ನವದೆಹಲಿ; ಅಕ್ರಮ ಗಣಿಗಾರಿಕೆ ಆರೋಪದಡಿಯಲ್ಲಿ ಗಾಲಿ ಜನಾರ್ದನ ರೆಡ್ಡಿ ಅವರಿಗೆ ವಿಧಿಸಲಾಗಿದ್ದ ಬಳ್ಳಾರಿ ಪ್ರವೇಶ ನಿರ್ಬಂಧವನ್ನು ಸುಪ್ರೀಂಕೋರ್ಟ್ನ ದ್ವಿ ಸದಸ್ಯ ಪೀಠ ತೆರವು ಮಾಡಿದೆ ಎಂದು ವರದಿಯಾಗಿದೆ.
ಸುಮಾರು 13 ವರ್ಷಗಳ ಸುದೀರ್ಘ ಹೋರಾಟದ ಬಳಿಕ ರೆಡ್ಡಿ ಅವರಿಗೆ ಬಳ್ಳಾರಿ ಪ್ರವೇಶಕ್ಕೆ ಸುಪ್ರೀಂಕೋರ್ಟ್ ಅವಕಾಶ ಕಲ್ಪಿಸಿದ್ದು, ಬಳ್ಳಾರಿಗೆ ತೆರಳಲು ಪೂರ್ವಾನುಮತಿ ಅಗತ್ಯ ಇಲ್ಲವೆಂದು ತೀರ್ಪು ನೀಡಿರುವುದರಿಂದ ಬಿಗ್ ರಿಲೀಫ್ ಸಿಕ್ಕಂತಾಗಿದೆ.
2011ರ ಸೆಪ್ಟೆಂಬರ್ 05 ರಂದು ಅಕ್ರಮ ಗಣಿಗಾರಿಕೆ ಆರೋಪದ ಮೇರೆಗೆ ಜನಾರ್ದನ ರೆಡ್ಡಿ ಅವರನ್ನು ಬಂಧಿಸಿದ್ದಲ್ಲದೆ, ಬಳ್ಳಾರಿ, ಕರ್ನೂಲ್ ಹಾಗೂ ಅನಂತಪುರಕ್ಕೆ ತೆರಳದಂತೆ ನಿರ್ಬಂಧ ಹೇರಲಾಗಿತ್ತು.
ಇಂದು ನಡೆದ ವಿಚಾರಣೆಯಲ್ಲಿ ಸುಮಾರು 13 ವರ್ಷಗಳ ಬಳಿಕ ಬಳ್ಳಾರಿಗೆ ತೆರಳಲು ಜನಾರ್ದನ ರೆಡ್ಡಿ ಅವರಿಗೆ ಅವಕಾಶ ದೊರೆತಂತಾಗಿದ್ದು, ಬಳ್ಳಾರಿಯಲ್ಲಿಯೇ ವಾಸ್ತವ್ಯ ಹೂಡಿ, ರಾಜಕಾರಣವನ್ನು ನಡೆಸಬಹುದು ಎನ್ನಲಾಗುತ್ತಿದೆ.