ದೊಡ್ಡಬಳ್ಳಾಪುರ: ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶದಲ್ಲಿ ಸರ ಕಳ್ಳತನ ಹಾಗೂ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದ ನಟೋರಿಯಸ್ ಕಳ್ಳರನ್ನು ಇನ್ಸ್ಪೆಕ್ಟರ್ ಸಾಧಿಕ್ ಪಾಷಾ ನೇತೃತ್ವದ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.
80 ಗ್ರಾಂ ತೂಕದ ಮಾಂಗಲ್ಯ ಸರ
ಸೆಪ್ಟೆಂಬರ್ 19 ರಂದು ಬೆಳಗ್ಗಿನ ಜಾವ ದೊಡ್ಡಬಳ್ಳಾಪುರ ಗ್ರಾಮಾಂತರ ಗುಂಜೂರು ಗ್ರಾಮದ ರಸ್ತೆ ಬದಿ ವೃದ್ಧೆ ಶೈಲಜ ಎನ್ನುವವರು ವಾಯುವಿಹಾರಕ್ಕೆ ತೆರಳಿದ್ದ ಸಂದರ್ಭದಲ್ಲಿ ಶಿಪ್ಟ್ ಕಾರಿನಲ್ಲಿ ಬಂದ ನಾಲ್ಕು ಮಂದಿ ದುಷ್ಕರ್ಮಿಗಳು 80 ಗ್ರಾಂ ತೂಕದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದರು.
ಈ ಕುರಿತು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇನ್ಸ್ಪೆಕ್ಟರ್ ಸಾಧಿಕ್ ಪಾಷಾ ನೇತೃತ್ವದಲ್ಲಿ ಕಾರ್ಯಾಚರಣೆ ಆರಂಭಿಸಿದ ಪೊಲೀಸರು ಈ ಪ್ರಕರಣವಲ್ಲದೆ ಒಟ್ಟು 34 ಪ್ರಕರಣಗಳಲ್ಲಿ ಭಾಗಿಯಾಗಿದ್ದ ಐವರು ಆರೋಪೀಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತರನ್ನು ಸಯ್ಯದ್ ರಿಹ್ವಾನ್ (19 ವರ್ಷ), ಶಿವಕುಮಾರ್ (34 ವರ್ಷ), ಚಂದ್ರಶೇಖರ್ (44 ವರ್ಷ) (ಅಪ್ಪು 23 ವರ್ಷ) ಹಾಗೂ 17 ವರ್ಷದ ಅಪ್ರಾಪ್ತ ಬಾಲಕ ಎನ್ನಲಾಗಿದೆ.
ಕಳ್ಳನಾದ ಸಾಫ್ಟ್‌ವೇರ್ ಇಂಜಿನಿಯರ್..!
ಬಂಧಿತ ಆರೋಪಿ ಶಿವಕುಮಾರ್ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದು, ಈ ತನ ಮೇಲೆ ಹತ್ಯೆ ಸೇರಿದಂತೆ 32 ಪ್ರಕರಣಗಳು ಇವೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾರ್ಯಾಚರಣೆ
ಮೈಸೂರು ಪೊಲೀಸರು ಅಪ್ಪು ಎಂಬ ಆರೋಪಿಯನ್ನು ಬಂಧಿಸಿರುವ ಕುರಿತು ಮಾಹಿತಿ ತಿಳಿದು ಆತನ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ನೆಲಮಂಗಲ ಬಳಿ ನಾಲ್ವರು ಆರೋಪಿಗಳು ಕಾರಲ್ಲಿ ತೆರಳುತ್ತಿರುವುದು ತಿಳಿದು ಬಂದು, ಇನ್ಸ್ಪೆಕ್ಟರ್ ಸಾಧಿಕ್ ಪಾಷಾ ತಂಡ ಬಂಧಿಸಲು ಮುಂದಾದಾಗ ಅಪ್ರಾಪ್ತ ಬಾಲಕ ಸಿಕ್ಕಿಬಿದ್ದಿದ್ದು, ಉಳಿದ ಮೂವರು ಪರಾರಿಯಾಗಿದ್ದಾರೆ. ಈ ಕಾರ್ಯಾಚರಣೆಯಲ್ಲಿ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರಿಗೆ ಪೆಟ್ಟುಗಳಾಗಿತ್ತು ಎನ್ನಲಾಗಿದೆ.
ಇದನ್ನೂ ಓದಿ: Doddaballapura: ಮತ್ತೊಂದು ಅಪಘಾತ..! ರಸ್ತೆ ಬದಿ ಮಗುವಿನೊಂದಿಗೆ ಸಾಗುತ್ತಿದ್ದ ಮಹಿಳೆ ದುರ್ಮರಣ
ನಂತರ ಕಾರ್ಯಾಚರಣೆ ತೀವ್ರಗೊಳಿಸಿದ ಪೊಲೀಸರು ಆರೋಪಿಗಳಾದ ಸೈಯದ್ ರಿಹ್ವಾನ್, ಶಿವಕುಮಾರ್ ಹಾಗೂ ಚಂದ್ರಶೇಖರ್ ಅವರಿಗೆ ಕೋಳಾ ತೊಡಿಸಿದ್ದಲ್ಲದೆ, ಸೇಲಂನಲ್ಲಿ ಮಾರಾಟ ಮಾಡಿದ್ದ ಶೈಲಜ ಅವರ ಮಾಂಗಲ್ಯ ಸರವನ್ನು ವಾಪಸ್ಸು ತಂದು ಮರಳಿ ನೀಡಿದ್ದಾರೆ.