ಹರಿಯಾಣಾ: ಒಲಿಂಪಿಕ್ಸ್ ನಲ್ಲಿ ಪದಕ ವಂಚಿತರಾಗಿದ್ದ ಖ್ಯಾತ ಕುಸ್ತಿ ಪಟು ವಿನೇಶ್ ಪೋಗಟ್ (Vinesh Phogat) ಹರಿಯಾಣಾ ವಿಧಾನಸಭೆ ಚುನಾವಣೆಯಲ್ಲಿ ಗೆಲುವನ್ನು ಸಾಧಿಸಿದ್ದು, ಒಲಿಂಪಿಕ್ ಸೋಲಿನ ಕಹಿಯನ್ನು ಮರೆಯುವಂತಾಗಿದೆ.
ಬೆಳಗಿನಿಂದಲೂ ಹಾವು ಏಣಿ ಆಟವಾಡುತ್ತಿದ್ದ ಅದೃಷ್ಟ ಲಕ್ಷ್ಮಿ ಕೊನೆಗೂ ವಿನೇಶ್ ಫೋಗಟ್ ಪರವಾಗಿ ಒಲಿದಿದ್ದು, ವಿನೇಶ್ ಗೆಲುವಿನ ನಗೆ ಬೀರಿದ್ದಾರೆ.
ಬೆಳಗಿನ ಆರಂಭಿಕ ಟ್ರೆಂಡ್ ನಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿತ್ತು. ಕೂಡಲೇ ದೆಹಲಿಯ ಕಾಂಗ್ರೆಸ್ ಕಚೇರಿಯಲ್ಲಿ ಜಿಲೇಬಿ ಹಂಚಲು ಪ್ರಾರಂಭಿಸಿದ್ದರೆ, ಹರಿಯಾಣಾ ಕಾಂಗ್ರೆಸ್ ಮುಖಂಡರು ಪಟಾಕಿ ಹೊಡೆಯುತ್ತಾ ವಿಜಯೋತ್ಸವದ ಮೆರವಣಿಗೆ ಪ್ರಾರಂಭಿಸಿದ್ದರು.
ಆದರೆ ಈ ಉತ್ಸಾಹ ತುಂಬಾ ಹೊತ್ತು ಉಳಿಯಲಿಲ್ಲ. ಮಧ್ಯಾಹ್ನದ ಹೊತ್ತಿಗೆ ಇಡೀ ಟ್ರೆಂಡ್ ಬದಲಾಗಿದ್ದಷ್ಟೇ ಅಲ್ಲದೇ ಬಿಜೆಪಿ ಹಾಟ್ರಿಕ್ ವಿಜಯ ಸಾಧಿಸಿ ಸರ್ಕಾರ ರಚಿಸುವತ್ತ ಸಾಗಿದೆ.
ಜುಲಾನ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಕುಸ್ತಿಪಟು ವಿನೇಶ್ ಫೋಗಟ್ (Vinesh Phogat) ಭರ್ಜರಿ ಗೆಲುವು ಸಾಧಿಸಿದ್ದಾರೆ.
ಚುನಾವಣೆ ಆಯೋಗದ ಪ್ರಕಾರ, ಪ್ರಕಾರ 11 ಸುತ್ತಿನ ಮತ ಎಣಿಕೆಯ ಬಳಿಕ ಜೂಲಾನಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನೇಶ್ ಫೋಗಟ್ ಕ್ಷೇತ್ರದಿಂದ 50,617 ಮತಗಳನ್ನಯ ಪಡೆಯುವ ಮೂಲಕ 6,050 ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದಾರೆ.