ಹರಿತಲೇಖನಿ ದಿನಕ್ಕೊಂದು ಕಥೆ: ಕಳ್ಳನ ನೀತಿ

ಕಳ್ಳನೊಬ್ಬ ಮಧ್ಯ ರಾತ್ರಿಯಲ್ಲಿ ಶ್ರೀಮಂತನೋರ್ವನ ಮನೆಗೆ ಕದಿಯಲು ಹೋದ. ಮನೆಯ ಎಲ್ಲರೂ ಗಾಢ ನಿದ್ರೆಯಲ್ಲಿದ್ದದನ್ನು ತಾನು ತಂದಿದ್ದ ಬ್ಯಾಟರಿಯ ಬೆಳಕಿನಿಂದ ಗಮನಿಸಿದ. ಅದೇ ಕೋಣೆಯಲ್ಲಿ ತಿಜೋರಿಯ ಬೀಗದ ಕೈ ಗೋಡೆಗೆ ನೇತು ಹಾಕಿರುವುದನ್ನು ಆತ ಕಂಡ. ಇದರಿಂದ ತನ್ನ ಕೆಲಸ ಇನ್ನಷ್ಟು ಸುಲಭವಾಯಿತೆಂದು ಆತ ಅಂದುಕೊಂಡು, ತಡ ಮಾಡದೆ ತಿಜೋರಿಯ ಬೀಗ ತೆಗೆದು ನೋಡಿದ. ಅಲ್ಲಿ ಹಣ, ಒಡವೆಗಳು ಸೇರಿದಂತೆ ಬಹಳಷ್ಟು ಬಂಗಾರದ ನಾಣ್ಯಗಳು ಅವನ ಕಣ್ಣಿಗೆ ಬಿದ್ದವು.

ಸಂತೋಷಗೊಂಡ ಕಳ್ಳ ಸದ್ದು ಮಾಡದೆ ತಾನು ತಂದಿದ್ದ ಚೀಲದಲ್ಲಿ ಆ ದ್ರವ್ಯಗಳನ್ನು ತುಂಬಿಕೊಳ್ಳುತ್ತಿರುವಾಗ ಅವನ ಒಂದು ಬೆರಳಿನ ಉಗುರು ಮುರಿದು ನೆಲಕ್ಕೆ ಬಿತ್ತು. ಕಳ್ಳ ಕದಿಯುವ ಕೆಲಸ ಬಿಟ್ಟು ಆ ಉಗುರನ್ನು ಹುಡುಕಲು ಮುಂದಾದ. ಸರಿಯಾದ ಬೆಳಕಿಲ್ಲದ ಆ ಕೋಣೆಯಲ್ಲಿ ಬ್ಯಾಟರಿಯ ಬೆಳಕಿನ ಸಹಾಯದಿಂದ ಎಷ್ಟು ಹುಡುಕಿದರೂ ಆ ಉಗುರು ಸಿಗಲಿಲ್ಲ. ಮುಂಜಾನೆಯ ಬೆಳಕು ಹರಿಯಿತು. ಆಗಲೂ ಕಳ್ಳನಿಗೆ ಉಗುರಿನ ಪತ್ತೆ ಆಗಲಿಲ್ಲ.

ಮನೆ ಯಜಮಾನ ನಿದ್ರೆಯಿಂದ ಎಚ್ಚರಗೊಂಡು ನೋಡಲು ಮನೆಯಲ್ಲಿ ಯಾರೋ ಅಪರಿಚಿತ ವ್ಯಕ್ತಿಯೊಬ್ಬ ಓಡಾಡುತ್ತಿದ್ದಾನೆ. ತಿಜೋರಿಯ ಬಾಗಿಲು ತೆರೆದು ಚಿನ್ನದ ಒಡವೆ, ನಾಣ್ಯಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಗಾಬರಿಗೊಂಡ ಶ್ರೀಮಂತ ಕಳ್ಳನ ಹಿಡಿದು ವಿಚಾರಿಸಿದ.

ಭಯಭೀತನಾದ ಕಳ್ಳ ‘ಸ್ವಾಮಿ, ಈ ದಿನ ನಿಮ್ಮ ಮನೆಗೆ ಕನ್ನ ಹಾಕಲು ಬಂದೆ. ಅಕಸ್ಮಾತಾಗಿ ನನ್ನ ಒಂದು ಉಗುರು ಮುರಿದು ಮನೆಯೊಳಗೆ ಬಿತ್ತು. ಎಷ್ಟು ಹುಡುಕಿದರೂ ಸಿಗಲಿಲ್ಲ’ ಎಂದ ಅವನ ವರ್ತನೆ ಅರ್ಥವಾಗದೇ ಶ್ರೀಮಂತ ‘ಅಲ್ಲಾ, ಉಗುರು ಮುರಿದು ಹೋದರೆ ನಿನಗೇನಾಯ್ತು? ಒಡವೆಗಳನ್ನು ತೆಗೆದುಕೊಂಡು ನೀನು ಹೋಗಬಹುದಾಗಿತ್ತಲ್ಲ’ ಎಂದು ಸಮಾಧಾನದಿಂದ ಕೇಳಿದ.

ಅದಕ್ಕೆ ಕಳ್ಳ ‘ಛೆ, ಛೇ…ಎಲ್ಲಾದರೂ ಉಂಟಾ ಸ್ವಾಮಿ? ಉಗುರನ್ನು ಮನೆಯೊಳಗೆ ಬಿಟ್ಟರೆ ದರಿದ್ರ ನಿಮಗೆ’ ಅಂಥ ಮತ್ತೆ ವಿಚಿತ್ರವಾಗಿ ಉತ್ತರಿಸಿದ. ತಾಳ್ಮೆ ಕಳೆದುಕೊಳ್ಳದ ಶ್ರೀಮಂತ ಕುತೂಹಲದಿಂದ ‘ನಾನು ದರಿದ್ರನಾದರೆ ನಿನಗೇನು? ನಿನ್ನ ಪಾಡು ನಿನ್ನದಲ್ಲ’ ಅಂಥ ಮರು ಉತ್ತರ ನೀಡಿದ.

ಆಗ ಕಳ್ಳ ‘ಸ್ವಾಮಿ, ತಾವು ಶ್ರೀಮಂತಿಕೆಯಿಂದ ಇದ್ದ ಕಾರಣಕ್ಕೆ ನಾನು ಇಲ್ಲಿಗೆ ಕದಿಯಲು ಬಂದೆ. ನೀವು ದರಿದ್ರರಾಗಿಬಿಟ್ಟರೆ ನನ್ನಂಥ ಕಳ್ಳರ ಗತಿ ಏನು? ಆದ್ದರಿಂದ ನೀವು ಚೆನ್ನಾಗಿರಬೇಕು. ಕೊಡುವವನು ಯಾವಾಗಲೂ ಎತ್ತರದ ಸ್ಥಾನದಲ್ಲೇ ಇರಬೇಕು’ ಎಂದು ನುಡಿದ.

ತನಗೆ ಆಪತ್ತು ಒದಗುವುದು ಎಂದು ತಿಳಿದರೂ ತನ್ನ ನೀತಿಯನ್ನು ಬಿಡದ ಕಳ್ಳನನ್ನು ನೋಡಿ ಶ್ರೀಮಂತನಿಗೆ ಅತೀವ ಆನಂದವಾಯಿತು. ಬಳಿಕ ಆತ ಅವನಿಗೆ ಬೇಕಾಗುವಷ್ಟು ಒಡವೆ, ನಾಣ್ಯಗಳನ್ನು ನೀಡಿ ಸಂತೋಷದಿಂದ ಕಳುಹಿಸಿದ. ನಮ್ಮ ನಡವಳಿಕೆಯಿಂದ ಇನ್ನೊಬ್ಬರ ಬದುಕು ಹಸನಾಗದಿದ್ದರೂ ಪರವಾಗಿಲ್ಲ. ವಿನಾಶವಾಗಬಾರದು ಎಂಬುದನ್ನು ಈ ಕತೆಯಿಂದ ತಿಳಿದುಕೊಳ್ಳಬಹುದು.

ಕೃಪೆ: ಸಿ.ರವೀಂದ್ರ ಸಿಂಗ್‌ (ಸಾಮಾಜಿಕ ಜಾಲತಾಣ)

ರಾಜಕೀಯ

ಬೆಂಗಳೂರಿನಲ್ಲಿ ಶಾಶ್ವತ ಹೆಜ್ಜೆಗುರುತು ಬಿಟ್ಟು ಹೋಗುವ ಆಸೆ ನನ್ನದು : ಡಿಸಿಎಂ ಡಿ.ಕೆ. ಶಿವಕುಮಾರ್

ಬೆಂಗಳೂರಿನಲ್ಲಿ ಶಾಶ್ವತ ಹೆಜ್ಜೆಗುರುತು ಬಿಟ್ಟು ಹೋಗುವ ಆಸೆ ನನ್ನದು : ಡಿಸಿಎಂ ಡಿ.ಕೆ.

ಬೆಂಗಳೂರಿನಲ್ಲಿ ಬದಲಾವಣೆ ತರಬೇಕು, ನನ್ನ ಕೆಲಸಗಳ ಮೂಲಕ ನನ್ನ ಹೆಸರು ಶಾಶ್ವತವಾಗಿ ಉಳಿಯಬೇಕು, ಶಾಶ್ವತ ಹೆಜ್ಜೆ ಗುರುತು ಬಿಟ್ಟು ಹೋಗುವ ಆಸೆ ನನಗೆ ಇದೆ: D.K. Shivakumar

[ccc_my_favorite_select_button post_id="117318"]
ರಾಜ್ಯದಲ್ಲಿ 2,84,881 ಹುದ್ದೆಗಳು ಖಾಲಿ: ನಿರುದ್ಯೋಗಿಗಳ ಅಳಲು ಕೇಳುವವರು ಯಾರು..?

ರಾಜ್ಯದಲ್ಲಿ 2,84,881 ಹುದ್ದೆಗಳು ಖಾಲಿ: ನಿರುದ್ಯೋಗಿಗಳ ಅಳಲು ಕೇಳುವವರು ಯಾರು..?

ರಾಜ್ಯದಲ್ಲಿ ಸರ್ಕಾರದಲ್ಲಿ ವಿವಿಧ ಇಲಾಖೆಗಳೂ ಸೇರಿದಂತೆ ರಾಜ್ಯದಲ್ಲಿ ಬರೋಬ್ಬರಿ 2,84,881 ಹುದ್ದೆಗಳು ಖಾಲಿಯಿರುವ (Bacant Posts) ಮಾಹಿತಿ ಬಯಲಾಗಿದೆ.

[ccc_my_favorite_select_button post_id="117270"]
ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಸಂಸದ ಡಾ.ಕೆ.ಸುಧಾಕರ್‌ ಭಾಗಿ

ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಸಂಸದ ಡಾ.ಕೆ.ಸುಧಾಕರ್‌ ಭಾಗಿ

ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ಅವರೊಂದಿಗೆ, ಸಂಘಟನೆಯ ಟ್ರಸ್ಟಿಯೂ ಆಗಿರುವ ಸಂಸದ ಡಾ.ಕೆ.ಸುಧಾಕರ್‌ (Dr.K.Sudhakar)

[ccc_my_favorite_select_button post_id="113863"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಾವಳಿಗೆ ಅನುಮತಿ; ಸಚಿವ ಸಂಪುಟ ಸಭೆಯಲ್ಲಿ  ತೀರ್ಮಾನ: ಡಿಸಿಎಂ ಡಿ.ಕೆ.ಶಿವಕುಮಾರ್

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಾವಳಿಗೆ ಅನುಮತಿ; ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ: ಡಿಸಿಎಂ

"ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಗಳಿಗೆ ಅನುಮತಿ ನೀಡುವ ಬಗ್ಗೆ ಗುರುವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಿ ತೀರ್ಮಾನ ಮಾಡಲಾಗುವುದು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ (D.K. Shivakumar) ತಿಳಿಸಿದರು.

[ccc_my_favorite_select_button post_id="117214"]
ಫೇಸ್‌ಬುಕ್‌ ಪರಿಚಯ: ಮಹಿಳೆಗೆ ಹಣ ನೀಡಿ ಪೆಟ್ಟು ತಿಂದ ಯುವಕ

ಫೇಸ್‌ಬುಕ್‌ ಪರಿಚಯ: ಮಹಿಳೆಗೆ ಹಣ ನೀಡಿ ಪೆಟ್ಟು ತಿಂದ ಯುವಕ

ಫೇಸ್‌ಬುಕ್‌ನಲ್ಲಿ (Facebook) ಪರಿಚಯವಾದ ಮಹಿಳೆ ನೋಡಲು ಬೆಂಗಳೂರಿನಿಂದ ಮಡಿಕೇರಿಗೆ ಬಂದಿದ್ದ ಯುವಕನ ಮೇಲೆ ಮೂವರು ಯುವಕರು ಹಲ್ಲೆ ನಡೆಸಿರುವ ಘಟನೆ ಶುಕ್ರವಾರ ನಡೆದಿದೆ.

[ccc_my_favorite_select_button post_id="117343"]
ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ.. 3 ಮಂದಿ ದುರ್ಮರಣ

ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ.. 3 ಮಂದಿ ದುರ್ಮರಣ

ಕಾರು ಮತ್ತು ಕೆಎಸ್ಆರ್ಟಿಸಿ ಬಸ್ ನಡುವೆ ಭವಿಸಿದ ಭೀಕರ ರಸ್ತೆ ಅಫಘಾತದಲ್ಲಿ (Accident) ಮೂವರು ಸಾವನಪ್ಪಿರುವ ಘಟನೆ *** ಹೊರವಲಯದ *** ಗೇಟ್ ಬಳಿ ಸಂಭವಿಸಿದೆ.

[ccc_my_favorite_select_button post_id="117239"]

ಆರೋಗ್ಯ

ಸಿನಿಮಾ

‘ದಿ ಡೆವಿಲ್’ ರಿಲೀಸ್; ದೊಡ್ಡಬಳ್ಳಾಪುರದಲ್ಲಿ ಮುಗಿಲು ಮುಟ್ಟಿದ ದರ್ಶನ್ ಅಭಿಮಾನಿಗಳ ಸಂಭ್ರಮ.!| Video ನೋಡಿ

‘ದಿ ಡೆವಿಲ್’ ರಿಲೀಸ್; ದೊಡ್ಡಬಳ್ಳಾಪುರದಲ್ಲಿ ಮುಗಿಲು ಮುಟ್ಟಿದ ದರ್ಶನ್ ಅಭಿಮಾನಿಗಳ ಸಂಭ್ರಮ.!| Video

ಅಭಿಮಾನಿಗಳ ದಾಸ, ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ (Darshan) ಅಭಿನಯದ ಬಹುನಿರೀಕ್ಷಿತ ಚಿತ್ರ 'ದಿ ಡೆವಿಲ್' ಇಂದು (ಡಿ.11) ರಾಜ್ಯಾದ್ಯಂತ ಅದ್ಧೂರಿಯಾಗಿ ರಿಲೀಸ್ ಆಗಿದ್ದು, ಯಶಸ್ವಿ ಪ್ರದರ್ಶನ ಕಾಣುತ್ತಿದೆ.

[ccc_my_favorite_select_button post_id="117242"]