ಬೆಂಗಳೂರು: ವೈಟ್ ಫೀಲ್ಡ್ ಬಳಿ ಬಿಎಂಟಿಸಿ ಬಸ್ ನಿರ್ವಾಹಕನಿಗೆ ಚಾಕು ಇರಿತ ಘಟನೆಗೆ ಸಂಬಂಧಪಟ್ಟಂತೆ ಇದೀಗ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ವೈಟ್ ಫೀಲ್ಡ್ ಸಮೀಪದ ಐಟಿಪಿಎಲ್ ಬಸ್ ಸ್ಟಾಪ್ ನಲ್ಲಿ ಡಿಪೋ ಬಸ್ ನ ನಿರ್ವಾಹಕನಿಗೆ ಎರಡೂರು ಬಾರಿ ಚಾಕು ಇರಿದಿದ್ದಲ್ಲದೆ, ಬಸ್ ನಲ್ಲಿದ್ದ ಸುತ್ತಿಗೆಯಿಂದ ಬಸ್ ಗಾಜುಗಳನ್ನು ಪುಡಿ ಮಾಡಿ,ಬಸ್ ಡೋರ್ ಅನ್ನು ಕಾಲಿನಿಂದ ಗುದ್ದಿ ಹುಚ್ಚನಂತೆ ವರ್ತಿಸಿದ್ದಾನೆ.
ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಇತ್ತ ನಿರ್ವಾಹಕ ಯೋಗೇಶ್ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆಂದು ವರದಿಯಾಗಿದೆ.
Harsh Sinha with knife and hammer in hand trying to escape from the Bus after stabbing a conductor.
— 👑Che_ಕೃಷ್ಣ🇮🇳💛❤️ (@ChekrishnaCk) October 2, 2024
This should be termed as t€rro!st attack.#Bengaluru pic.twitter.com/RRyrMJvP3A
ಈ ಕುರಿತು ಆಕ್ರೋಶ್ ವ್ಯಕ್ತಪಡಿಸಿರುವ ಹೋರಾಟಗಾರ ರೂಪೇಶ್ ರಾಜಣ್ಣ, ಹರ್ಷ ಸಿನ್ಹ ಎಂಬ ಜಾರ್ಖಂಡ್ ಮೂಲದ
ಈ ವ್ಯಕ್ತಿ ಬಿಎಂಟಿಸಿ ಕಂಡಕ್ಟರ್ ಅವರಿಗೆ ಚಾಕುವಿನಲ್ಲಿ ಚುಚ್ಚಿದ್ದಾನೆ. ಕಂಡಕ್ಟರ್ ವೈದೇಹಿ ಆಸ್ಪತ್ರೆಯಲ್ಲಿದ್ದಾರೆ.
@BMTC_BENGALURU ನಮ್ಮ ಕನ್ನಡಿಗ ಡ್ರೈವರ್ ವಿಚಾರ ಬಂದಾಗ ದಿಡೀರ್ ಕ್ರಮ ತೆಗೆದುಕೊಳ್ಳೋರು ಇದು ಕಂಡಿಲ್ಲವೇ?
ಕನ್ನಡಿಗರ ವಿಚಾರ ಅಂದಾಗ ಬಾಯಿ ಬಡಿಯೋ ಮೂರ್ಖರಿಗೆ ಇದು ಕಾಣುತ್ತಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ಹರ್ಷ ಸಿನ್ಹ ಎಂಬ ಜಾರ್ಖಂಡ್ ಮೂಲದ
— ರೂಪೇಶ್ ರಾಜಣ್ಣ(RUPESH RAJANNA) (@rajanna_rupesh) October 2, 2024
ಈ ವ್ಯಕ್ತಿ ಬಿಎಂಟಿಸಿ ಕಂಡಕ್ಟರ್ ಅವರಿಗೆ ಚಾಕುವಿನಲ್ಲಿ ಚುಚ್ಚಿದ್ದಾನೆ.
ಕಂಡಕ್ಟರ್ ವೈದೇಹಿ ಆಸ್ಪತ್ರೆಯಲ್ಲಿದ್ದಾರೆ.@BMTC_BENGALURU ನಮ್ಮ ಕನ್ನಡಿಗ ಡ್ರೈವರ್ ವಿಚಾರ ಬಂದಾಗ ದಿಡೀರ್ ಕ್ರಮ ತೆಗೆದುಕೊಳ್ಳೋರು ಇದು ಕಂಡಿಲ್ಲವೇ?
ಕನ್ನಡಿಗರ ವಿಚಾರ ಅಂದಾಗ ಬಾಯಿ ಬಡಿಯೋ ಮೂರ್ಖರಿಗೆ ಇದು ಕಾಣುತ್ತಿಲ್ಲವೇ? pic.twitter.com/VGfBVqUcRi