್ಲಾ ಕ್ರೀಡಾಂಗಣ.. 25 ಕೋಟಿ ರೂ. ಮಂಜೂರು: ಕೆ.ಹೆಚ್.ಮುನಿಯಪ್ಪ

ದೊಡ್ಡಬಳ್ಳಾಪುರದಲ್ಲಿ ಜಿಲ್ಲಾ ಕ್ರೀಡಾಂಗಣ.. 25 ಕೋಟಿ ರೂ. ಮಂಜೂರು: ಕೆ.ಹೆಚ್.ಮುನಿಯಪ್ಪ

2025-26 ನೇ ಸಾಲಿನ ಬೆಂಗಳೂರು ಗ್ರಾಮಾಂತರ ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳ ಕಾರ್ಯಕ್ರಮವನ್ನು ಉದ್ಘಾಟಿಸಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಹೆಚ್.ಮುನಿಯಪ್ಪ (K.H. Muniyappa) ಮಾತನಾಡಿದರು.

[ccc_my_favorite_select_button post_id="118983"]
ಭೀಕರ ಜೋಡಿ ಕೊಲೆ ಪ್ರಕರಣ: ದಂಡುಪಾಳ್ಯ ಗ್ಯಾಂಗ್‌ನ ಮತ್ತೊಬ್ಬನ ಬಂಧನ.!

ಭೀಕರ ಜೋಡಿ ಕೊಲೆ ಪ್ರಕರಣ: ದಂಡುಪಾಳ್ಯ ಗ್ಯಾಂಗ್‌ನ ಮತ್ತೊಬ್ಬನ ಬಂಧನ.!

ಭೀಕರ ಜೋಡಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ದಂಡುಪಾಳ್ಯ ಗ್ಯಾಂಗ್‌ನ (Dandupalya gang) ಚಿಕ್ಕ ಹನುಮಂತಪ್ಪ (ಅಲಿಯಾಸ್ ಕೆ.ಕೃಷ್ಣಪ್ಪ) ಎಂಬಾತನನ್ನು ಆಂಧ್ರಪ್ರದೇಶದ ಮದನಪಳ್ಳೆ ಗ್ರಾಮದಲ್ಲಿ ಬಂಧಿಸಲಾಗಿದೆ.

[ccc_my_favorite_select_button post_id="118778"]
ದೊಡ್ಡಬಳ್ಳಾಪುರ: ಗೂಡ್ಸ್ ವಾಹನ ಡಿಕ್ಕಿ.. ವೃದ್ಧನಿಗೆ ಗಂಭೀರ ಗಾಯ

ದೊಡ್ಡಬಳ್ಳಾಪುರ: ಗೂಡ್ಸ್ ವಾಹನ ಡಿಕ್ಕಿ.. ವೃದ್ಧನಿಗೆ ಗಂಭೀರ ಗಾಯ

ಪೆಟ್ಟಿ ಅಂಗಡಿ ಬಳಿ ಕುಳಿತಿದ್ದ ವೃದ್ಧನಿಗೆ ನಿಯಂತ್ರಣ ತಪ್ಪಿದ ಗೂಡ್ಸ್ ವಾಹನ ಡಿಕ್ಕಿ ಹೊಡೆದ ಪರಿಣಾಮ (Accident) ವೃದ್ಧ ತೀವ್ರವಾಗಿ ಗಾಯಗೊಂಡಿರುವ ಘಟನೆ ತಾಲೂಕಿ‌ನ ****** ಇಂದು ಮಧ್ಯಾಹ್ನ ನಡೆದಿದೆ

[ccc_my_favorite_select_button post_id="119094"]

ಆರೋಗ್ಯ

ಸಿನಿಮಾ

2020 ಹಾಗೂ 2021 ರ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಪ್ರಕಟ

2020 ಹಾಗೂ 2021 ರ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಪ್ರಕಟ

ಕರ್ನಾಟಕ ಸರ್ಕಾರವು ಚಲನಚಿತ್ರ ರಂಗದಲ್ಲಿನ ಜೀವಮಾನ ಸಾಧನೆಗಾಗಿ ನೀಡುವ ಡಾ.ರಾಜಕುಮಾರ್, ಪುಟ್ಟಣ್ಣ ಕಣಗಾಲ್ ಹಾಗೂ ಡಾ.ವಿಷ್ಣುವರ್ಧನ್ ಪ್ರಶಸ್ತಿಗಳನ್ನು ಪ್ರಕಟಿಸಿದೆ (State Film Awards).

[ccc_my_favorite_select_button post_id="118307"]
error: Content is protected !!