ಜವಾಹರ ನವೋದಯ ವಿದ್ಯಾಲಯದಲ್ಲಿ ಕನ್ನಡ ಸಪ್ತಾಹ

ದೊಡ್ಡಬಳ್ಳಾಪುರ: ಕನ್ನಡ ನಾಡಿನ ಇತಿಹಾಸ, ಭಾಷೆ, ಕಲೆ ಮತ್ತು ಸಂಸ್ಕೃತಿಗೆ ಭವ್ಯ ಪರಂಪರೆ ಇದೆ. ಕನ್ನಡ ನಾಡಿನ ಪರಂಪರೆಯ ಅನನ್ಯತೆಯನ್ನು ಉಳಿಸಿ ಬೆಳಸುವ ಜವಾಬ್ದಾರಿ ನಮ್ಮೆಲ್ಲರ ಕರ್ತವ್ಯ ಆಗಬೇಕಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಸರ್ವೆಯಕ್ಷಣಾಧಿಕಾರಿ ಕೆ.ಎ‌.ಶಾಲಿನಿ ತಿಳಿಸಿದರು.

ದೊಡ್ಡಬಳ್ಳಾಪುರ ತಾಲ್ಲೂಕಿನ ಜವಾಹರ ನವೋದಯ ವಿದ್ಯಾಲಯದಲ್ಲಿ ಕನ್ನಡ ಸಪ್ತಾಹ ಉದ್ಘಾಟಿಸಿ ಮಾತನಾಡಿದರು.

ಪ್ರತಿಯೊಬ್ಬ ಕನ್ನಡಿಗರಲ್ಲೂ ಕನ್ನಡ ನಾಡು, ನುಡಿ ವಿಚಾರದಲ್ಲಿ ಅಭಿಮಾನ ಇರಬೇಕು. ಕನ್ನಡ ಭಾಷೆ ಎಲ್ಲಾ ವಲಯಗಳಲ್ಲಿ ಬಳಕೆಯಾಗಬೇಕು. ಕನ್ನಡ ಭಾಷೆ,  ಸಾಹಿತ್ಯ ಮತ್ತು ಸಾಂಸ್ಕೃತಿಕ  ಚಟುವಟಿಕೆಗಳು ನಿರಂತರವಾಗಿ ನಡೆಯಬೇಕು. ಆಧುನಿಕ ತಂತ್ರಜ್ಞಾನ ಮತ್ತು ಸಂವಹನ ಮಾಧ್ಯಮ ಕ್ಷೇತ್ರದಲ್ಲೂ ಕನ್ನಡ ಸಮರ್ಪಕವಾಗಿ ಬಳಕೆಯಾಗಬೇಕು ಎಂದರು.

ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ಮತ್ತು ಪರಂಪರೆಯು ವೈವಿಧ್ಯಮಯಲ್ಲೂ ಏಕತೆಗೆ ಹೆಸರಾಗಿದೆ. ಕರ್ನಾಟಕದ ಕಲೆ, ಸಾಹಿತ್ಯ, ಸಂಗೀತ, ಶಿಲ್ಪ, ನೃತ್ಯ ಮುಂತಾದ ಸಾಂಸ್ಕೃತಿಕ ಕಲಾ ಪ್ರಕಾರಗಳು ಕನ್ನಡಿಗರ ಗೌರವವನ್ನು ಎಲ್ಲೆಡೆ ಹರಡಿವೆ. ಕನ್ನಡ ನಾಡು ಸಮನ್ವಯ ಮತ್ತು ಸಾಮರಸ್ಯದ  ನಾಡು ಎಂದು ಕರೆಯುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು.

ಜವಾಹರ ವಿದ್ಯಾಲಯದ ಪ್ರಾಂಶುಪಾಲ ಆರ್.ಚಕ್ರವರ್ತಿ ಮಾತನಾಡಿ, ಕನ್ನಡ ಕವಿಗಳು ಮಾನವೀಯ ಮೌಲ್ಯಗಳ ಮಹತ್ವವನ್ನು ಸಾರಿದ್ದಾರೆ. ಜನಪದರು, ವಚನಕಾರರು, ಹರಿದಾಸರು, ಅನುಭಾವಿ ಸಂತರು ಉದಾತ್ತ ವಿಚಾರಗಳನ್ನು ಜನರಿಗೆ ಸರಳ ಭಾಷೆಯಲ್ಲಿ ತಿಳಿಸಿದ್ದಾರೆ.

ಮಾನವೀಯ ಮೌಲ್ಯಗಳನ್ನು ಮತ್ತು ಉದಾತ್ತ ಚಿಂತನೆಗಳನ್ನು ಜನರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಸ್ವಾಸ್ಥ ಸಮಾಜ ನಿರ್ಮಿಸಬೇಕಾಗಿದೆ. ವಿಶ್ವ ಮಾನವ ಪ್ರಜ್ಞೆಯನ್ನು ಎಲ್ಲರೂ ರೂಢಿಸಿಕೊಳ್ಳಬೇಕಾಗಿದೆ ಎಂದರು.

ಕನ್ನಡ ಸಪ್ತಾಹದಲ್ಲಿ ಕನ್ನಡ ನಾಡು ಮತ್ತು ನುಡಿಯ ಮಹತ್ವವನ್ನು ಕುರಿತು ವಿದ್ಯಾರ್ಥಿ  ಅಭಿರಾಮ ಮಾತನಾಡಿದರು.

ಕಾರ್ಯಕ್ರಮದಲ್ಲಿ ಜವಾಹರ ನವೋದಯ ವಿದ್ಯಾಲಯ ಉಪಪ್ರಾಂಶುಪಾಲ ಜಯಕೃಷ್ಣನ್, ಕನ್ನಡ ಅಧ್ಯಾಪಕರುಗಳಾದ  ಜೆ.ಪಿ.ಉಪಾಧ್ಯೆ, ಈರಣ್ಣಸಬರದ  ಮತ್ತು  ವಿದ್ಯಾಲಯದ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ವಿದ್ಯಾರ್ಥಿಗಳಿಗೆ ರಸ ಪ್ರಶ್ನೆ,  ವಿದ್ಯಾರ್ಥಿಗಳಿಂದ ಕನ್ನಡ ಸಮೂಹಗೀತೆ,  ಜಾನಪದ ನೃತ್ಯ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ರಾಜಕೀಯ

ದೇಶದಲ್ಲಿ ಬೆಂಗಳೂರಿಗೆ ಸರಿಸಮನಾದ ನಗರ ಮತ್ತೊಂದಿಲ್ಲ: ನಾರಾ ಲೋಕೇಶ್‌ಗೆ ಡಿಸಿಎಂ ಡಿ.ಕೆ. ಶಿವಕುಮಾರ್ ತಿರುಗೇಟು

ದೇಶದಲ್ಲಿ ಬೆಂಗಳೂರಿಗೆ ಸರಿಸಮನಾದ ನಗರ ಮತ್ತೊಂದಿಲ್ಲ: ನಾರಾ ಲೋಕೇಶ್‌ಗೆ ಡಿಸಿಎಂ ಡಿ.ಕೆ. ಶಿವಕುಮಾರ್

“ಮೂಲಸೌಕರ್ಯ, ಮಾನವ ಸಂಪನ್ಮೂಲ, ನವೋದ್ಯಮ, ಅನ್ವೇಷಣೆ ವಿಚಾರದಲ್ಲಿ ದೇಶದಲ್ಲಿ ಬೆಂಗಳೂರಿಗೆ ಸರಿಸಮನಾದ ನಗರ ಮತ್ತೊಂದಿಲ್ಲ. ಬೇರೆಯವರು ತಮ್ಮನ್ನು ಮಾರ್ಕೆಟಿಂಗ್ ಮಾಡಿಕೊಳ್ಳಲು ಬೆಂಗಳೂರಿನ ಬಗ್ಗೆ ಮಾತನಾಡುತ್ತಾರೆ” ಎಂದು ಆಂಧ್ರ ಐಟಿ ಸಚಿವ ನಾರಾ ಲೋಕೇಶ್ (Nara

[ccc_my_favorite_select_button post_id="115011"]

ಬೆದರಿಕೆ ಕರೆ.. Video ಪೋಸ್ಟ್ ಮಾಡಿದ ಸಚಿವ

[ccc_my_favorite_select_button post_id="115009"]

300 ರೂ. ಊಟ ಕೊಟ್ಟು 300 ಕೋಟಿ

[ccc_my_favorite_select_button post_id="114973"]

Bihar Election; ಬಿಜೆಪಿ ಪಟ್ಟಿ ಬಿಡುಗಡೆ

[ccc_my_favorite_select_button post_id="114963"]
ಪ್ರಾಣಿ ಸಂಪತ್ತು ಕೊಲ್ಲುವವರ ವಿರುದ್ಧ ಕಠಿಣ ಕ್ರಮ ಶತಸಿದ್ಧ: Cm ಸಿದ್ದರಾಮಯ್ಯ ಎಚ್ಚರಿಕೆ

ಪ್ರಾಣಿ ಸಂಪತ್ತು ಕೊಲ್ಲುವವರ ವಿರುದ್ಧ ಕಠಿಣ ಕ್ರಮ ಶತಸಿದ್ಧ: Cm ಸಿದ್ದರಾಮಯ್ಯ ಎಚ್ಚರಿಕೆ

ಪ್ರಾಣಿ ಸಂಪತ್ತು ಇಲ್ಲದೆ ಅರಣ್ಯ ಸಂಪತ್ತಿಗೆ ಮೌಲ್ಯವೇ ಇಲ್ಲ. ಹೀಗಾಗಿ ಪ್ರಾಣಿ ಸಂಪತ್ತನ್ನು ಕೊಲ್ಲುವವರ ವಿರುದ್ಧ ಕಠಿಣ ಕ್ರಮ ಶತಸಿದ್ಧ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Cm Siddaramaiah) ಅವರು ಸ್ಪಷ್ಟ ಎಚ್ಚರಿಕೆ ನೀಡಿದರು.

[ccc_my_favorite_select_button post_id="114725"]
ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಸಂಸದ ಡಾ.ಕೆ.ಸುಧಾಕರ್‌ ಭಾಗಿ

ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಸಂಸದ ಡಾ.ಕೆ.ಸುಧಾಕರ್‌ ಭಾಗಿ

ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ಅವರೊಂದಿಗೆ, ಸಂಘಟನೆಯ ಟ್ರಸ್ಟಿಯೂ ಆಗಿರುವ ಸಂಸದ ಡಾ.ಕೆ.ಸುಧಾಕರ್‌ (Dr.K.Sudhakar)

[ccc_my_favorite_select_button post_id="113863"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ಯೋಗ ಚಾಂಪಿಯನ್‌ಶಿಪ್: ವಿ.ವರ ಪ್ರಸಾದ್‌ಗೆ ಚಿನ್ನದ ಪದಕ

ಯೋಗ ಚಾಂಪಿಯನ್‌ಶಿಪ್: ವಿ.ವರ ಪ್ರಸಾದ್‌ಗೆ ಚಿನ್ನದ ಪದಕ

ನಿಸರ್ಗ ಯೋಗ ಕೇಂದ್ರದ ಹಾಗೂ ರಾಜ್ಯ ಬಾಲಕರ ಯೋಗ ತಂಡದ ನಾಯಕ ವಿ.ವರ ಪ್ರಸಾದ್ (V. Vara Prasad) 50ನೇ ಗೋಲ್ಡನ್‌ ಜುಬ್ಲಿ ರಾಷ್ಟ್ರೀಯ ಯೋಗ ಚಾಂಪಿಯನ್‌ಶಿಪ್ (Yoga Championship) ನಲ್ಲಿ ಭಾಗವಹಿಸಿ ಚಿನ್ನದ

[ccc_my_favorite_select_button post_id="114944"]
ದೊಡ್ಡಬಳ್ಳಾಪುರ: ಅರಸಮ್ಮ ದೇವಾಲಯದಲ್ಲಿ ಕಳವು

ದೊಡ್ಡಬಳ್ಳಾಪುರ: ಅರಸಮ್ಮ ದೇವಾಲಯದಲ್ಲಿ ಕಳವು

ಅರಸಮ್ಮ ದೇವಾಲಯದ (Arasamma Temple) ಬಾಗಿಲಿನ ಬೀಗ ಹೊಡೆದು ಹುಂಡಿ ಹಾಗೂ ದೇವರ ಆಭರಣಗಳನ್ನು ಕಳವು ಮಾಡಿರುವ ಪ್ರಕರಣ ಭಾನುವಾರ ರಾತ್ರಿ ನಡೆದಿದೆ.

[ccc_my_favorite_select_button post_id="114950"]
ದೊಡ್ಡಬಳ್ಳಾಪುರದಲ್ಲಿ ಸತತ 3ನೇ ಅಪಘಾತ..! ಬೈಕ್ ಸವಾರನ ಸ್ಥಿತಿ ಗಂಭೀರ

ದೊಡ್ಡಬಳ್ಳಾಪುರದಲ್ಲಿ ಸತತ 3ನೇ ಅಪಘಾತ..! ಬೈಕ್ ಸವಾರನ ಸ್ಥಿತಿ ಗಂಭೀರ

ಮಂಗಳವಾರ ರಾತ್ರಿಯಿಂದ ಬುಧವಾರ ಬೆಳಗ್ಗೆ 9.15 ರ ವರೆಗೆ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಸತತ 3ನೇ ಅಪಘಾತ (Accident) ಪ್ರಕರಣ ವರದಿಯಾಗುತ್ತಿದೆ.

[ccc_my_favorite_select_button post_id="114999"]

ಆರೋಗ್ಯ

ಸಿನಿಮಾ

ದಿನ ಭವಿಷ್ಯ: ಈ ರಾಶಿಯವರಿಂದು ಅತಿಯಾದ ಒತ್ತಡಕ್ಕೆ ಸಿಲುಕದಿರಿ

ದಿನ ಭವಿಷ್ಯ: ಈ ರಾಶಿಯವರಿಂದು ಅತಿಯಾದ ಒತ್ತಡಕ್ಕೆ ಸಿಲುಕದಿರಿ

ರಾಹುಕಾಲ: 07:30AM ರಿಂದ 09:00AM, ಗುಳಿಕಕಾಲ: 01:30PM ರಿಂದ 03:00PM, ಯಮಗಂಡಕಾಲ: 10:30AM ರಿಂದ 12:00PM, Astrology

[ccc_my_favorite_select_button post_id="114397"]
error: Content is protected !!